ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ  ಪ್ರಕರಣ.

ತರೀಕೆರೆ  ಪೊಲೀಸ್ ಠಾಣೆ.

ದಿನಾಂಕ 07-05-2022 ರಂದು ಸುನಂದಮ್ಮ ಕೋಂ ಸುರೇಶ,ಗಾಳಿಹಳ್ಳಿ ಕ್ರಾಸ್, ತರೀಕೆರೆವಾಸಿರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಮಗಳಾದ ಭಾರ್ಗವಿ, 18 ವರ್ಷ ,ಇವಳು ದಿನಾಂಕ 06-05-2022 ರಂದು ಸಂಜೆ 07-00 ಗಂಟೆ ಸಮಯದಲ್ಲಿ ಗಾಳಿಹಳ್ಳಿ ಕ್ರಾಸ್ ಹತ್ತಿರವಿರುವ ಶ್ರೀ ಬನಶಂಕರಿ ದೇವಸ್ಥಾನದ ಕ್ಲೀನಿಂಗ್ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವಳು ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಭಾರ್ಗವಿಬಿನ್ ಸುರೇಶ್, 18 ವರ್ಷ, ಬಿ.ಎ.ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು. ಎತ್ತರ 4.6 ಅಡಿ, ಕನ್ನಡ ಬಾಷೆ ಮಾತಾನಾಡುತ್ತಾಳೆ. ಬಣ್ಣಬಣ್ಣದ ಪ್ಯಾಂಟ್ ಶರ್ಟ್ ವೇಲ್  ಧರಿಸಿರುತ್ತಾಳೆ. ಕಾಣೆಯಾಗಿರುವ ನನ್ನ ಮಗಳಾದ ಭಾರ್ಗವಿ ಯನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ತರೀಕೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 ಅಕ್ರಮ ಮದ್ಯ ಮಾರಾಟ ಪ್ರಕರಣ.

ಬೀರೂರು ಪೊಲೀಸ್ ಠಾಣೆ.

ದಿನಾಂಕ 06-05-2022 ರಂದು ರಾತ್ರಿ 10-15 ಗಂಟೆ ಸಮಯದಲ್ಲಿ ಬೀರೂರು ಪೊಲೀಸ್ ಠಾಣಾ ಸರಹದ್ದಿನ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ಬೀರೂರು ಪಟ್ಟಣದ ಲಿಂಗದಹಳ್ಳಿ ರಸ್ತೆಯಲ್ಲಿ ಮಂಜುನಾಥ್ ಬಿನ್ ಲೇಟ್ ಶಂಕರಪ್ಪ, ಹೊಗರೇಹಳ್ಳಿ ಗ್ರಾಮ ಈತನು ತನ್ನ ಬಾಬ್ತು ಟಿವಿಎಸ್ ನ ಮುಂಭಾಗದಲ್ಲಿ 90 ಎಂ.ಎಲ್ ನ ರಾಜಾವಿಸ್ಕಿಯ 90 ಪೌಚ್ ಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದು , ಸದರಿ ಮದ್ಯದ ಪೌಚ್ ಗಳನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿದ್ದು, ಮದ್ಯದ ಅಂದಾಜು ಬೆಲೆ 3150/- ರೂ ಗಳಾಗಿರುತ್ತೆ.ಆರೋಪಿ ಮಂಜುನಾಥನ ವಿರುದ್ದ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ವಿಶ್ವನಾಥ ಎನ್.ಸಿ.ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ .

ಕೊಪ್ಪ ಪೊಲೀಸ್ ಠಾಣೆ.

ದಿನಾಂಕ 07-05-2022 ರಂದು ಪಿರ್ಯಾದುದಾರರಾದ ಗಾಯತ್ರಿರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರಿಗೆ 2 ಜನ ಮಕ್ಕಳಿದ್ದು ,ಹಿರಿಯ ಮಗನಾದ ಕೃಪಾಕರ , 21 ವರ್ಷ ,ಬಿ.ಕಾಂ.ವಿದ್ಯಾಬ್ಯಾಸವನ್ನು ಮಾಡುತ್ತಿದ್ದು , ದಿನಾಂಕ 05-05-2022 ರಂದು ಬೆಳಿಗ್ಗೆ ಸುಮಾರು 10-20 ಗಂಟೆ  ಸಮಯದಲ್ಲಿ ಕೆಎ-66 ಹೆಚ್ - 6978 ಅಪಾಚಿ ಬೈಕಿನಲ್ಲಿ  ನನ್ನ ಮಗನಾದ ಕೃಪಾಕರನು ಬೈಕನ್ನು ವೇಗವಾಗಿ ಚಾಲನೆ ಮಾಡಿಕೊಂಡು ಹೋಗುವಾಗ ದನ ಅಡ್ಡ ಬಂದಿದ್ದರಿಂದ ದನಕ್ಕೆ ಬೈಕನ್ನು ತಾಕಿಸಬಾರದೆಂದು ನಿಯಂತ್ರಿಸಲು ಹೋದಾಗ ಬೈಕ್ ಸಮೇತ ರಸ್ತೆಗೆ ಬಿದ್ದಾಗ ತಲೆಗೆ ಪೆಟ್ಟಾಗಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 07-05-2022 ರಂದು ಬೆಳಿಗ್ಗೆ ಸುಮಾರು 08-30 ಗಂಟೆಗೆ ಮೃತಪಟ್ಟಿದ್ದಾಗಿರುತ್ತೆಂದು  ಮುಂದಿನ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಕೊಪ್ಪ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಗೋಣಿಬೀಡು  ಪೊಲೀಸ್ ಠಾಣೆ.

ದಿನಾಂಕ 06-05-2022 ರಂದು ಪಿರ್ಯಾದುದಾರರಾದ ಉಮೇಶ,ಕಿರುಗುಂದ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯು ತನ್ನ  ಮಾವನಾದ ಲಕ್ಷ್ಮಣ್ಗೌಡರವರೊಂದಿಗೆ ಕೆಎ-16 ಪಿ6486 ಕಾರಿನಲ್ಲಿ ಸಂಜೆ 05-30 ಗಂಟೆ ಸಮಯದಲ್ಲಿ ಮೂಡಿಗೆರೆಗೆ ಹೋಗಲೆಂದು ಗಾಂದಿಘರ್ ಗ್ರಾಮದ ಹತ್ತಿರ ರಸ್ತೆಯ ಎಡಬದಿಯಲ್ಲಿ ಹೋಗುತ್ತಿರುವಾಗ ಗೋಣಿಬೀಡು ಕಡೆಯಿಂದ ಬಂದ ಕೆಎ-05 ಎಂವಿ-0161 ಕಾರಿನ ಚಾಲಕ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ಕಾರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಡ್ರೈವರ್ ಸೀಟಿನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ನಮ್ಮ ಮಾವನಾದ  ಲಕ್ಷ್ಮಣ್ಗೌಡರವರಿಗೆ ತಲೆಗೆ ಪೆಟ್ಟಾಗಿದ್ದು   ಚಿಕಿತಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಗಿರುತ್ತೆ.ನನಗೂ ಸಹ ಎದೆಗೆ ಪೆಟ್ಟಾಗಿರುತ್ತೆ. ಅಪಘಾತಗೊಳಿಸಿದ ಕೆಎ-05 ಎಂವಿ-0161  ಕಾರಿನ ಚಾಲಕನ  ವಿರುದ್ದ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಮನುಷ್ಯ ಕಾಣೆ  ಪ್ರಕರಣ.

ಮಹಿಳಾ  ಪೊಲೀಸ್ ಠಾಣೆ.

ದಿನಾಂಕ 05-05-2022 ರಂದು ಪ್ರಕಾಶ, ಗಾಂದಿನಗರ, ಚಿಕ್ಕಮಗಳೂರುಟೌನ್ವಾಸಿರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಮಗಳಾದ ಪೃಥ್ಥಿ, 32 ವರ ಇವಳು, ದಿನಾಂಕ 05-05-2022 ರಂದು ಮದ್ಯಾಹ್ನ 02-00 ಗಂಟೆ ಸಮಯದಲ್ಲಿ ಪಕ್ಕದ ಮನೆಗೆ ಬೀಗದ ಕೀಯನ್ನು ನೀಡಿ ಪೇಟೆಗೆ ಹೋಗಿ ಬರುತ್ತೇನೆ ಎಂದು ಹೋದವಳು ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಪೃಥ್ವಿ ಬಿನ್ ಪ್ರಕಾಶ,  32 ವರ್ಷ,  ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು. ಎತ್ತರ 5 ಅಡಿ, ದುಂಡುಮುಖ, ಕನ್ನಡ ಬಾಷೆ ಮಾತಾನಾಡುತ್ತಾಳೆ. ಹಸಿರು ಬಣ್ಣದ ಚೂಡಿದಾರ್ ಧರಿಸಿರುತ್ತಾಳೆ. ಕಾಣೆಯಾಗಿರುವ ನನ್ನ ಮಗಳಾದ ಪೃಥ್ವಿಯನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 07-05-2022 05:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080