ಅಭಿಪ್ರಾಯ / ಸಲಹೆಗಳು

ಅಕ್ರಮ ಮಟ್ಕಾ ಜೂಜಾಟ ಪ್ರಕರಣ

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ;06/04/2022 ರಂದು ಬಾಳೆಹೊನ್ನೂರು ಠಾಣಾ ಸರಹದ್ದಿನ ಬಾಳೆಹೊನ್ನೂರು ಸರ್ಕಾರಿ ಅಸ್ಪತ್ರೆಯ ಮುಂಭಾಗದಲ್ಲಿ  ಇರುವ ರೋಟರಿ ಕ್ಲಬ್ ಬಸ್ ನಿಲ್ದಾಣದ ಹತ್ತಿರ ಅಕ್ರಮವಾಗಿ ಮಟ್ಕಾ ಜೂಜಾಟ ಆಡಿಸುತ್ತಿದ್ದ ಆರೋಪಿತರಾದ  ಹರೀಶ ಮತ್ತು ಕೃಷ್ಣ ಸಿಗೋಡು ವಾಸಿಗಳು ಇವರನ್ನು ವಶಕ್ಕೆ ಪಡೆದು ವಿಚಾರಿಸಿಲಾಗಿ ಸದರಿಯವರು ಸಂಗ್ರಹಿಸಿದ ಮಟ್ಕಾ ಹಣವನ್ನು ಪುರೋತ್ತಮರವರಿಗೆ ನೀಡುತ್ತಿದ್ದು,  ಅರೋಪಿತರಿಂದ 3 ಮಟ್ಕಾ ಚೀಟಿಗಳು, ಒಂದು ಬಾಲ್ ಪೆನ್ನು ಮತ್ತು 1610/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಬಂದು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ನಿತ್ಯಾನಂದ ಗೌಡ ಪಿ.ಡಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಹರಿಹರಪುರ ಪೊಲೀಸ್ ಠಾಣೆ.

ದಿನಾಂಕ;07/04/2022 ರಂದು ಪಿರ್ಯಾದಿ ಮಧುಸೂದನ್ ಬಿ.ಎಸ್. ಬಿನ್ ನಾಗರಾಜ ಬಿ.ವಿ. ಮಣೀಯೂರು ಬಂಡಿಗಡಿ ಹರಿಹರಪುರ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು ದಿನಾಂಕ:07/04/2022 ರಂದು  ಬೆಳಿಗ್ಗೆ ಜಾವ  00.30  ಗಂಟೆ ಸಮಯದಲ್ಲಿ ಲೋಕಪರಮೇಶ್ವರಿ ಅಮ್ಮ ದೇವಸ್ಥಾನದ ಮುಂದಿನ ಗೇಟಿನ ಬಳಿ ನಿಲ್ಲಿಸಿದ್ದ ಕೆಎ-18-ಇಜೆ-9790 ರ ಸಿಟಿ 110 ಮೋಟಾರ್ ಸೈಕಲ್ ನ್ನು ಲಾಕ್ ಮಾಡಿ ನಿಲ್ಲಿಸಿದ್ದು  ಬೆಳಿಗ್ಗೆ 10.00 ಗಂಟೆ ನೋಡಲಾಗಿ ನಿಲ್ಲಿಸಿದ ಮೋಟಾರ್ ಸೈಕಲ್ ನ್ನು ಯಾರೋ ಕಳ್ಳರು  ಕಳವು ಮಾಡಿಕೊಂಡು ಹೋಗಿದ್ದು, ಮೋಟಾರ್ ಸೈಕಲ್ ನ ಬೆಲೆ 76,000/- ರೂ ಗಳಾಗಿರುತ್ತೆ.  ಅದ್ದರಿಂದ ಕಳ್ಳರನ್ನು ಪತ್ತೆ ಹಚ್ಚಿ ಕಳುವಾಗಿರುವ ಮೋಟಾರ್ ಸೈಕಲ್ ನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಗೋಣಿಬೀಡು ಪೊಲೀಸ್ ಠಾಣೆ.

ದಿನಾಂಕ:07/04/2022 ರಂದು ಪಿರ್ಯಾದಿ ಅರುಣ್  ಬಿನ್ ನೋನಯ್ಯ ವಾಸ ದೇವರುಂದ ಗ್ರಾಮ, ಇವರು ನೀಡಿದ ದೂರಿನಲ್ಲಿ ಪಿರ್ಯಾದಿ ನಾದಿನಿ ಶ್ವೇತ ಇವಳು ದಿನಾಂಕ;02/04/2022 ರಂದು ಜಾತ್ರೆಗೆ ಬಂದವಳು ದಿನಾಂಕ:04/04/2022 ರಂದು  ಅಲ್ದೂರಿಗೆ ಹೊರಟ್ಟಿದ್ದು,  ಪಿರ್ಯಾದಿ ಶ್ವೇತಳನ್ನು ಮೂಡಿಗೆರೆ ಬಿಟ್ಟು ಬಂದಿದ್ದು ನಂತರ ಶ್ವೇತ ಮನೆಗೆ ಹೋಗದೇ  ಕಾಣೆಯಾಗಿದ್ದು,  ಈ ವರೆಗೂ ಎಲ್ಲಾ ಕಡೆಯಲ್ಲಿಯೂ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಶ್ವೇತ,  25 ವರ್ಷ, 5.1 ಅಡಿ ಎತ್ತರ, ದುಂಡುಮುಖ, ಸಾಧಾರಣ ಕಪ್ಪುಬಣ್ಣ, ಪಿಂಕ್ ಕಲರ್ ಗೌನ್ ಧರಿಸಿದ್ದು ಕನ್ನಡ , ತುಳು ಬಾಷೆ ಮಾತನಾಡುತ್ತಾಳೆ. ಕಾಣೆಯಾಗಿರುವ ತನ್ನ ನಾದಿನಿ ಶ್ವೇತ ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 07-04-2022 07:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080