ಅಭಿಪ್ರಾಯ / ಸಲಹೆಗಳು

ಅಕ್ರಮ ಮರಳು ಕಳ್ಳತನ ಪ್ರಕರಣ .

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ 05-08-2021 ರಂದು ಕಳಸಾಪುರ ಗ್ರಾಮದ  ಹಿರೆಕೆರೆಯಲ್ಲಿ ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ಟ್ರಾಕ್ಟರ್ ನಲ್ಲಿ ತುಂಬುತ್ತಿದ್ದ  4 ಜನರಲ್ಲಿ ಇಬ್ಬರು ಆಸಾಮಿಗಳು ತಪ್ಪಿಸಿಕೊಂಡಿದ್ದು ಇನ್ನಿಬ್ಬರನ್ನು 1) ಶಿವಕುಮಾರ 2) ಕೃಷ್ಣಮೂರ್ತಿ ರವರನ್ನು ವಶಕ್ಕೆ ಪಡೆದು , ಸುಮಾರು 5000 ರೂ ಬೆಲೆಯ ಮರಳನ್ನು ಹಾಗೂ ಟ್ರಾಕ್ಟರ್ ನನ್ನು ವಶಕ್ಕೆ ಪಡೆದು ಆರೋಪಿತರ  ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಐ.ಸ್ವರ್ಣ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಪಘಾತ ಪ್ರಕರಣ.

ಸಂಚಾರ ಪೊಲೀಸ್ ಠಾಣೆ.

ದಿನಾಂಕ 05-08-2021 ರಂದು ರಾತ್ರಿ 21-45 ಗಂಟೆ ಸಮಯದಲ್ಲಿ ರೇಣುಕುಮಾರ್ ರವರು ಕೆಎ-18 ಇಎಫ್- 4297 ಬೈಕಿನಲ್ಲಿ ಚಿಕ್ಕಮಗಳೂರು ನಗರದ ಬಾಲಮಂದಿರದ ಹತ್ತಿರದ ರಸ್ತೆಯಲ್ಲಿ ಹೋಗುತ್ತಿರುವಾಗ ಕೆಎ-18 ಬಿ-7094 ಲಾರಿಯ ಚಾಲಕ ಲಾರಿಯನ್ನು ಅತಿವೇಗ ಹಾಗೂ ಅಜಾಗರೂಗತೆಯಿಂದ ಚಾಲನೆ ಮಾಡಿಕೊಂಡು ಬಂದು ರೇಣುಕುಮಾರ್ರವರು ಚಾಲನೆ ಮಾಡುತ್ತಿದ್ದ  ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ರೇಣುಕುಮಾರ್ ರವರಿಗೆ ಎದೆಗೆ, ತಲೆಗೆ ಪೆಟ್ಟಾಗಿದ್ದು ಲಾರಿ ಚಾಲಕನ ವಿರುದ್ದ ಕ್ರಮ ಕೈಗುಳ್ಳುವಂತೆ ನೀಡಿದ ದೂರಿನ ಮೇರೆಗೆ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ತರೀಕೆರೆ  ಪೊಲೀಸ್ ಠಾಣೆ.

ದಿನಾಂಕ 03-08-2021 ರಂದು ರಾತ್ರಿ 09-30  ಗಂಟೆ ಸಮಯದಲ್ಲಿ ಬಸವರಾಜಪ್ಪರವರು ತರೀಕೆರೆಯಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಬಾಬ್ತು ಕೆಎ-66 ಹೆಚ್ 7659 ಬೈಕಿನಲ್ಲಿ ಮನೆಗೆ ಹೋಗುತ್ತಿರುವಾಗತರೀಕೆರೆ ಆರ್ ಎಂಸಿ ಮಾರ್ಕೆಟ್ ಬಳಿ ಕೆಎ-01 ಎಜಿ-6895 ಗ್ಯಾಸ್ ಡ್ಯಾಂಕರ್ ಲಾರಿ ಚಾಲಕನು  ಲಾರಿಯನ್ನು ಅತಿವೇಗ ಹಾಗೂ ಅಜಾಗರೂಗತೆಯಿಂದ ಚಾಲನೆ ಮಾಡಿಕೊಂಡು ಬಂದು ಬಸವರಾಜಪ್ಪರವರು ಚಾಲನೆ ಮಾಡುತ್ತಿದ್ದ  ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಬಸವರಾಜಪ್ಪ ರವರಿಗೆ ಬೆನ್ನುಮೂಳೆಗೆ ,  ತಲೆಗೆ ಪೆಟ್ಟಾಗಿದ್ದು ಲಾರಿ ಚಾಲಕನ ವಿರುದ್ದ ಕ್ರಮ ಕೈಗುಳ್ಳುವಂತೆ ನೀಡಿದ ದೂರಿನ ಮೇರೆಗೆ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 06-08-2021 06:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080