ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಲಿಂಗದಹಳ್ಳಿ ಪೊಲೀಸ್ ಠಾಣೆ.

ದಿನಾಂಕ 06-01-2022 ರಂದು ಪಿರ್ಯಾದಿ ಶ್ರೀನಿವಾಸ ಜಿ.ಎಸ್. ಬಿನ್ ಶಂಕರಪ್ಪ ಜಿ.ಎಸ್ ರವರು ನೀಡಿದ  ದೂರಿನಲ್ಲಿ ದಿನಾಂಕ; 01/01/2022 ರಂದು ಪಿರ್ಯಾದಿ ಮಗ ಜಿತೇಂದ್ರ ರವರು ತಮ್ಮ ಬಾಬ್ತು ಬೈಕ್ ನಂ ಕೆಎ-66 ಹೆಚ್ 1182 ಬೈಕಿನಲ್ಲಿ ಲಿಂಗದಹಳ್ಳಿ-ಕಲ್ಲತ್ತಿಗಿರಿ ಠಾರು ರಸ್ತೆಯಲ್ಲಿ ಲಿಂಗದಹಳ್ಳಿ ಮಧು ರವರ ಜಮೀನಿನ ಹತ್ತಿರ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯಲ್ಲಿ ಬರುತ್ತಿರುವಾಗ ನಿಯಂತ್ರಣ ತಪ್ಪಿ ಬೈಕ್ ಸಮೇತ ಕೆಳಗೆ ಬಿದ್ದು ತಲೆಗೆ ಮೈ ಕೈಗೆ ರಕ್ತಗಾಯವಾಗಿದ್ದು  ಜಿತೇಂದ್ರನನ್ನು ಚಿಕಿತ್ಸೆಗೆ ಅಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾದೇ ದಿನಾಂಕ:06-01-2022 ರಂದು ಬೆಳಿಗ್ಗೆ ಮೃತಪಟ್ಟಿದ್ದು ಮುಂದಿನ ಕ್ರಮ ಕೈಗೊಳ್ಳಬೇಕಾಗಿ ಕೋರಿದ ದೂರಿನ ಮೇರೆಗೆ ಲಿಂಗದಹಳ್ಳಿ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

  ಕಳ್ಳತನ ಪ್ರಕರಣ

 ತರೀಕೆರೆ ಪೊಲೀಸ್ ಠಾಣೆ.

 ದಿನಾಂಕ 06-01-2022 ರಂದು ಪಿರ್ಯಾದಿ ನರಸಿಂಹಮೂರ್ತಿ ಸಹಾಯಕ ತೋಟಗಾರಿಕಾ ಅಧಿಕಾರಿರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು ಬೇಲೆನಹಳ್ಳಿ ಯಲ್ಲಿರುವ ತೋಟಗಾರಿಕಾ ಕೇಂದ್ರದಲ್ಲಿ ಕೃಷಿ ಚಟುವಟಿಕೆಗಳನ್ನು  ನಿರ್ವಹಿಸಲು ಇಲಾಖೆಯಿಂದ ಕಳೆ ಕತ್ತರಿಸುವ ಯಂತ್ರ ಸುಮಾರು 40,000/- ರೂ ಮೌಲ್ಯ ಮತ್ತು ಮರ ಕತ್ತರಿಸುವ ಯಂತ್ರ ಸುಮಾರು 29,900/- ರೂ ಮೌಲ್ಯದ ಯಂತ್ರೋಪಕರಣಗಳನ್ನು ಗೋದಾಮಿನಲ್ಲಿ ಇಟ್ಟು ದಿನಾಂಕ:30-12-2021 ರಂದು ಗೋದಾಮಿಗೆ ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ:06-01-2022 ರಂದು ಬಂದು ಗೋದಾಮಿ ಪರಿಶಿಲಿಸಲಾಗಿ ಗೋದಾಮಿನ ಬೀಗ ಹೊಡೆದಿದ್ದು ಗೋದಾಮಿ ನಲ್ಲಿ ಇಟ್ಟಿದ್ದ ಯಂತ್ರೋಪಕರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಯಂತ್ರೋಪಕರಣಗಳನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ;06-01-2022 ರಂದು ಪಿರ್ಯಾದಿ ಶ್ರೀಮತಿ ಶೋಭಾ ಕೊಂ ಉಮೇಶರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ಗಂಡ ಉಮೇಶ ರವರು ಬೇಲೂರು ರಸ್ತೆ ಬದಿಯಲ್ಲಿ ಒಂದು ಲಗೇಜ್ ಅಟೋದಲ್ಲಿ ಪಾಸ್ಟ್ ಪುಡ್ ಮಾಡಿಕೊಂಡಿದ್ದು, ದಿನಾಂಕ:07-12-2021 ರಂದು ಎಂದಿನಂತೆ ಬೆಳಿಗ್ಗೆ 6-00 ಗಂಟೆಗೆ ಆಟೋದಲ್ಲಿ ಕೆಲಸಕ್ಕೆಂದು ಹೋದವರು ರಾತ್ರಿಯದರೂ ಮತ್ತೆ ಮನೆಗೆ ಬರಲಿಲ್ಲ ನಂತರ ಎಲ್ಲ ಕಡೆ ಹುಡುಕಿದರು ತನ್ನ ಗಂಡ ಪತ್ತೆಯಾಗಿಲ್ಲವೆಂದು ಕಾಣೆಯಾಗಿದ್ದು  ಕಾಣೆಯಾಗಿರುವ ತನ್ನ ಗಂಡ ಉಮೇಶ ಇವರ ಚಹರೆ ಹೆಸರು;ಉಮೇಶ್ ತಂದೆ ಹೆಸರು ಲಕ್ಷ್ಮಣ  36 ವರ್ಷ, 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು  ಗುಂಗುರು ಕೂದಲು, ಉಬ್ಬು ಹಲ್ಲು ಕಪ್ಪು ಬಿಳಿ ಶರಟು , ನೀಲಿ ಜಿನ್ಸ್ ಪ್ಯಾಂಟು ಧರಿಸಿರುತ್ತಾರೆ. ಕಾಣೆಯಾಗಿರುವ ತನ್ನ ಗಂಡ ಉಮೇಶ ರವರನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಬೀರೂರು ಪೊಲೀಸ್ ಠಾಣೆ.

ದಿನಾಂಕ;05-01-2022 ರಂದು ಪಿರ್ಯಾದಿ ರಮೇಶ್ ಎಲ್.ಜಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ಹೆಂಡತಿ ಅಕ್ಷತಾ ದಿನಾಂಕ 30-12-2021 ರಂದು ಕಡ್ಲೂರಿನಿಂದ ಲಿಂಗ್ಲಾಪುರಕ್ಕೆ ಬರುವುದಾಗಿ ಹೇಳಿದವಳು ಮನೆಗೆ ಬಾರದೇ ಕಾಣೆಯಾಗಿದ್ದು ಈ ವರೆಗೂ ತಮ್ಮ ಹುಡುಕಾಡಿದ್ದು, ಪತ್ತೆ ಅಗದೆ ಇದ್ದು  ಹೆಂಡತಿಯವರ ಚಹರೆ 5 ಅಡಿ ಎತ್ತರವಿದ್ದು, ಎಣ್ಣೆಗೆಂಪು ಮೈ ಬಣ್ಣ ಕೋಲುಮುಖ, ಸಾಧಾರಣ ಮೈಕಟ್ಟು ನೀಲಿಬಣ್ಣದ ಟಾಪ್ ಬಿಳಿ ಬಣ್ಣದ ಪ್ಯಾಂಟ್ ಚೂಡಿದಾರ ಧರಿಸಿರುತ್ತಾರೆ.  ಕನ್ನಡ ಬಾಷೆ ಮಾತಾನಾಡುತ್ತಾರೆ ಕಾಣೆಯಾಗಿರುವ ತನ್ನ ಹೆಂಡತಿ ಅಕ್ಷತಾ ರವರನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಮಹಿಳಾ ಪೊಲೀಸ್ ಠಾಣೆ.

ದಿನಾಂಕ;05-01-2022 ರಂದು ಪಿರ್ಯಾದಿ ಮೊಹಮ್ಮದ್ ಸಾದಿಕ್ ಬಿನ್ ಗಯಾಸುದ್ದಿನ್  ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ಮಗಳು ಸುಹಾನ  ಪ್ರಥಮ ಬಿ.ಎ. ಓದುತ್ತಿದ್ದು ದಿನಾಂಕ:04-01-2022 ರಂದು ಬೆಳಿಗ್ಗೆ ಕಾಲೇಜಿಗೆ ಪರೀಕ್ಷೆ ಬರೆಯಲು ಹೋದವಳು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು  ಈ ವರೆಗೂ ಹುಡುಕಾಡಿದ್ದು ಪತ್ತೆ ಅಗದೆ ಇದ್ದು  ಕಾಣೆಯಾಗಿರುವ ಸುಹಾನ ಇವಳ  ಚಹರೆ ಕು.ಸುಹಾನ 21 ವರ್ಷ, 5.5 ಅಡಿ ಎತ್ತರ, ದುಂಡುಮುಖ, ಗೋದಿ ಮೈ ಬಣ್ಣ ಸಾಧಾರಣ ಮೈಕಟ್ಟು ಶರೀರ, ಎಂ.ಇ.ಎಸ್. ಕಾಲೇಜಿನ ಸಮವಸ್ತ್ರ ಧರಿಸಿರುತ್ತಾಳೆ. ಕಾಣೆಯಾಗಿರುವ ತನ್ನ ಮಗಳು ಕು. ಸುಹಾನ ರವರನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಇತ್ತೀಚಿನ ನವೀಕರಣ​ : 06-01-2022 07:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080