ಅಭಿಪ್ರಾಯ / ಸಲಹೆಗಳು

ರಸ್ತೆ  ಅಪಘಾತ  ಪ್ರಕರಣ.

ಅಜ್ಜಂಫುರ ಪೊಲೀಸ್ ಠಾಣೆ.

ದಿನಾಂಕ: 05-12-2021 ರಂದು  ಅಜ್ಜಂಪುರ ಪೊಲೀಸ್ ಠಾಣಾ ಸರಹದ್ದಿನ ಹಣ್ಣೆ ಗ್ರಾಮದ ವಾಸಿ ಹೆಚ್.ಆರ್. ರಾಜಪ್ಪ  ರವರು ನೀಡಿದ ದೂರಿನಲ್ಲಿ ದಿನಾಂಕ:05-12-2021 ರಂದು ಪಿರ್ಯಾದಿಯವರ ತಮ್ಮ ಹೆಚ್.ಆರ್. ರುದ್ರಪ್ಪ ಇವರು ತನ್ನ ಬಾಬ್ತು ಕೆಎ-18-ಇಬಿ-1119 ಟಿವಿಎಸ್ ಬೈಕಿನಲ್ಲಿ ಹೆಂಡತಿ ಕವಿತಾ ರವರೊಂದಿಗೆ ಕೆಲಸದ ನಿಮಿತ್ತಾ ಅಜ್ಜಂಫುರಕ್ಕೆ ಬಂದು ವಾಪಸ್ಸು ಊರಿಗೆ ಹೋಗುವಾಗ  ಅತ್ತಿಮೊಗ್ಗೆ ಕ್ರಾಸ್ ಬಳಿ ನನ್ನ ತಮ್ಮ ಬೈಕ್ ಅನ್ನು ಜೋರಾಗಿ ಓಡಿಸಿಕೊಂಡು ಬಂದಿದ್ದು ತಿರುವಿನಲ್ಲಿ ರಸ್ತೆಯಲ್ಲಿ ಹೆಗೋ ಅಯತಪ್ಪಿ ಕೆಳಗೆ ಬಿದ್ದು ಬೈಕಿನಲ್ಲಿದ್ದ ಹೆಂಡಿತಿ ಕವಿತಾ ರವರಿಗೆ ತಲೆಯ ಹಿಂಭಾಗಕ್ಕೆ ಪೆಟ್ಟು ಬಿದ್ದು ಚಿಕಿತ್ಸೆಗೆ ಅಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಕವಿತಾ ಮೃತಪಟ್ಟಿದ್ದು, ಬೈಕ್ ಚಾಲನೆ ಮಾಡಿ ಅಪಘಾತಪಡಿಸಿದ್ದ ರುದ್ರಪ್ಪರವರ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ  ಪ್ರಕರಣ.

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ:06-12-2021 ರಂದು ಸಖರಾಯಪಟ್ಟಣ ಪೊಲೀಸ್ ಠಾಣಾ ಸರಹದ್ದಿನ ಸಿರಬಡಿಗೆ ಗ್ರಾಮದ ವಾಸಿ ಶ್ರೀಮತಿ ಶಶಿಕಲಾ ಇವರು ನೀಡಿದ ದೂರಿನಲ್ಲಿ ದಿನಾಂಕ:05-12-2021 ರಂದು ಪಿರ್ಯಾದಿಯವರ ಮಗಳು ಕಾವ್ಯ ರಾತ್ರ್ರಿ ಮನೆಯಲ್ಲಿ ಇದ್ದವಳು ಬೆಳಿಗ್ಗೆ ನೋಡಿದಾಗ ಮನೆಯಿಂದ ಮನೆಯಲ್ಲಿ ಇರುವುದಿಲ್ಲ್ಲ, ಇವರನ್ನು ಎಲ್ಲಾ ಕಡೆ ಹುಡುಕಾಡಿದರೂ ಸಹ ಈ ವರೆಗೆ ಸಿಕ್ಕಿರುವುದಿಲ್ಲ ವೆಂದು ಕಾಣೆಯಾಗಿರುವ ತಮ್ಮ ಮಗಳು ಕಾವ್ಯ ಚಹರೆ 25 ವರ್ಷ, ಸಾದಾರಣ ಮೈ ಕಟ್ಟು, ಎಣ್ಣೆಗೆಂಪು ಮೈ ಬಣ್ಣ, 4.5 ಅಡಿ ಎತ್ತರ ಇರುತ್ತಾಳೆ. ಕನ್ನಡ & ಇಂಗ್ಲೀಷ್ ಭಾಷೆ ಮಾತಾನಾಡುತ್ತಾಳೆ. ನೀಲಿ ಬಣ್ಣದ ಪ್ಯಾಂಟ್  ಮತ್ತು ಕಪ್ಪು ಬಣ್ಣದ ಟಾಪ್ ಧರಿಸಿರುತ್ತಾಳೆ. ಕಾಣೆಯಾಗಿರುವ  ಕಾವ್ಯಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ.

ಪಂಚನಹಳ್ಳಿ  ಪೊಲೀಸ್ ಠಾಣೆ.

ದಿನಾಂಕ:06-12-2021 ರಂದು ಪಂಚನಹಳ್ಳಿ ಠಾಣಾ ಸರಹದ್ದಿನ  ಬೆಟ್ಟೇನಹಳ್ಳಿ  ಗ್ರಾಮದ ಕೆರೆಯ ಹತ್ತಿರದ ರಸ್ತೆಯಲ್ಲಿ ಕುಮಾರ್ ಎನ್.ಆರ್. ಬಿನ್ ರುದ್ರಪ್ಪ ಎಂಬುವರು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಫಿಯನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 90 ಎಂ.ಎಲ್. 44 ಟೆಟ್ರಾಪ್ಯಾಕ್ ಮದ್ಯವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 1543/-ರೂ ಆಗಿದ್ದು, ಆರೋಪಿ ವಿರುದ್ದ ಪಂಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಂಚನಹಳ್ಳಿ ಠಾಣಾ ಪಿ.ಎಸ್.ಐ. ಜಿ.ಕೆ. ಪವಿತ್ರ ಹಾಗೂ ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಗಾಂಜಾ ಮಾರಾಟ ಪ್ರಕರಣ.

ತರೀಕೆರೆ  ಪೊಲೀಸ್ ಠಾಣೆ.

ದಿನಾಂಕ:06-12-2021 ರಂದು ತರೀಕೆರೆ ಠಾಣಾ ಸರಹದ್ದಿನ  ಲಿಂಗದಹಳ್ಳಿ ರಸ್ತೆಯ ಭದ್ರಾ ಚಾನಲ್  ಹತ್ತಿರದ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಅಸಾಮಿಗಳು ಅಕ್ರಮವಾಗಿ ಬೈಕಿನಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದು, ಆರೋಫಿ ಮಧು ವೈ.ಜೆ. ಬಿನ್ ಲೇಟ್ ಜಯಣ್ಣ ನನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 3.5 ಕೆ.ಜಿ ಗಾಂಜಾವನ್ನು ಮತ್ತು ಕೆಎ.66 ಇ-9315 ಬೈಕ್ ನ್ನು ವಶಕ್ಕೆ ಪಡೆದುಕೊಂಡಿದ್ದು ವಶಪಡಿಸಿಕೊಂಡ ಗಾಂಜಾದ  ಅಂದಾಜು ಬೆಲೆ 30000/-ರೂ ಆಗಿದ್ದು, ಆರೋಪಿ ದಿಲೀಪ ಎಂಬುವನು ಓಡಿ ಹೋಗಿರುತ್ತಾನೆ. ಆರೋಪಿಗಳ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ತರೀಕೆರೆ ಠಾಣಾ ಪಿ.ಎಸ್.ಐ. ಕೃಷ್ಣನಾಯ್ಕ ಹಾಗೂ ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 06-12-2021 08:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080