ಅಭಿಪ್ರಾಯ / ಸಲಹೆಗಳು

ಮರಳು ಕಳ್ಳತನ ಪ್ರಕರಣ

ಗೋಣಿಬೀಡು  ಪೊಲೀಸ್ ಠಾಣೆ

ದಿನಾಂಕ 07/06/2021 ರಂದು ಗೋಣಿಬೀಡು ಠಾಣಾ ಸರಹದ್ದಿನ ಅಂಗಡಿ ಗ್ರಾಮದಲ್ಲಿ  ಯಾರೋ ಒಬ್ಬ ಆಸಾಮಿಯು ಹೇಮಾವತಿ ಹೊಳೆಯಲ್ಲಿ ಅಕ್ರಮವಾಗಿ ಮರಳನ್ನು  ತುಂಬಿಕೊಂಡು ಜನ್ನಾಪುರ ಕಡೆಗೆ ಸಾಗಣೆ ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಉಗ್ಗೇಹಳ್ಳಿ ಬಸ್ ನಿಲ್ದಾಣದಿಂದ ಸ್ವಲ್ಪ ಹಿಂಭಾಗದಲ್ಲಿ ಒಬ್ಬ ಆಸಾಮಿಯು ಟ್ರಾಕ್ಟರ್ನಲ್ಲಿ ಮರಳನ್ನು ತುಂಬಿಸಿಕೊಂಡು ಬರುತ್ತಿದ್ದು , ನಮ್ಮಗಳನ್ನು ನೋಡಿ ಟ್ರಾಕ್ಟರ್ ನ್ನು ಬಿಟ್ಟು ಓಡಿ ಹೋಗಿರುತ್ತಾನೆ. ಟ್ರಾಕ್ಟರ್ ನ್ನು ಪರಿಶೀಲಿಸಲಾಗಿ ಕೆಎ-18 ಟಿ-694 ನಂಬರಿನ ಕೆಂಪು ಬಣ್ಣದ ಟ್ರಾಕ್ಟರ್ ಆಗಿದ್ದು ಇಂಜಿನ್ ನಂಬರ್ ಇರುವುದಿಲ್ಲ ಮರಳಿನ ಅಂದಾಜು ಬೆಲೆ 1750/-ರೂ ಆಗಿರುತ್ತೆ.  ಸರ್ಕಾರವು  ಸ್ವತ್ತಾದ ಮರಳನ್ನು ಯಾವುದೇ ಪರವಾನಗಿ ಇಲ್ಲದೆ ಕಳ್ಳತನದಿಂದ ಸಂಗ್ರಹಿಸಿ ಸಾಗಾಟ ಮಾಡುತ್ತಿರುವುದು  ಕಂಡುಬಂದಿದ್ದರಿಂದ  ಆರೋಪಿ ವಿರುದ್ದ ಗೋಣಿಬೀಡು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿಎಸ್ಐ. ಶ್ರೀಮತಿ.ಗಾಯಿತ್ರಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರ

ಅಕ್ರಮ ಮದ್ಯ ಮಾರಾಟ ಪ್ರಕರಣ .

ಆಲ್ದೂರು ಪೊಲೀಸ್ ಠಾಣೆ.

ದಿನಾಂಕ 06/06/2021 ರಂದು ಸತ್ತಿಹಳ್ಳಿ ಗ್ರಾಮದ  ಅಂಬೇಡ್ಕರ್ ನಗರದ ವಾಸಿ ಸುಮಂತ್ ಎಂಬುವವರು ತಮ್ಮ ಮನೆಯ ಎದುರುಗಡೆ ಇರುವ ಸಂದೇಶ್ ರವರ ಮನೆಯ ಮುಂದೆ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ಆರೋಪಿತನಾದ ಸುಮಂತ್  ನಮ್ಮಗಳನ್ನು ನೋಡಿ ಓಡಿಹೋಗಿದ್ದು ಆತನು ಬಿಟ್ಟುಹೋಗಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ 90 ಎಂ.ಎಲ್.ನ  ಹೈವರ್ಡ್ಸ ವಿಸ್ಕಿಯ 80  ಮದ್ಯದ ಪೌಚ್ ಗಳು ಹಾಗೂ 90 ಎಂ.ಎಲ್ ನ ತ್ರಿಬಲ್ ಎಕ್ಸ್ ರಮ್ನ  25 ಮದ್ಯದಪೌಚ್ಗಳಿದ್ದು, ಮದ್ಯದ ಅಂದಾಜು ಬೆಲೆ 4138 /- ರೂ ಅಗಿದ್ದು ,ಆರೋಪಿತನಾದ ಸುಮಂತ್  ವಿರುದ್ದ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿಎಸ್ಐ. ಶ್ರೀಮತಿ. ಶಿವರುದ್ರಮ್ಮ   ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

 

ಅಕ್ರಮ ಮದ್ಯ ಮಾರಾಟ ಹಾಗೂ ಕೊವಿಡ್-19 ನಿಯಮ ಉಲ್ಲಂಘನೆ ಪ್ರಕರಣ

ಬಣಕಲ್   ಪೊಲೀಸ್ ಠಾಣೆ.

ದಿನಾಂಕ 06/06/2021 ರಂದು ಬಾಳೂರು ಠಾಣಾ ಸರಹದ್ದಿನಲ್ಲಿ ಗಸ್ತು ಮಾಡುತ್ತಿರುವಾಗ ಕನ್ನಗೆರೆ   ಗ್ರಾಮದ ವಾಸಿಯಾದ  ಶ್ರೀಧರ್  ಎಂಬುವವರು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಬಂದ ಮಾಹಿತಿ  ಮೇರೆಗೆ ದಾಳಿ ನಡೆಸಿದ್ದು ಆರೋಪಿಯನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ  ಪ್ಲಾಸ್ಟಿಕ್ ಬಾಟಲಿಗಳನ್ನು ಪರಿಶೀಲಿಸಲಾಗಿ 90 ಎಂ.ಎಲ್ ನ ಓರಿಜಿನಲ್  ಮಾರ್ಟಿನ್ ವಿಸ್ಕಿಯ 18 ಪೌಚ್ಗಳು ಹಾಗೂ 90 ಎಂ.ಎಲ್ ನ ಹೈವೆ ಡಿಲೆಕ್ಸ್ ವಿಸ್ಕಿಯ 15 ಪೌಚ್ಗಳಿದ್ದು ,ಒಟ್ಟು ಮದ್ಯದ ಅಂದಾಜು ಬೆಲೆ 1052 /- ರೂ ಆಗಿರುತ್ತೆ .ಮದ್ಯ ಮಾರಾಟದಿಂದ ಬಂದ ನಗದು ಹಣ 180 ರೂ ಅನ್ನು ವಶಕ್ಕೆ ಪಡೆದಿರುತ್ತೆ. ಕೊವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಹೊಂದದೆ, ಸಾರ್ವಜನಿಕರನ್ನು ಗುಂಪುಸೇರಿಸಿಕೊಂಡು ಅಕ್ರಮವಾಗಿ ಮದ್ಯವನ್ನು  ಮಾರಾಟ ಮಾಡುತ್ತಿದ್ದ  ಆರೋಪಿತನ   ವಿರುದ್ದ ಬಣಕಲ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿಎಸ್ಐ ಶ್ರೀನಾಥರೆಡ್ಡಿ .ವಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಬಣಕಲ್   ಪೊಲೀಸ್ ಠಾಣೆ.

ದಿನಾಂಕ 06/06/2021 ರಂದು ಬಾಳೂರು ಠಾಣಾ ಸರಹದ್ದಿನಲ್ಲಿ ಗಸ್ತು ಮಾಡುತ್ತಿರುವಾಗ ಪಟ್ಟದೂರು  ಗ್ರಾಮದ ವಾಸಿಯಾದ  ಭದ್ರೇಗೌಡ  ಎಂಬುವವರು ತಮ್ಮ ದಿನಸಿ ಅಂಗಡಿ ಮುಂಭಾಗದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಬಂದ ಮಾಹಿತಿ  ಮೇರೆಗೆ ದಾಳಿ ನಡೆಸಿದ್ದು ಆರೋಪಿಯನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ  ಪ್ಲಾಸ್ಟಿಕ್ ಬಾಟಲಿಗಳನ್ನು ಪರಿಶೀಲಿಸಲಾಗಿ, 180 ಎಂ.ಎಲ್ ನ ಕ್ಯಾಪ್ಟನ್ ಮಾರ್ಟಿನ್ ಸ್ಪಷಲ್ ವಿಸ್ಕಿಯ 4 ಪೌಚ್ ಗಳು , 180 ಎಂ.ಎಲ್ ನ ಓಲ್ಡ್ ತವೆರಿನ್ ವಿಸ್ಕಿಯ 5 ಪೌಚ್ಗಳು  ಹಾಗೂ 180 ಎಂ.ಎಲ್ ನ ಬೆಂಗಳೂರು ಚಾಯ್ಸ್ ವಿಸ್ಕಿಯ 9 ಪೌಚ್ ಗಳಿದ್ದು, ಮದ್ಯದ ಅಂದಾಜು ಬೆಲೆ 1218 /ರೂ ಆಗಿರುತ್ತೆ. ಮದ್ಯ ಮಾರಾಟದಿಂದ ಬಂದ 220 ರೂ ನಗದು ಹಣವನ್ನು ವಶಕ್ಕೆ ಪಡೆದಿರುತ್ತೆ. ಕೊವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಹೊಂದದೆ, ಸಾರ್ವಜನಿಕರನ್ನು ಗುಂಪುಸೇರಿಸಿಕೊಂಡು ಅಕ್ರಮವಾಗಿ ಮದ್ಯವನ್ನು  ಮಾರಾಟ ಮಾಡುತ್ತಿದ್ದ  ಆರೋಪಿತನ ವಿರುದ್ದ ಬಣಕಲ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿಎಸ್ಐ ಶ್ರೀನಾಥರೆಡ್ಡಿ .ವಿ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಲಕ್ಕವಳ್ಳಿ   ಪೊಲೀಸ್ ಠಾಣೆ.

ದಿನಾಂಕ 06/06/2021 ರಂದು ಲಕ್ಕವಳ್ಳಿ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡುತ್ತಿರುವಾಗ ಎಂ.ಎನ್.ಕ್ಯಾಂಪ್ ಮುಂಬಾಗದ ರಸ್ತೆಯಲ್ಲಿ ಒಬ್ಬ ಆಸಾಮಿಯು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಬಂದ ಮಾಹಿತಿ  ಮೇರೆಗೆ ದಾಳಿ ನಡೆಸಿದ್ದು ಆರೋಪಿಯನ್ನು ವಶಕ್ಕೆ ಪಡೆದು ಆತನಹೆಸರು ಗೋಪಾಲಕೃಷ್ಣ ಬಿನ್ ಮುನಿಸ್ವಾಮಿ, ಶಿವಮೊಗ್ಗ ವಾಸಿಯಾಗಿದ್ದು  ಆತನ  ಬಳಿಯಿದ್ದ  ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ 90 ಎಂ.ಎಲ್,ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ 88 ಟೆಟ್ರಾ ಪೌಚ್ ಗಳಿದ್ದು ಮದ್ಯದ ಅಂದಾಜು 3080 ರೂ ಆಗಿರುತ್ತೆ. ಕೊವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಹೊಂದದೆ, ಸಾರ್ವಜನಿಕರನ್ನು ಗುಂಪುಸೇರಿಸಿಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ  ಆರೋಪಿತನ ವಿರುದ್ದ ಲಕ್ಕವಳ್ಳಿ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿಎಸ್ಐ. ಮೇಘ .ಟಿ.ಎನ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಜೂಜಾಟ  ಹಾಗೂ ಕೊವಿಡ್-19 ನಿಯಮ ಉಲ್ಲಂಘನೆ ಪ್ರಕರಣ

ಅಜ್ಜಂಪುರ   ಪೊಲೀಸ್ ಠಾಣೆ

ದಿನಾಂಕ 06/06/2021 ರಂದು ಅಜ್ಜಂಪುರ ಠಾಣಾ ಸರಹದ್ದಿನ ಅನುವನಹಳ್ಳಿ ತೋಟಗಳಿಗೆ ಹೋಗುವ ಬಂಡಿ ದಾರಿಯಲ್ಲಿ ಬೇವಿನಮರದ ಕೆಳಗೆ  ಸಾರ್ವಜನಿಕ ರಸ್ತೆಯಲ್ಲಿ  ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಅನುವನಹಳ್ಳಿ ತೋಟಗಳಿಗೆ ಹೋಗುವ ಬಂಡಿ ದಾರಿಯಲ್ಲಿ ಬೇವಿನಮರದ ಕೆಳಗೆ  ಸಾರ್ವಜನಿಕ ರಸ್ತೆಯಲ್ಲಿ ಸರ್ಕಾರವು ಕೊವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ 2 ಕ್ಕಿಂತ ಹೆಚ್ಚು ಜನರು ಒಂದು ಕಡೆ ಸೇರದಂತೆ ಆದೇಶಮಾಡಿದ್ದರೂ ಸಹ ಅಕ್ರಮವಾಗಿ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ 6 ಜನ ಆರೋಪಿಗಳ ಮೇಲೆ ದಾಳಿ ಮಾಡಿದ್ದು ಅದರಲ್ಲಿ 1)ತಿಪ್ಪೇಶ 2) ರಮೇಶ 3)ಶೇಖರ 4)ಮಹೇಶ 5) ತಿಪ್ಪೇಶಪ್ಪರವರುಗಳನ್ನು ವಶಕ್ಕೆ ಪಡೆದಿದ್ದು , ಅದರಲ್ಲಿ ಒಬ್ಬ ಆಸಾಮಿಯು  ಓಡಿಹೋಗಿರುತ್ತಾರೆ. ಆತನ ಹೆಸರು ಓಂಕಾರ ಎಂದು ತಿಳಿದಿರುತ್ತೆ. ಆರೋಪಿತರುಗಳ ವಶದಲ್ಲಿದ್ದ ಒಂದು ಬಿಳಿಬಣ್ಣದ ಟಾರ್ಪಲ್ .52 ಇಸ್ಪೀಟ್ ಎಲೆಗಳು ಹಾಗೂ12,900 /-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿಎಸ್ಐ. ತಿಪ್ಪೇಶ್. ಡಿ.ವಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮೂಡಿಗೆರೆ   ಪೊಲೀಸ್ ಠಾಣೆ

ದಿನಾಂಕ 06/06/2021 ರಂದು ಮೂಡಿಗೆರೆ  ಠಾಣಾ ಸರಹದ್ದಿನಲ್ಲಿ ರೌಂಡ್ಸ್ ನಲ್ಲಿದ್ದಾಗ ಮೂಡಿಗೆರೆ ಪಟ್ಟಣದ ಬಿಳುಗುಳ ಗ್ರಾಮದ ವಿವೇಕಾನಂದ ನಗರದ ಅಂಬೇಡ್ಕರ್ ಶಾಲೆಯ ಕಾಂಪೌಂಡ್ ಒಳಗೆ ಸಾರ್ವಜನಿಕ ಸ್ಥಳದಲ್ಲಿ ಸುಮಾರು ಐದರಿಂದ ಆರು ಜನರು   ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ವಿವೇಕಾನಂದ ನಗರದ ಅಂಬೇಡ್ಕರ್ ಶಾಲೆಯ ಕಾಂಪೌಂಡ್ ಒಳಗೆ ಸಾರ್ವಜನಿಕ ಸ್ಥಳದಲ್ಲಿ,್ಲ  ಕರ್ನಾಟಕ  ಸರ್ಕಾರವು ಕೊವಿಡ್ -19 ಸಾಂಕ್ರಾಮಿಕ ರೋಗ ಹರಡದಂತೆ 2 ಕ್ಕಿಂತ ಹೆಚ್ಚು ಜನರು ಒಂದು ಕಡೆ ಸೇರದಂತೆ ಆದೇಶಮಾಡಿದ್ದರೂ ಸಹ ಅಕ್ರಮವಾಗಿ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ್ಲ 1)ಪಕೀರ 2)ಪ್ರತಾಪಶೆಟ್ಟಿ 3) ಸುದೀಪ 4) ಯೋಗೀಶ 5)ಸುಂದರ್ 6) ಗಿರೀಶರವರುಗಳನ್ನು ವಶಕ್ಕೆ ಪಡೆದಿದ್ದು ,ಆರೋಪಿತರುಗಳ ವಶದಲ್ಲಿದ್ದ ಒಂದು ನೀಲಿ ಬಣ್ಣದ ಪ್ಲಾಸ್ಟಿಕ್ ಕವರ್ ,52 ಇಸ್ಪೀಟ್ ಎಲೆಗಳು ಹಾಗೂ 7,630 /-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ   ಪಿಎಸ್ಐ. ರವಿ.ಜಿ.ಎ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 25-06-2021 06:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080