ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ.

ಅಜ್ಜಂಫುರ ಪೊಲೀಸ್ ಠಾಣೆ.

ದಿನಾಂಕ 05-11-2021 ರಂದು ಅಜ್ಜಂಫುರ ಠಾಣಾ ಸರಹದ್ದಿನ ಅರಬಲ ಗ್ರಾಮದ ಉಮೇಶಪ್ಪ ಬಿನ್ ಕರಿಯಪ್ಪ ರವರು ತಮ್ಮ ದಿನಸಿ ಅಂಗಡಿಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಫಿಯು ದಾಳಿ ವೇಳೆ ತಪ್ಪಿಸಿಕೊಂಡು ಓಡಿ ಹೋಗಿದ್ದು  ಆರೋಪಿ  ಬಳಿಯಿದ್ದ 90 ಎಂ.ಎಲ್. 10 ರಾಜಾ ವಿಸ್ಕಿಯ ಟೆಟ್ರಾಪ್ಯಾಕ್ ಮದ್ಯವನ್ನು ಮತ್ತು 70 ರೂ ನಗದು ಹಣವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 355/-ರೂ  ಆಗಿದ್ದು, ಆರೋಪಿಯ ವಿರುದ್ದ  ಅಜ್ಜಂಫುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಅಜ್ಜಂಪುರ ಪಿ..ಐ, ಶ್ರೀ ಲಿಂಗರಾಜು ಹೆಚ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ.

ನಗರ ಪೊಲೀಸ್ ಠಾಣೆ.

ದಿನಾಂಕ 05-11-2021 ರಂದು ಸಂಜೆ 5.00 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ನಗರದ ಸಂತೆ ಮೈದಾನದಲ್ಲಿ  ಅಕ್ರಮವಾಗಿ ಇಸ್ಪೀಟ್ ಜೂಜಾಟ ಅಡುತ್ತಿದ್ದ  ಆರೋಪಿತರಾದ 1. ಮೆಹಬೂಬ್ ಪಾಷ ಬಿನ್ ಲೇಟ್ ಶಬ್ಬೀರ್ ಅಲಿ ಸಾಬ್  2. ಅಮೀರ್ ಖಾನ್ ಬಿನ್ ಲೇಟ್ ಜಲೀಲ್ ಅಹಮ್ಮದ್ 3. ಮಾಜೀದ್ ಬಿನ್ ಮೊಹ್ಮದ್ ಶಫಿ 4. ಮೌಸಿನ್ ಖಾನ್ ಬಿನ್ ಇಸ್ಮಾಯಿಲ್ ರವರನ್ನು ವಶಕ್ಕೆ ಪಡೆದು  ಆರೋಪಿತರು ಇಸ್ಪೀಟ್ ಆಡಲು ಉಪಯೋಗಿಸಿದ  52 ಇಸ್ಪೀಟ್ ಎಲೆಗಳು, ಒಂದು ಟಾರ್ಪಲ್, ಹಾಗೂ 2780/- ರೂ   ನಗದು ಹಣವನ್ನು ವಶಕ್ಕೆ ಪಡೆದು, ಆರೋಪಿತರ ವಿರುದ್ದ  ನಗರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ನಗರ ಪಿ ಎಸ್.ಐ, ಶ್ರೀ  ದೇವರಾಜ್. ಎಸ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

 ಕಳ್ಳತನ ಪ್ರಕರಣ

 ಮೂಡಿಗೆರೆ ಪೊಲೀಸ್ ಠಾಣೆ

ದಿನಾಂಕ;06-11-2021 ರಂದು ಮೂಡಿಗೆರೆ ಠಾಣಾ ಸರಹದ್ದಿನ ಮೂಡಿಗೆರೆ ಟೌನ್ ಛತ್ರಮೈದಾನ ವಾಸಿ ಜಿಯಾವುಲ್ಲಾ ಬಿನ್ ಲೇಟ್ ಅಬ್ದುಲ್ ರಹೀಂ ರವರು ನೀಡಿದ ದೂರಿನಲ್ಲಿ ದಿನಾಂಕ:03-11-2021 ರಂದು ಪಿರ್ಯಾದಿಯವರು ಮನೆಗೆ ಬೀಗ ಹಾಕಿಕೊಂಡು ಹಾಸನಗೆ ಹೋಗಿದ್ದು, ದಿನಾಂಕ;05-11-2021 ರಂದು ವಾಪಸ್ಸು ಬಂದು ಮನೆಯನ್ನು ನೋಡಿದಾಗ ಮನೆಯ ಹಿಂಬಾಗಿಲನ್ನು ಯಾರೋ ಕಳ್ಳರು ಬಾಗಿಲು ಮೀಟಿ ತೆಗೆದು ಮನೆಯ ಗಾಡ್ರೆಜ್ ಬೀರುವಿನಲ್ಲಿ 6 ಪ್ಲಾಸ್ಟಿಕ್ ಗೋಲಕದ ಡಬ್ಬದಲ್ಲಿದ್ದ 20,000/- ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ನಗದು ಹಣವನ್ನು  ಕೊಡಿಸಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಅಜ್ಜಂಪುರ ಪೊಲೀಸ್ ಠಾಣೆ

ದಿನಾಂಕ;06-11-2021 ರಂದು  ಶ್ರೀಮತಿ ಸಜೀಲಾ ಭಾನು ಕೋಂ ಸುಭಾನ್ ವಾಸ ಬಿಲ್ಲಹಳ್ಳಿ ಶಿವನಿ ಹೋಬಳಿ ರವರು ನೀಡಿದ ದೂರಿನಲ್ಲಿ ತನ್ನ ಗಂಡ ಸೈಯದ್ ಸುಭಾನ್  ರವರು ದಿನಾಂಕ:09-07-2021 ರಂದು ಬಿಲ್ಲಹಳ್ಳಿಯಿಂದ ಕೂಲಿ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೋದವರು ಈ ವರೆಗೂ ವಾಪಾಸ್ಸು ಬಂದಿರುವುದಿಲ್ಲ.  ಎಲ್ಲಾ ಕಡೆ ಹುಡುಕಿದರೂ ಸಹ ಪತ್ತೆಯಾಗಿಲ್ಲವೆಂದು  ಕಾಣೆಯಾಗಿರುವ ತನ್ನ ಗಂಡ ಸೈಯದ್ ಸುಭಾನ್   ಬಿನ್ ಅಲ್ಲಾಭಕ್ಷಿ, 24 ವರ್ಷ , ಕೂಲಿಕೆಲಸ , 5 ಅಡಿ 2 ಇಂಚು ಎತ್ತರ, ಗೋದಿ ಮೈಬಣ್ಣ, ತೆಳುವಾದ ಶರೀರ , ಬೂದು ಬಣ್ಣದ ಟೀ ಶರ್ಟ್ ನೀಲಿ ಬಣ್ಣದ ಜಿನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ ಮತ್ತು ಉರ್ದು ಬಾಷೆ ಮಾತಾನಾಡುತ್ತಾರೆ. ಇವರನ್ನು ಪತ್ತೆ ಮಾಡಿ ಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಅಜ್ಜಂಫುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ಇತ್ತೀಚಿನ ನವೀಕರಣ​ : 06-11-2021 05:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080