ಅಭಿಪ್ರಾಯ / ಸಲಹೆಗಳು

ಕಳ್ಳತನ ಪ್ರಕರಣ

 ತರೀಕೆರೆ ಪೊಲೀಸ್ ಠಾಣೆ.

 ದಿನಾಂಕ:06-01-2022 ರಂದು ಪಿರ್ಯಾದಿ ಟಿ.ಆರ್.ಹೇಮಂತ್ ಗೌರಿ ಕಾಲುವೆ, ಚಿಕ್ಕಮಗಳೂರು ನಗರ ವಾಸಿ  ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು ದಿನಾಂಕ 29-12-2021 ರಂದು ಮನೆಗೆ ಬೀಗ ಹಾಕಿಕೊಂಡು ಕಾಫಿ ತೋಟದ ಕೆಲಸ ಮಾಡಿಸಲು ಕುಂದೂರು ಗ್ರಾಮಕ್ಕೆ ಹೋಗಿದ್ದು ನಂತರ ದಿನಾಂಕ 06-01-2022 ರಂದು ವಾಪಾಸ್ಸು ಬಂದು ನೋಡಲಾಗಿ ಮನೆಗೆ ಡೋರ್ ಲಾಕ್ ನ್ನು ಯಾರೋ ಕಳ್ಳರು ಮನೆಯ ಒಳ ಪ್ರವೇಶಿಸಿ ಮನೆಯ ದೇವರ ಕೋಣೆಯಲ್ಲಿದ್ದ ಬೆಳ್ಳಿಯ ಅರಿಶಿನ ಕುಂಕುಮ ಬಟ್ಟಲು ಮತ್ತು ತಟ್ಟೆ ಅಂದಾಜು ಬೆಲೆ 8,000/- ರೂ ಹಾಗೂ ನಗದು ಹಣ 3,000/- ರೂ ವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಬೆಳ್ಳಿಯ ಬಟ್ಟಲು, ತಟ್ಟೆ ಹಾಗೂ ನಗದು ಹಣವನ್ನು  ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಲಿಂಗದಹಳ್ಳಿ  ಪೊಲೀಸ್ ಠಾಣೆ.

ದಿನಾಂಕ; 07-01-2022 ರಂದು ಪಿರ್ಯಾದಿ ಕಲ್ಲೇಶಪ್ಪ ಬಿನ್ ಶಂಕರಪ್ಪ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ನಾದಿನಿ ಮೋಹನ ಕುಮಾರಿ @ ಮಾನಸ ರವರು ದಿನಾಂಕ:06-01-2022 ರಂದು ದೋರನಾಳು ಗ್ರಾಮದ ಚಂದ್ರಣ್ಣರವರ ಮನೆ ಕೆಲಸಕ್ಕೆ ಹೋದವಳು ಕೆಲಸ ಮುಗಿಸಿ ಮನೆಗೆ ಬಾರದೇ ಎಲ್ಲಿಗೋ ಹೋಗಿರುತ್ತಾಳೆ . ಮೋಹನ ಕುಮಾರಿ ಯನ್ನು ಈವರೆಗೂ  ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ನಾದಿನಿ ಮೋಹನ ಕುಮಾರಿ @ ಮಾನಸ ರವರನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 07-01-2022 06:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080