ಅಭಿಪ್ರಾಯ / ಸಲಹೆಗಳು

ಸರ್ಕಾರಿ ನೌಕರರ ಮೇಲೆ ಹಲ್ಲೆ ಪ್ರಕರಣ.

ಬೀರೂರು ಪೊಲೀಸ್ ಠಾಣೆ.

ದಿನಾಂಕ:07.03.2022 ರಂದು ಕುಡ್ಲೂರು ಗ್ರಾಮ ಪಂಚಾಯಿತಿ ಪಿಡಿಓ ಕೆ. ಕುಮಾರ್ ರವರು ನೀಡಿದ ದೂರಿನಲ್ಲಿ ಪಿರ್ಯಾಧಿಯವರು ದಿನಾಂಕ:07.03.2022 ರಂದು ಕುಡ್ಲೂರು ಗ್ರಾಮದಲ್ಲಿ ಸರ್ಕಾರಿ ಚಪ್ಪಡಿ ಚರಂಡಿಯಲ್ಲಿದ್ದ ಚಪ್ಪಡಿ ಕಲ್ಲುಗಳನ್ನು ತೆಗೆಯುತ್ತಾರೆ ಎಂಬ ದೂರಿನ ಮೆರೆಗೆ ಸಾರ್ವಜನಿಕರಿಗೆ ಚಪ್ಪಡಿ ಕಲ್ಲು ತೆಗೆಯಬೇಡಿ ಎಂದು ತಿಳುವಳೀಕೆ ನೀಡುವ ವೇಳೆಯಲ್ಲಿ ಗ್ರಾಮದ ವಾಸಿಗಳಾದ ನಾಗರಾಜ ಬಿನ್ ರಂಗಪ್ಪ ಮತ್ತು ರವಿ ಬಿನ್ ಕೆಂಚಪ್ಪ  ಇವರು ಪಿರ್ಯಾದಿ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿಯವರ ಕೊರಳ ಪಟ್ಟಿ ಹಿಡಿದು ಕೈಯಿಂದ ಎದೆಗೆ ಮತ್ತು ತಲೆಗೆ ಕೈ ಯಿಂದ ಹೊಡೆದು ತಳ್ಳಾಡಿರುತ್ತಾರೆ. ಪಿರ್ಯಾದಿಯ ಕನ್ನಡಕವು ಹೊಡೆದು ಹೋಗಿದ್ದು ಸರ್ಕಾರಿ ಕೆಲಸಕ್ಕೆ ಅಡ್ಡಿ ಉಂಟು ಮಾಡಿದ ನಾಗರಾಜ ಮತ್ತು ರವಿ ಎಂಬುವರ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ.

ನಗರ ಪೊಲೀಸ್ ಠಾಣೆ.

ದಿನಾಂಕ;07.03.2022 ರಂದು ಪಿರ್ಯಾದಿ ಚಂದ್ರಶೇಖರ್  ರವರು ನೀಡಿದ ದೂರಿನಲ್ಲಿ ದಿನಾಂಕ:06/03/2022 ರಂದು ರೈಲ್ವೆ ಸ್ಟೇಷನ್ ನಲ್ಲಿ ಇರುವ ತಮ್ಮ ಕಛೇರಿಯನ್ನು  2.00 ಗಂಟೆಗೆ ಕಛೇರಿಗೆ ಬೀಗ ಹಾಕಿಕೊಂಡು ದಿನಾಂಕ:07/03/2022 ರಂದು ಬೆಳಿಗ್ಗೆ  ನೋಡಲಾಗಿ ಯಾರೋ ಕಳ್ಳರು ಕಛೇರಿಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾವುದೋ ಅಯುಧದಿಂದ ಮೀಟಿ ಬಾಗಿಲನ್ನು ಹೊಡೆದು ತೆಗೆದಿದ್ದು ಟೇಬಲ್ ಮೇಲೆ ಇಟ್ಟಿದ್ದ ಲ್ಯಾಬ್ ಟಾಪ್, ಚಾರ್ಜರ್ ಮೌಸ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಲ್ಯಾಬ್ ಟಾಪ್, ಚಾರ್ಜರ್ ಮೌಸ್ ನ್ನು ಪತ್ತೆ ಮಾಡಟಿ ಕೊಡುವಂತೆ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಬಣಕಲ್ ಪೊಲೀಸ್ ಠಾಣೆ.

ದಿನಾಂಕ:06.03.2022 ರಂದು ಪಿರ್ಯಾದಿ ಶ್ರೀಮತಿ ಜಯಂತಿ ಕೊಂ ಗಂಗಾಧರ ಶಾಂತಿಗ್ರಾಮ  ಹಾಸನ ಜಿಲ್ಲೆ ವಾಸಿ ರವರು ನೀಡಿದ ದೂರಿನಲ್ಲಿ ಪಿರ್ಯಾಧುದಾರರ ಗಂಡ ದಿನಾಂಕ 24-02-2022 ರಂದು ಧರ್ಮಸ್ಥಳಕ್ಕೆ ಊರಿನ ಜನರೊಂದಿಗೆ ಪಾದಯಾತ್ರೆ ಹೊರಗಿದ್ದು  ದಿನಾಂಕ;26-02-2022 ರಂದು ರಾತ್ರಿ ಕೊಟ್ಟಿಗೆಹಾರದ ನಿಸರ್ಗ ಹೋಟೇಲ್ ನಲ್ಲಿ ತಂಗಿದ್ದು  ನಮ್ಮ ಊರಿನ ವಾಸಿಗಳು ಅಲ್ಲಿಂದ ಹೊರಟಾಗ ನನ್ನ ಗಂಡ ಅವರನ್ನು ಬಿಟ್ಟು ಎಲ್ಲಿಗೋ ಹೋಗಿದ್ದು ನಂತರ ಅವರು ನಮ್ಮ ಊರಿನವರಿಗೆ ಸಿಕ್ಕಿರುವುದಿಲ್ಲ. ನಂತರ ನಮ್ಮ ಊರಿನವರು ಬಂದರು ಸಹ ನನ್ನ ಗಂಡ ಮನೆಗೆ ಬಾರದೆ ಕಾಣೆಯಾಗಿದು,್ದ ಕಾಣೆಯಾಗಿರುವ ತನ್ನ ಗಂಡನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಡೂರು ಪೊಲೀಸ್ ಠಾಣೆ.

ದಿನಾಂಕ 06-03-2022 ರಂದು ಪಿರ್ಯಾದಿ ಮಂಜು ಬಿನ್ ಹನುಮಂತಪ್ಪ ಇವರು ನೀಡಿದ ದೂರಿನಲ್ಲಿ ದಿನಾಂಕ 02-03-2022 ರಂದು ರಾತ್ರಿ 10.00 ಗಂಟೆಗೆ ಪಿರ್ಯಾದಿ ಹೆಂಡತಿ ಗೀತಾ ಇವಳು ಪಿರ್ಯಾದಿಯೊಂದಿಗೆ ಇದ್ದವಳು 11.00 ಗಂಟೆಗೆ ಮನೆಯಿಂದ ಹೊರಗೆ ಹೋದವಳು ವಾಪಾಸ್ಸು ಮನೆಗೆ ಬಾರದೇ ಇದ್ದು ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿಲ್ಲವೆಂದು ಕಾಣೆಯಗಿರುವ ತನ್ನ ಹೆಂಡತಿ ಗೀತಾ, 27 ವರ್ಷ, 5.4 ಅಡಿ, ಗೋದಿ ಮೈಬಣ್ಣ , ಕೆಂಪು ಬಣ್ಣದ  ಚೂಡಿದಾರ ಧರಿಸಿರುತ್ತಾಳೆ. ಕನ್ನಡ ಬಾಷೆ ಮಾತನಾಡುತ್ತಾಳೆ. ಕಾಣೆಯಾಗಿರುವ ತನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 07-03-2022 07:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080