ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಕರಣ.

ಬಸವನಹಳ್ಳಿ ಪೊಲೀಸ್ ಠಾಣೆ.

ಪಿರ್ಯಾದುದಾರರಾದ ಚೇತನ್ ರವರ ದೊಡ್ಡಮ್ಮ ಭಾಗ್ಯಮ್ಮರವರು ಅಲ್ಲಂಪುರ ಗ್ರಾಮದಲ್ಲಿ ಒಬ್ಬರೇ ವಾಸವಾಗಿದ್ದು , ವಿವಾಹವಾಗಿರುವುದಿಲ್ಲ, ಪಿರ್ಯಾದಿರವರ ಅಜ್ಜ- ಅಜ್ಜಿರವರಿಗೆ ಅಲ್ಲಂಪುರ ಹಾಗೂ ಅರಳಗುಪ್ಪೆಯಲ್ಲಿ 5 ಎಕರೆ ಜಮೀನಿದ್ದು  ಚಿಕ್ಕಮಗಳೂರು ನ್ಯಾಯಾಲಯದಲ್ಲಿ ಪಿರ್ಯಾದಿರವರ ತಾಯಿ ಮಂಜುಳ, ಭಾಗ್ಯಮ್ಮ ಹಾಗೂ ದಿವಂಗತ ಶ್ರೀಮತಿ, ಪಾರ್ವತಮ್ಮರವರಿಗೂ ಆಸ್ತಿಯಲ್ಲಿ ಪಾಲು ಕೊಡಬೇಕೆಂದು ಆದೇಶವಾಗಿರುತ್ತೆ. ಪಿರ್ಯಾದಿಯ ಮಾವ ದೊಡ್ಡಯ್ಯನ ಮಗ ವೆಂಕಟೇಶನು ಭಾಗ್ಯಮ್ಮರವರು ಮದುವೆಯಾಗದ ಕಾರಣ ಅವರಿಗೆ ಆಸ್ತಿಯಲ್ಲಿ ಪಾಲು ಕೊಡುವುದಿಲ್ಲವೆಂದು ಬೆಂಗಳೂರು ಹೈಕೋರ್ರ್ಟ ನಲ್ಲಿ ಕೇಸು ಹಾಕಿದ್ದು ಭಾಗ್ಯಮ್ಮರವರು ಬದುಕಿದ್ದರೆ ಅವರ ಪಾಲಿಗೆ ಬರುವ  ಆಸ್ತಿ ಸಿಗುವುದಿಲ್ಲವೆಂದು ದಿನಾಂಕ; 07-08-2021 ರಂದು ಬೆಳಿಗ್ಗೆ 06-00 ಗಂಟೆ ಸಮಯದಲ್ಲಿ ವೆಂಕಟೇಶನು ಭಾಗ್ಯಮ್ಮರವರೊಂದಿಗೆ ಜಗಳ ತೆಗೆದು ಕುತ್ತಿಗೆ ಮುರಿದು ಕೊಲೆ ಮಾಡಿದ್ದು ವೆಂಕಟೇಶನ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದದೂರಿನ ಮೇರೆಗೆ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  

ಹೆಂಗಸು ಕಾಣೆ ಪ್ರಕರಣ.

ಬಾಳೆಹೊನ್ನೂರು ಪೊಲೀಸ್ ಠಾಣೆ.

ಪಿರ್ಯಾದುದಾರರಾದ ಬಾಬುರವರ ಹೆಂಡತಿ ಸವಿತಾರವರು ಈಗ್ಗೆ 6 ವರ್ಷದಿಂದ ಮಾನಸಿಕ ರೋಗಿಯಾಗಿದ್ದು, ಈಗ್ಗೆ 7 ತಿಂಗಳಿಂದ  ಚಿಕಿತ್ಸೆಗಾಗಿ ಪರಿಚಯಸ್ಥರ ಮನೆಯಾದ  ಬಾಳೆಹೊನ್ನೂರಿನ ಅನುಪಮಾ ಆಳ್ವಾರವರ ಮನೆಯಲ್ಲಿ ಬಿಟ್ಟಿದ್ದು , ದಿನಾಂಕ 06-08-2021 ರಂದು ಮದ್ಯಾಹ್ನ 01-00 ಗಂಟೆ ಸಮಯದಲ್ಲಿ ಅನುಪಮಾರವರ ಮನೆಯಿಂದ ಸವಿತಾರವರು ಕಾಣೆಯಾಗಿದ್ದು ,ನೆಂಟರಿಷ್ಠರ, ಪರಿಚಯಸ್ಥರ ಮನೆಗಳಲ್ಲಿ ಹುಡುಕಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ, ಆದ್ದರಿಂದ ಕಾಣೆಯಾಗಿರುವ ಸವಿತಾರವರನ್ನು ಪತ್ತೆಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಜೂಜಾಟ  ಪ್ರಕರಣ

ಗೋಣಿಬೀಡು ಪೊಲೀಸ್ ಠಾಣೆ

ದಿನಾಂಕ 05/08/2021 ರಂದು ದೋಣಕಲ್ಲು ಗ್ರಾಮದ ರಮೇಶ್ ರವರ ಮನೆಯ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ  ಹಣವನ್ನು ಪಣವಾಗಿಟ್ಟುಕೊಂಡು ಅಕ್ರಮವಾಗಿ ಜೂಜಾಡುತ್ತಿದ್ದ 8 ಜನರಲ್ಲಿ 4 ಜನರು ಓಡಿಹೋಗಿದ್ದು , 4 ಜನರನ್ನು  ವಶಕ್ಕೆ ಪಡೆದು ಆರೋಪಿಗಳ ವಶದಲ್ಲಿದ್ದ 52 ಇಸ್ಪೀಟ್ ಎಲೆಗಳು, ಒಂದು ಬೆಡ್ ಶೀಟ್, ಒಂದು ಮೇಣದ ಬತ್ತಿ  ಹಾಗೂ 2100/- ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ  ಗೋಣಿಬೀಡು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ಧನಂಜಯ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ವಂಚನೆ ಹಾಗೂ ಸೈಬರ್ ಕ್ರೈಂ ಪ್ರಕರಣ.

ಸಿ,ಇ.ಎನ್ ಪೊಲೀಸ್ ಠಾಣೆ.

ಪಿರ್ಯಾದುದಾರರಾದ ಮಂಜಿತ್ಪಾಲ್, ತರೀಕೆರೆ ಟೌನ್ ರವರು ಪೇಟಿಯಮ್ ಆಪ್ ಮೂಲಕ ಒಂದು ಪೇಟಿಯಂ ಸೌಂಡ್ ಬಾಕ್ಸ್ ನ್ನು ಆರ್ಡರ್ ಮಾಡಿ 299 ರೂಗೆ ಬುಕ್ ಮಾಡಿದ್ದು , 10 ದಿನಗಳ ನಂತರ ಪೇಟಿಯಂ ಸೌಂಡ್ ಬಾಕ್ಸ್ ಬಂದಿದ್ದು , ದಿನಾಂಕ 01-08-2021 ರಂದು ಮೊಬೈಲ್ ನಿಂದ ರವರಿಗೆ ಕರೆ ಬಂದಿದ್ದು  ಪೇಟಿಯಂ ಸೌಂಡ್ ಬಾಕ್ಸ್ನ್ನು ಆಕ್ಟೀವ್ ಮಾಡಲು ಪೇ ಟಿಯಂ ಆಪ್ ನಿಂದ ಸೌಂಡ್ ಬಾಕ್ಸ್ ಬಾರ್ ಕೋಡ್ ಗೆ ಸ್ಕಾನ್ ಮಾಢಿ 121 ರೂ ಹಾಕುವಂತೆ ಹೇಳಿದಾಗ ಅದರಂತೆ ಮಾಡಿದಾಗ ಕ್ರೆಡಿಟ್ ಕಾರ್ಡ್ ನಂಬರ್  ದಿಂದ ಒಟ್ಟು 59,266 ರೂ ಹಾಗೂ ಹೆಚ್,ಡಿ.ಎಫ್.ಸಿ ಬ್ಯಾಂಕ್ ಖಾತೆಯಿಂದಲೂ 15,609 ರೂ ಕಟಾವು ಆಗಿರುತ್ತೆ, ರವರನ್ನು ನಂಬಿಸಿ ಮೋಸ ಮಾಡಿ ಅವರ ಖಾತೆಯಿಂದ ಹಣವನ್ನು ಡ್ರಾ ಮಾಡಿದವರನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಸಿ,ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಸಿ,ಇ.ಎನ್ ಪೊಲೀಸ್ ಠಾಣೆ.

ದಿನಾಂಕ06-08-2021 ರಂದು ರಂಗಪ್ಪರವರು ಓಲಾಕ್ಸ್ ನಲ್ಲಿ ಸೆಕೆಂಡ್ಹ್ಯಾಂಡ್ ಬೈಕನ್ನು ತೆಗೆದುಕೊಳ್ಳಲೆಂದು ಮೊಬೈಲ್ ನಂಬರ್ ಗೆ ಕರೆ ಮಾಡಿದ್ದು , ನಂತರ ಮೊಬೈಲ್ ನಂಬರ್ನಿಂದ ಕರೆ ಮಾಡಿ ಬೈಕನ್ನು ಡಿಲೆವರಿಗೆ ಕೊಡಲು ನಾವಿಗೇಷನ್ ಚಾರ್ಜ್ ಹಾಗೂ ಬೈಕನ್ನು ಕೊಡುತ್ತೇವೆಂದು ಒಟ್ಟು 25,000 ರೂ ಹಣವನ್ನು ಅಕೌಂಟ್ ನಂಬರ್ ಗೆ ಹಾಕಿಸಿಕೊಂಡು ಬೈಕನ್ನು ನೀಡದೆ ವಂಚಿಸಿ ಮೋಸ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಸಿ,ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 07-08-2021 06:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080