ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಕಡೂರು ಪೊಲೀಸ್ ಠಾಣೆ.

ದಿನಾಂಕ:06/04/2022 ರಂದು ಪಿರ್ಯಾದಿ ಶ್ರೀ ನಾಗೇಂದ್ರ ಬಿನ್ ಕನ್ನಯ್ಯ, ವಾಸ ಮಲ್ಲೇಶ್ವರ ಗ್ರಾಮ  ವಾಸಿ  ಇವರು ನೀಡಿದ ದೂರಿನಲ್ಲಿ ದಿನಾಂಕ:05/04/2022 ರಂದು ಪಿರ್ಯಾದಿಯ ಅಣ್ಣನಾದ ಧರ್ಮರಾಜ್ ಬಿನ್ ಕನ್ನಯ್ಯ ಇವರು ಕಡೂರು ನಿಂದ ಮಲ್ಲೇಶ್ವರ ಕಡೆಗೆ ಕೆಎ-18-ಇಇ-0689 ಬೈಕಿನಲ್ಲಿ ಬಿ.ಜಿ.ಎಸ್. ಶಾಲೆ ಹತ್ತಿರ ಬರುತ್ತಿರುವಾಗ ಮಲ್ಲೇಶ್ವರ ಕಡೆಯಿಂದ ಬಂದ ಕೆಎ-66-ಜೆ-4072 ರ ಬೈಕ್ ಸವಾರ ತನ್ನ ಬೈಕ್ ಅನ್ನು ಅತೀವೇಗ ಮತ್ತು ಅಜಾಗರುಕತೆಯಿಂದ  ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಧರ್ಮರಾಜ್ ರವರಿಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು,  ಚಿಕಿತ್ಸೆಗೆ ಅಸ್ಪತ್ರಗೆ ಸೇರಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾರೆ. ಅಪಘಾತ ಉಂಟು ಮಾಡಿದ ಕೆಎ-66-ಜೆ-4072 ರ ಬೈಕ್ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಲಕ್ಕವಳ್ಳಿ ಪೊಲೀಸ್ ಠಾಣೆ.

ದಿನಾಂಕ;05/04/2022 ರಂದು ಪಂಚನಹಳ್ಳಿ ಠಾಣಾ ಸರಹದ್ದಿನ ಉಪ್ಪಿನಹಳ್ಳಿ ಗ್ರಾಮದ ಕೆರೆಯ ಹಿಂಭಾಗದಲ್ಲಿ ಬೆಲಗೂರು ರಸ್ತೆಯಿಂದ ಜಮೀನಿಗೆ ಹೋಗುವ ದಾರಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅರೋಪಿತೆ ಶೀಲಾ ಕೋಂ ನಾಗರಾಜ್ ಸಿಂಗೇನಹಳ್ಳಿ ಬೋವಿ ಹಟ್ಟಿ, ಶ್ರೀರಾಂಪುರ ತಾಲ್ಲೊಕು ವಾಸಿ ಇವಳನ್ನು ವಶಕ್ಕೆ ಪಡೆದು, ಅರೋಫಿತಳು ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. 50 ಟೆಟ್ರಾಪ್ಯಾಕ್ ರಾಜಾ ವಿಸ್ಕಿ ಮದ್ಯವನ್ನು ಅಂದಾಜು ಬೆಲೆ 1756/- ರೂ ಅಗಿದ್ದು,  ಮದ್ಯವನ್ನು ಆಮಾನತ್ತುಪಡಿಸಿಕೊಂಡು ಬಂದು ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಜಿ.ಕೆ. ಪವಿತ್ರ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 06-04-2022 07:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080