ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಕಡೂರು ಪೊಲೀಸ್ ಠಾಣೆ.

ದಿನಾಂಕ;06/06/2022 ರಂದು ಪಿರ್ಯಾದಿ ತಿಮ್ಮಯ್ಯ ಬಿನ್ ಲೇಟ್ ಹನುಮಯ್ಯ, ಮಲ್ಲಿದೇವಿಹಳ್ಳಿ ಗ್ರಾಮ ಕಡೂರು ವಾಸಿ ಇವರು ನೀಡಿದ ದೂರಿನಲ್ಲಿ, ದಿನಾಂಕ;05/06/2022 ರಂದು ರಾತ್ರಿ ಪಿರ್ಯಾದಿಯ ಚಿಕ್ಕಪ್ಪನ ಮಗ ಮಂಜುನಾಥ ಈತನು ತನ್ನ ಬಾಬ್ತು ಕೆಎ-18-ಬಿ-1648 ರ ಆಟೋದಲ್ಲಿ ಕಡೂರಿಗೆ ವೆಂಕಟೇಶ್ವರ ಕಲ್ಯಾಣ ಮಂಟಪಕ್ಕೆ ಬಂದು, ವಾಪಾಸ್ ಮಲ್ಲಿದೇವಿಹಳ್ಳಿಗೆ ಹೋಗುತ್ತಿರುವಾಗ, ಕಡೂರು ಪಟ್ಟಣದ ಎನ್. ಹೆಚ್. 206 ರಸ್ತೆಯಲ್ಲಿ ಮರವಂಜಿ ಸರ್ಕಲ್ ಬಳಿ ಆಟೋವನ್ನು ಅತೀವೇಗ ಮತ್ತು ಅಜಾಗರೂತೆಯಿಂದ ಚಾಲನೆ ಮಾಡಿಕೊಂಡು ಬಂದು, ರಸ್ತೆಯ ಡಿವೈಡರ್ ಮೇಲೆ ಹತ್ತಿಸಿ ಆಟೋ ಪಲ್ಟಿಯಾಗಿ ಆಟೋದಲ್ಲಿದ್ದ ಸೌಭಾಗ್ಯ ಇವರಿಗೆ ತಲೆಗೆ ಮೈಕೈಗೆ ಮತ್ತು ಚಂದನಗೆ ತಲೆಗೆ ಪೆಟ್ಟಾಗಿರುತ್ತೆ. ಸೌಭಾಗ್ಯ  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಕೆಎ-18-ಬಿ-1648 ರ ಆಟೋ ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ.

ಬೀರೂರು ಪೊಲೀಸ್ ಠಾಣೆ.

ದಿನಾಂಕ;06/06/2022 ರಂದು ಪಿರ್ಯಾದಿ ಜಗದೀಶ್ ಬಿನ್ ಲೇಟ್ ಕೃಷ್ಣಮೂರ್ತಿ, ದೇವರಾಜ್ ಅರಸ್ ಬಡಾವಣೆ ಚಿಕ್ಕಮಗಳೂರು ರವರು ನೀಡಿದ ದೂರಿನಲ್ಲಿ, ದಿನಾಂಕ;05/06/2022 ರಂದು ರಾತ್ರಿ ಪಿರ್ಯಾದಿಯ ಅಣ್ಣ ಮಂಜುನಾಥ ದೇವರಹಳ್ಳಿ ಬಳಿ ಜಮೀನಿಗೆ ಹೋಗಿ ವಾಪಾಸ್ಸು ಬೀರೂರಿಗೆ ಬರಲು ನಡೆದುಕೊಂಡು ಬರುತ್ತಿರುವಾಗ ಕೆಎ-18-ಡಬ್ಲೂ-4675 ರ ಬೈಕಿನ ಚಾಲಕ ರಂಜಿತ್ ಬೈಕನ್ನು ಅತೀವೇಗ ಮತ್ತು ಅಜಾಗರೂತೆಯಿಂದ ಚಾಲನೆ ಮಾಡಿಕೊಂಡು ಮಂಜುನಾಥ ರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ  ಮಂಜುನಾಥರವರಿಗೆ ಕಾಲು, ಮುಖ, ತಲೆಗೆ ಪೆಟ್ಟಾಗಿದ್ದು, ಚಿಕಿತ್ಸೆಗೆ ಅಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಕೆಎ-18-ಡಬ್ಲೂ-4675 ರ ಬೈಕಿನ ಚಾಲಕ ರಂಜಿತ್  ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಗಾಂಜಾ ಮಾರಾಟ ಪ್ರಕರಣಗಳು

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ:06/06/2022 ರಂದು ಅಜ್ಜಂಪುರ ಠಾಣಾ ಸರಹದ್ದಿನ ಬುಕ್ಕಾಂಬೂದಿ ಕೆರೆ ಹತ್ತಿರ ಅಕ್ರಮವಾಗಿ ಗಾಂಜಾ ಸೊಪ್ಪನ್ನು ಮಾರಾಟ ಮಾಡುತ್ತಿದ್ದ ಆರೋಫಿತರಾದ 1. ಮಹಮ್ಮದ್ ಸುಹೇಲ್ @ ಇಲಾಹಿ ಬಿನ್ ನೌಷದ್ ವಾಸ ಮಾಕನಹಳ್ಳಿ, ಅಜ್ಜಂಪುರ. 2] ರೋಷನ್ ಖಾನ್  ಬಿನ್ ಶಬೀರ್ ಖಾನ್ ವಾಸ ಕೋಡಿ ಕ್ಯಾಂಪ್, ತರೀಕೆರೆ, ಸದರಿ ಅಸಾಮಿಯನ್ನು ವಶಕ್ಕೆ ಪಡೆದು ಸದರಿ ಯವರು ಅಕ್ರಮವಾಗಿ ಹೊಂದಿದ್ದ 1 ಕೆ.ಜಿ. 545 ಗ್ರಾಂ ಗಾಂಜಾ ಅಂದಾಜು ಬೆಲೆ 15,100 ರೂ ಗಳಾಗಿದ್ದು ಗಾಂಜಾಸೊಪ್ಪನ್ನು ಅಮಾನತ್ತುಪಡಿಸಿಕೊಂಡು, ಅರೋಫಿತರ ವಿರುದ್ದ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಅಜ್ಜಂಪುರ ಠಾಣಾ ಪಿ.ಐ ಲಿಂಗರಾಜ್ ಹೆಚ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ. 

ಇತ್ತೀಚಿನ ನವೀಕರಣ​ : 06-06-2022 07:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080