ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ  ಪ್ರಕರಣ.

ತರೀಕೆರೆ  ಪೊಲೀಸ್ ಠಾಣೆ.

ದಿನಾಂಕ 06-05-2022 ರಂದು ವೀಣಾ ಕೋಂ ಲೇಟ್ ರಾಘವೇಂದ್ರ, ಪಂಚಕಲ್ಯಾಣ ರಸ್ತೆ, ತರೀಕೆರೆ ಟೌನ್ ವಾಸಿರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಮಗಳಾದ ದಿವ್ಯಶ್ರೀ, 26 ವರ್ಷ ಈಕೆಯು ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುವಾಗ ಮಾನಸಿಕ ಅಸ್ವಸ್ಥಳಾಗಿದ್ದರಿಂದ ಶಿವಮೊಗ್ಗದ ಮಾನಸ ಆಸ್ಪತ್ರೆಯಲ್ಲಿ ಅಂದಿನಿಂದಲೂ ಚಿಕಿತ್ಸೆ ಕೊಡಿಸುತ್ತಿದ್ದು , ದಿನಾಂಕ 05-05-2022 ರಂದು ಬೆಳಗ್ಗೆ 08-00 ಗಂಟೆ ಸಮಯದಲ್ಲಿ ಯಾರ ಗಮನಕ್ಕೂ ಬಾರದೆ ಮಾತ್ರೆಯ  ಕೈಚೀಲದೊಂದಿಗೆ  ಎಲ್ಲಿಗೋ ಹೋಗಿದ್ದ್ದು ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ದಿವ್ಯಶ್ರೀ ಬಿನ್ ಲೇಟ್ ರಾಘವೇಂದ್ರ,  26 ವರ್ಷ,    ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು. ಎತ್ತರ 5.2 ಅಡಿ, ಕನ್ನಡ ಬಾಷೆ ಮಾತಾನಾಡುತ್ತಾಳೆ.  ಕಾಣೆಯಾಗಿರುವ ನನ್ನ ಮಗಳಾದ ದಿವ್ಯಶ್ರೀಯನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ತರೀಕೆರೆ  ಪೊಲೀಸ್ ಠಾಣೆ.

ದಿನಾಂಕ 05-05-2022 ರಂದು ನಾಗರಾಜಬೋವಿ, ಯಳುಗೆರೆ ಗ್ರಾಮ ವಾಸಿರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರಿಗೆ 5 ಜನ ಮಕ್ಕಳಿದ್ದು .ಅದರಲ್ಲಿ 2 ನೇಯವಳಾದ ನಂದಿನಿ, 19 ವರ್ಷ ಈಕೆಯು ಕಡೂರಿನ ಕಾಮಧೇನು ನರ್ಸಿಂಗ್ ಕಾಲೇಜಿನಲ್ಲಿ  ಪ್ರಥಮ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದು , ಈಗ ಕಾಲೇಜಿಗೆ ರಜೆ ಇದ್ದುದ್ದರಿಂದ ಮನೆಯಲ್ಲಿಯೇ ಇದ್ದಳು. ದಿನಾಂಕ 03-05-2022 ರಂದು ಬೆಳಗ್ಗೆ 07-00 ಗಂಟೆಗೆ ಮನೆಯಲ್ಲಿ ಯಾರಿಗೂ ಹೇಳದೆ ಎಲ್ಲಿಗೋ ಹೋಗಿದ್ದ್ದು ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ನಂದಿನಿ. ವೈ.ಎನ್.19 ವರ್ಷ,  ಕೋಲು ಮುಖ, ಸಾಧಾರಣ ಮೈಕಟ್ಟು,  ಕಪ್ಪು ಕೂದಲು, ಕನ್ನಡ , ತೆಲುಗು ಬಾಷೆ ಮಾತಾನಾಡುತ್ತಾಳೆ.  ಕೆಂಪು ಬಣ್ಣದ ಟಾಪ್ ಕಪ್ಪು ಬಣ್ಣದ ಲೆಗ್ಗಿನ್ಸ್ ಧರಿಸುತ್ತಾಳೆ ಎಂದು ಕಾಣೆಯಾಗಿರುವ ನನ್ನ ಮಗಳಾದ ನಂದಿನಿಯನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ.

ಬಸವನಹಳ್ಳಿ  ಪೊಲೀಸ್ ಠಾಣೆ.

ದಿನಾಂಕ 05-05-2022 ರಂದು ರಾಘವೇಂದ್ರ, ಮಕ್ಕಾ ಮಸೀದಿ ರೋಡ್ ಹತ್ತಿರ , ವಿಜಯಪುರ ವಾಸಿರವರು ನೀಡಿದ ದೂರೇನೆಂದರೆ ದಿನಾಂಕ 04-05-2022 ರಂದು ರಾತ್ರಿ ಗೋಬಿ ಅಂಗಡಿಯಲ್ಲಿ ಕೆಲಸ ಮುಗಿಸಿಕೊಂಡು ನನ್ನ ಬಾಬ್ತು ಕೆಎ-20 ಇಹೆಚ್ - 5414 ಬೈಕಿನಲ್ಲಿ ಮನೆಗೆ ಬಂದು ಬೈಕ್ ನ್ನು ಮನೆಯ ಮುಂಭಾಗದಲ್ಲಿ ನಿಲ್ಲಿಸಿ ಮನೆಗೆ ಹೋಗಿದ್ದು , ದಿನಾಂಕ 05-05-2022 ರಂದು ಬೆಳಿಗ್ಗೆ ಎದ್ದು ಮನೆಯ ಮುಂದೆ ಬಂದು ನೋಡಿದಾಗ ನಾನು ನಿಲ್ಲಿಸಿದ್ದ ಬೈಕ್ ಇರುವುದಿಲ್ಲ. ಕೆಎ-20 ಇಹೆಚ್ - 5414 ನಂಬರಿನ  ಬೈಕ್ ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನವಾಗಿರುವ ಬೈಕ್ ನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 06-05-2022 06:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080