Feedback / Suggestions

ಅಕ್ರಮ ಮದ್ಯ ಮಾರಾಟ  ಪ್ರಕರಣ

ಸಿಂಗಟಗೆರೆ  ಪೊಲೀಸ್ ಠಾಣೆ.

ದಿನಾಂಕ:05-02-2022 ರಂದು ಸಿಂಗಟಗೆರೆ ಠಾಣಾ ಸರಹದ್ದಿನ ಚಟ್ನಹಳ್ಳಿ ಗ್ರಾಮದ ವಾಸಿ ಶಶಿಧರ .ಬಿ.ಜಿ. ಬಿನ್ ಗಂಗಾಧರಪ್ಪ   ಅಕ್ರಮವಾಗಿ ಅವರ ಮನೆಯ ಮುಂದೆ  ಮದ್ಯ ಮಾರಾಟ  ಮಾಡುತ್ತಿದ್ದು ಆರೋಪಿತನನ್ನು ವಶಕ್ಕೆ ಅರೋಪಿತನು ಅಕ್ರಮವಾಗಿ ಹೊಂದಿದ್ದ 180 ಎಂ.ಎಲ್. ನ 5 ಟೆಟ್ರಾಪ್ಯಾಕ್  ಮತ್ತು 90 ಎಂ.ಎಲ್. ನ 42 ಟೆಟ್ರಾಪ್ಯಾಕ್  ಮದ್ಯವನ್ನುಅಂದಾಜು ಬೆಲೆ 2057/- ರೂ ಅಗಿದ್ದು ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಫಿತನ ವಿರುದ್ದ ಸಿಂಗಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ ಲೀಲಾವತಿ  ಮತ್ತು  ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಕಡೂರು ಪೊಲೀಸ್ ಠಾಣೆ

ದಿನಾಂಕ:05-02-2022 ರಂದು ಕಡೂರು ಠಾಣಾ ಸರಹದ್ದಿನ ಚಿಕ್ಕಮಪಟ್ಟಣಗೆರೆ ಗೇಟ್ ಬಳಿ  ಸುನಿಲ ಸಿ.ಎಸ್. ಬಿನ್ ಸ್ವಾಮಿ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಆರೋಪಿತನನ್ನು ವಶಕ್ಕೆ ಅರೋಪಿತನು ಅಕ್ರಮವಾಗಿ ಹೊಂದಿದ್ದ 180 ಎಂ.ಎಲ್. ನ 7 ಟೆಟ್ರಾಪ್ಯಾಕ್  ಮತ್ತು 90 ಎಂ.ಎಲ್. ನ 20 ಟೆಟ್ರಾಪ್ಯಾಕ್ ಮದ್ಯವನ್ನು  ಅಂದಾಜು ಬೆಲೆ 1319/- ರೂ ಅಗಿದ್ದು ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಫಿತನ ವಿರುದ್ದ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ ರಮ್ಯ ಎನ್.ಕೆ.  ಮತ್ತು  ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮಟ್ಕಾ ಜೂಜಾಟ ಪ್ರಕರಣ

ಜಯಪುರ ಪೊಲೀಸ್ ಠಾಣೆ

ದಿನಾಂಕ:05-02-2022 ರಂದು ರಾತ್ರಿ ಜಯಪುರ ಠಾಣಾ ಸರಹದ್ದಿನ ಕುಂದೂರಿನ ಹುಂಚಮ್ಮ ದೇವಸ್ಥಾನದ ಹತ್ತಿರ ಸಾರ್ವಜನಿಕ ಜಾಗದಲ್ಲಿ ಮಟ್ಕಾ ಜೂಜಾಟ ಆಡಿಸುತ್ತಿದ್ದ ಸುಧಾಕರ ಕುಂದೂರು ವಾಸಿ ಈತನನ್ನು ವಶಕ್ಕೆ ಪಡೆದು ಆರೋಪಿತನು ಹೊಂದಿದ್ದ  780/- ರೂ ನಗದು ಹಣವನ್ನು ಒಂದು ಮಟ್ಕಾ ಚೀಟಿ ಮತ್ತು ಒಂದು ಬಾಲ್ ಪೆನ್ನು   ಅನ್ನು ಅಮಾನತ್ತು ಪಡಿಸಿಕೊಂಡು, ಬಂದು ಅರೋಫಿತನ ವಿರುದ್ದ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ ಜ್ಯೋತಿ ಎನ್.ಎ  ಮತ್ತು  ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಬೀರೂರು ಪೊಲೀಸ್ ಠಾಣೆ

ದಿನಾಂಕ 05-02-2022 ರಂದು ಬೀರೂರು ಅಜ್ಜಂಪುರ ರಸ್ತೆಯಲ್ಲಿರುವ ಮುನಾವರ್ ಬಿನ್ ಬಾಷಾ ಸಾಬ್   ರವರು ನೀಡಿದ ದೂರಿನಲ್ಲಿ ಪಿರುಆದಿಯ ಬಾಬ್ತು ಅಂಗಡಿಯನ್ನು ದಿನಾಂಕ 02/02/2022 ರಂದು ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ:05/02/2022 ರಂದು ನೋಡಿದಾಗ ಯಾರೋ ಕಳ್ಳರು ಅಂಗಡಿಯ ಬೀಗ ಹೊಡೆದು ಅಂಗಡಿಯಲ್ಲಿದ್ದ 8 ಸಬ್ ಮರ್ಸಿಬಲ್ ಮೋಟಾರ್, 09 ಸಬ್ ಮರ್ಸಿಬಲ್ ರೋಟರ್, 350 ಕೆ.ಜಿ ವೈಂಡಿಂಗ್ ವೈರ್ ಮತ್ತು 90 ಕೆ.ಜಿ ಕಾಫರ್ ವೈರ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು  ಇವುಗಳ ಅಂದಾಜು ಬೆಲೆ 1,45,000/- ರೂ ಗಳಾಗಿದ್ದು  ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಸ್ವತ್ತುಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Last Updated: 06-02-2022 01:22 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Chikkamagaluru District Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080