ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ

ಪಂಚನಹಳ್ಳಿ ಪೊಲೀಸ್ ಠಾಣೆ

ದಿನಾಂಕ 07/07/2021 ರಂದು ಪಂಚನಹಳ್ಳಿ ಠಾಣಾ ಸರಹದ್ದಿನ ಎಂ. ಕೋಡಿಹಳ್ಳಿ ಗ್ರಾಮದ ಹತ್ತಿರ ರಾಮಾಜಿನಾಯ್ಕ ಬಿನ್ ತುಳಜಾನಾಯ್ಕ  ರವರ ಜಮೀನಿನ ಹತ್ತಿರದ ರಸ್ತೆಯಲ್ಲಿ  ಚೌಡಪ್ಪ ಬಿನ್ ದೊಡ್ಡಯ್ಯ ಎಂಬುವನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಆರೋಪಿಯು ಅಕ್ರಮ ಮಾರಾಟ ಮಾಡುತ್ತಿದ್ದ ಸುಮಾರು 1440/- ರೂ ಬೆಲೆಬಾಳುವ 90 ಎಂ.ಎಲ್. ನ 41 ಪೌಚ್ ರಾಜಾ ವಿಸ್ಕಿಯ ಪ್ಯಾಕೇಟ್ ಗಳನ್ನು ಅಮಾನತ್ತುಪಡಿಸಿಕೊಂಡು ಬಂದು ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ ಕೆ. ಶೋಭಾ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಪಂಚನಹಳ್ಳಿ ಪೊಲೀಸ್ ಠಾಣೆ

ದಿನಾಂಕ 07/07/2021 ರಂದು ಪಂಚನಹಳ್ಳಿ ಠಾಣಾ ಸರಹದ್ದಿನ ಎಂ. ಕೋಡಿಹಳ್ಳಿ ಗ್ರಾಮದ ಅರಳೀ ಮರದ ಹತ್ತಿರ   ಚಂದ್ರಪ್ಪ ಕೆ.ಆರ್. ಬಿನ್ ರಾಜಶೇಖರ  ಎಂಬುವನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಆರೋಪಿಯು ಅಕ್ರಮ ಮಾರಾಟ ಮಾಡುತ್ತಿದ್ದ ಸುಮಾರು 2002/- ರೂ ಬೆಲೆಬಾಳುವ 90 ಎಂ.ಎಲ್.ನ 57 ಪೌಚ್ ರಾಜಾ ವಿಸ್ಕಿಯ ಪ್ಯಾಕೇಟ್ ಗಳನ್ನು ಅಮಾನತ್ತುಪಡಿಸಿಕೊಂಡು ಬಂದು ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ ಕೆ. ಶೋಭಾ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ.

ನಗರ ಪೊಲೀಸ್ ಠಾಣೆ.

      ದಿನಾಂಕ 07/07/2021 ರಂದು 17.30 ಗಂಟೆಗೆ ಪಿರ್ಯಾದಿ ಬಸವರಾಜ್ ಸಿ ಜಿ ಬಿನ್ ಲೇಟ್ ಗಂಗಣ್ಣ  ರವರು ನೀಡಿದ ದೂರಿನಲ್ಲಿ ದಿನಾಂಕ 25.06.2021 ರಂದು ರಾತ್ರಿ 8.00 ಗಂಟೆಯ ಸಮಯದಲ್ಲಿ ಹೊರಗಿನಿಂದ ಊಟ ತೆಗೆದುಕೊಂಡು ಬಂದು ಎಂದಿನಂತೆ ಸಕರ್ಾರಿ ಎಂ.ಜಿ. ಅಸ್ಪತ್ರೆಯ ಅವರಣದಲ್ಲಿ ಪಿರ್ಯಾದಿ ಮಗ ಯೋಗೀಶನ ಬಾಬ್ತು ಸ್ಕೂಟರನ್ನು ನಿಲ್ಲಿಸಿದ್ದು ದಿನಾಂಕ 26.06.2021 ರಂದು ಬೆಳಿಗ್ಗೆ 7.00 ಗಂಟೆಯ ಸಮಯದಲ್ಲಿ ಪಿರ್ಯಾದಿ ಸ್ಕೂಟರನ್ನು ನಿಲ್ಲಿಸಿದ್ದ ಜಾಗದಲ್ಲಿ ನೋಡಲಾಗಿ ಅಲ್ಲಿ ಸ್ಕೂಟರ್ ಇರಲಿಲ್ಲ, ಸದರಿ ಬೈಕ್ ನ್ನು ಯಾರೋ ಕಳ್ಳರು ಇಂಜಿನ್ ನಂ ಜಿಎಫ್. 50 ಈಟಿ 1112219 ಮತ್ತು ಚಾಸೀಸ್ ನಂ ಎಂ.ಈ. 4 ಜಿಎಫ್ 502ಈಈಟಿ11632 ಅಗಿರುತ್ತದೆ ಕಳುವಾಗಿರುವ ಬೈಕ್ ಬೆಲೆ 30,000/- ರೂ ಗಳಾಗಿದ್ದು ಕಳುವಾಗಿರುವ ಸ್ಕೂಟರ್ ಅನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಕಳ್ಳತನ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ;06/07/2021ರಂದು ಚಿಕ್ಕಮಗಳೂರು ನಗರದ ಜ್ಯೋತಿ ನಗರದ ಎ.ಪಿ.ಎಂ.ಸಿ. ಎದುರಿನ ವಾಸಿಯಾದ ಪಿರ್ಯಾದಿ ನಿಂಗಪ್ಪ ಬಿನ್ ದೇವೆಂದ್ರಪ್ಪ ಅಗಸರ ರವರು ನೀಡಿದ ದೂರಿನಲ್ಲಿ ದಿನಾಂಕ:03/07/2021 ರಂದು ಮನೆಗೆ ಬೀಗ ಹಾಕಿಕೊಂಡು ಹೊಗಿದ್ದು, ದಿನಾಂಕ:06/07/2021ರಂದು ವಾಪಾಸ್ಸು ಬಂದು ಮನೆಯನ್ನು ನೋಡಿದಾಗ ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಯರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದು ಒಳ ಪ್ರವೇಶಿಸಿ ತನ್ನ ರೂಮಿನ ಗ್ರಾಡ್ರೇಜ್ ಬೀರನ್ನು ಅಲ್ಲೇ ಇಟ್ಟಿದ್ದ ಕೀಯಿಂದ ತೆಗೆದು ಅದರಲ್ಲಿ ಇಟ್ಟಿದ್ದ 20 ಗ್ರಾಂ ಚಿನ್ನದ ಸರವನ್ನು ಅಂದಾಜು ಬೆಲೆ 6,00,000/- ರೂ ಹಾಗೂ 200 ಗ್ರಾಂನ  2ಬೆಳ್ಳಿ ಲೋಟ, 50 ಗ್ರಾಂ ನ ಬೆಳ್ಳಿಯ ಬಟ್ಟಲು 30 ಗ್ರಾಂ ಚಮಕ , 40 ಗ್ರಾಂನ 2 ಬೆಳ್ಳಿಯ ದೀಪಗಳು ಒಟ್ಟು 320 ಗ್ರಾಂ ತೂಕದ ಅಂದಾಜು 13,000 ಬೆಲೆ ಹಾಗೂ ಒದು ಸೋನಾಟ ವಾಚ್ ಬೆಲೆ 3000/- ರೂ ನ ವಸ್ತುಗಳು ಕಳ್ಳತನವಾಗಿದ್ದು ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಮಹಿಳಾ ಪೊಲೀಸ್ ಠಾಣೆ.

  ದಿನಾಂಕ:06/07/2021 ರಂದು ಪಿರ್ಯಾಧಿ ಶ್ರೀಮತಿ ಗೀತಾ ಲೋಬೋ ಕೊಂ ಅನೀರ್ ಲೋಬೋ ರವರು ಹಾಲೇನಹಳ್ಳಿ ವಾಸಿ ರವರು ನೀಡಿದ ದೂರಿನಲ್ಲಿ ದಿನಾಂಕ 5/07/2021 ರಂದು ರಾತ್ರಿ ಪಿರ್ಯಾದಿಯ ಮಗಳೂ ಮನೆಯಲ್ಲಿ ಇದ್ದು ದಿನಾಂಕ 06/07/2021 ರಂದು ಬೆಳಿಗ್ಗೆ ಎದ್ದು ನೋಡಲಾಗಿ ಪಿರ್ಯಾದಿಯವರ ಮಗಳು ಕು: ಸೌಮ್ಯ ಲೋಬೋ ಮನೆಯಲ್ಲಿ ಇಲ್ಲದೆ ಕಾಣೆಯಾಗಿದ್ದು, ಎಲ್ಲಾ ಕಡೆಗೂ ಹುಡುಕಿದರೂ ಪತ್ತೆ ಅಗದೆ ಇದ್ದು ಕಣೆಯಾಗಿರುವ ತನ್ನ ಮಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರ

ಇತ್ತೀಚಿನ ನವೀಕರಣ​ : 07-07-2021 07:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080