ಅಭಿಪ್ರಾಯ / ಸಲಹೆಗಳು

ಸೈಬರ್ ಪ್ರಕರಣ.

ಸಿ.ಇ.ಎನ್ ಪೊಲೀಸ್ ಠಾಣೆ.

ದಿನಾಂಕ 07-09-2021 ರಂದು ಶ್ರೀಮತಿ.ಲಕ್ಷ್ಮಿ., ಗೌರಿಕಾಲುವೆ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 03-09-2021 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ನಾನು ಕಾರ್ಪೋರೇಷನ್ ಬ್ಯಾಂಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ನನ್ನ ಮೊಬೈಲ್ ನಂಬರ್ ಗೆ ಅನಾಮಧೇಯ ನಂಬರ್ ನಿಂದ 2 ಲಕ್ಷ ಲೋನ್  ಕೊಡುವುದಾಗಿ ಕರೆ ಮಾಡಿ ಬ್ಯಾಂಕ್ ಚಾರ್ಜ್ ಹಾಗೂ ಪ್ರೋಸೆಸಿಂಗ್ ಚಾರ್ಜ್ ಎಂಬುದಾಗಿ ನಂಬಿಸಿ ನನ್ನ ಬ್ಯಾಂಕ್ ಖಾತೆಯಿಂದ ಒಟ್ಟು 84,350/ ರೂ ಗಳನ್ನು ಗೂಗಲ್ ಪೇ ಮುಖಾಂತರ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಮೋಸ ಮಡಿರುತ್ತಾರೆಂದು ನೀಡಿದ  ದೂರಿನ ಮೇರೆಗೆ ಸಿ.ಇ.ಎನ್.ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ  ಪ್ರಕರಣ

ಬಸವನಹಳ್ಳಿ ಪೊಲೀಸ್ ಠಾಣೆ.

ದಿನಾಂಕ: 06/09/2021 ರಂದು ಪಿರ್ಯಾದಿ ಸುನೀಲ್ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ದಿನಾಂಕ 05-09-2021  ರಂದು ನಾನು ಹಾಗೂ ನನ್ನ ಸ್ನೇಹಿತ ಇನಾಯತ್ ರವರು ಬಾಬಾಬುಡನ್ ಗಿರಿಗೆ ಹೋಗಿ ರಾತ್ರಿ ನನ್ನ ಬೈಕ್ ಕೆಎ-53 ಹೆಚ್ ಜಿ- 4471 ಪಲ್ಸರ್ ಬೈಕ್ ನ್ನು ಟೌನ್ ಕ್ಯಾಂಟೀನ್ ಪಕ್ಕದಲ್ಲಿರುವ ಹೋಟೆಲ್ ಎಂಪೈರ್ ಎದುರು ನಿಲ್ಲಿಸಿದ್ದು ಮಾರನೇ ದಿನ ದಿನಾಂಕ06-09-2021 ರಂದು ಬೆಳಿಗ್ಗೆ ಹೋಟೆಲ್ ಎದುರಿನಲ್ಲಿ ನಿಲ್ಲಿಸಿದ್ದ ಬೈಕ್ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಸದರಿ ಬೈಕ್ ನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ  ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಜೂಜಾಟ  ಪ್ರಕರಣ

ಗ್ರಾಮಾಂತರ  ಪೊಲೀಸ್ ಠಾಣೆ

ದಿನಾಂಕ 06/09/2021 ರಂದು ನ್ಯಾಯಾಲಯದ ಅನುಮತಿ ಪಡೆದು ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ದಿನಾಂಕ 01-09-2021 ರಂದು  ಇಂದಾವರ ಗ್ರಾಮದ ಸರ್ಕಾರಿ ಗೋಮಾಳ ಪ್ರದೇಶದಲ್ಲಿ ಅಕ್ರಮವಾಗಿ ಹಣವನ್ನು ಕಟ್ಟಿ ಜೂಜಾಟವಾಡುತ್ತಿದ್ದ 1)ಅಂಥೋಣಿ 2)ರಾಮು 3) ಹರೀಶ್ 4) ಉಮೇಶ್ 5) ಸುರೇಶ್ ಇವರುಗಳನ್ನು  ವಶಕ್ಕೆ ಪಡೆದು ಇವರುಗಳ ವಶದಲ್ಲಿದ್ದ 1) 52 ಇಸ್ಪೀಟ್ ಎಲೆಗಳು 2) ಒಂದು ಪಂಚೆ ಹಾಗೂ 4,230/- ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರ ವಿರುದ್ದ  ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಮಹಾಂತೇಶ್ ಪಿ.ಎಸ್.ಐ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮಟ್ಕಾ ಜೂಜಾಟ  ಪ್ರಕರಣ

ಮೂಡಿಗೆರೆ  ಪೊಲೀಸ್ ಠಾಣೆ

ದಿನಾಂಕ 06/09/2021 ರಂದು ನ್ಯಾಯಾಲಯದ ಅನುಮತಿ ಪಡೆದು ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ದಿನಾಂಕ 04-09-2021 ರಂದು ಮದ್ಯಾಹ್ನ 12-40 ಗಂಟೆ ಸಮಯದಲ್ಲಿ  ಮೂಡಿಗೆರೆ ಪಟ್ಟಣದ ಈದ್ಗಾ ಮೈದಾನದ ಹತ್ತಿರವಿರುವ ಪಟ್ಟಣ ಪಂಚಾಯ್ತಿಗೆ ಸೇರಿದ ವಾಟರ್ ಟ್ಯಾಂಕ್ ಎದುರು ಸಂಪಿಗೆ ಕಟ್ಟೆ ರಸ್ತೆಯಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಟವಾಡಿಸುತ್ತಿದ್ದ ಗಣೇಶ ಬಿನ್ ಚನ್ನಶೆಟ್ಟಿ, ಮೂಡಿಗೆರೆ ಪಟ್ಟಣ ವಾಸಿ ಈತನನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ ಒಂದು ಮಟ್ಕಾ ಚೀಟಿ, ಒಂದು ಬಾಲ್ ಪೆನ್ ಹಾಗೂ 2,100 /-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತನ ವಿರುದ್ದ  ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸಿ.ಪಿ.ಐ. ಸೋಮಶೇಖರ.ಜೆ.ಸಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 07-09-2021 06:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080