ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ.

ಕಡೂರು ಪೊಲೀಸ್ ಠಾಣೆ,

ದಿನಾಂಕ 07-10-2021 ರಂದು ಬೆಳಗ್ಗೆ 10-40  ಗಂಟೆ ಸಮಯದಲ್ಲಿ ಸರಸ್ವತಿಪುರ ತಾಂಡ್ಯದ ಮೂರ್ತಿನಾಯ್ಕ ತಮ್ಮ ಮನೆಯ ಮುಂದಿನ ಟ್ಯಾಂಕ್ ಬಳಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು .ಆರೋಪಿಯನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ 90 ಎಂ.ಎಲ್.ನ ರಾಜಾವಿಸ್ಕಿಯ 40 ಪೌಚ್ ಗಳಿದ್ದು , ಮದ್ಯದ ಅಂದಾಜು ಬೆಲೆ 1405/- ರೂ ಆಗಿದ್ದು ಆರೋಪಿಯ ವಿರುದ್ದ  ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ರಮ್ಯ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಗೋ ಮಾಂಸ ಮಾರಾಟ ಪ್ರಕರಣ

ನಗರ  ಪೊಲೀಸ್ ಠಾಣೆ .

ದಿನಾಂಕ: 06/10/2021 ಬೆಳಿಗ್ಗೆ 11-40 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ನಗರದ ಎ.ಕೆ. ಕಾಲೋನಿ 2 ನೇಕ್ರಾಸ್ ನಲ್ಲಿರುವ ಜಾವಿದ್  ಎಂಬುವವರು ತಮ್ಮ  ಶೆಡ್ ಬಳಿ ಅಕ್ರಮವಾಗಿ  ದನವನ್ನು ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ದಾಳಿ ನಡೆಸಿದ್ದು ,ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾರಾಟ ಮಾಡುತ್ತಿದ್ದರಿಂದ ಆರೋಪಿಯ ವಶದಲ್ಲಿದ್ದ ಸುಮಾರು 50 ಕೆಜಿಯಷ್ಟು ದನದ ಮಾಂಸ , ಒಂದು ತೂಕ ಮಾಡುವ ಯಂತ್ರ, 4 ಕಬ್ಬಿಣದ ಕತ್ತಿ, 3 ಕಬ್ಬಿಣದ ಕೊಕ್ಕೆ , 1 ಕೆ,ಜಿ .ಹಾಗೂ 2 ಕೆ.ಜಿ.ತೂಕದ ಬೊಟ್ಟುಗಳು, ಎರಡು ಚಾಕುಗಳು , ಕೇಸರಿ ಬಣ್ಣದ ಪ್ಲಾಸ್ಟಿಕ್ ಟಬ್   ಮತ್ತು ಮೂರು ಮುಸ್ಕುಲ್ಲಾ (ಚರ್ಮವನ್ನು ಸುಲಿಯುವ ಸಾಧನ) ಇವುಗಳನ್ನು  ವಶಕ್ಕೆ ಪಡೆದು  ಆರೋಪಿಯ ವಿರುದ್ದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಶಂಭುಲಿಂಗಯ್ಯ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ನಗರ  ಪೊಲೀಸ್ ಠಾಣೆ .

ದಿನಾಂಕ: 06/10/2021 ಮದ್ಯಾಹ್ನ 13-00 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ನಗರದ ಎ.ಕೆ. ಕಾಲೋನಿ 1 ನೇ ಕ್ರಾಸ್ ನಲ್ಲಿರುವ ಮಹಮದ್  ಎಕ್ಬಾಲ್   ಎಂಬುವವರು ತಮ್ಮ ಮನೆಯ ಬಳಿ ಅಕ್ರಮವಾಗಿ  ದನವನ್ನು ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ದಾಳಿ ನಡೆಸಿದ್ದು , ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾರಾಟ ಮಾಡುತ್ತಿದ್ದರಿಂದ ಆರೋಪಿಯ ವಶದಲ್ಲಿದ್ದ ಸುಮಾರು 30 ಕೆಜಿಯಷ್ಟು ದನದ ಮಾಂಸ , 1 ಕಬ್ಬಿಣದ ಕತ್ತಿ, , ಒಂದು ಚಾಕು , ನೀಲಿ ಬಣ್ಣದ ಪ್ಲಾಸ್ಟಿಕ್ ಟಬ್ ಮತ್ತು ಒಂದು ಮುಸ್ಕುಲ್ಲಾ (ಚರ್ಮವನ್ನು ಸುಲಿಯುವ ಸಾಧನ) ಇವುಗಳನ್ನು  ವಶಕ್ಕೆ ಪಡೆದು  ಆರೋಪಿಯ ವಿರುದ್ದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ   ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಶಂಭುಲಿಂಗಯ್ಯ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ನಗರ  ಪೊಲೀಸ್ ಠಾಣೆ .

ದಿನಾಂಕ: 06/10/2021 ಮದ್ಯಾಹ್ನ 14-30 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ನಗರದ ಸಂತೆ ಮೈದಾನದ ಎ.ಕೆ. ಕಾಲೋನಿಯ 2 ನೇ ಕ್ರಾಸ್ನಲ್ಲಿರುವ ಯಾಸೀನ್ ಕುರಿ ಸತ್ತರ್ ಸಾಬ್  ಎಂಬುವವರು ತಮ್ಮ ಮನೆಯ ಬಳಿ ಅಕ್ರಮವಾಗಿ  ದನವನ್ನು ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ದಾಳಿ ನಡೆಸಿದ್ದು , ನಮ್ಮಗಳನ್ನು ನೋಡಿ ಆರೋಪಿಯು ತಪ್ಪಿಸಿಕೊಂಡು ಓಡಿಹೋಗಿದ್ದು, ಸ್ಥಳದಲ್ಲಿದ್ದ  ಸುಮಾರು 30 ಕೆಜಿಯಷ್ಟು ದನದ ಮಾಂಸ , 1 ಕಬ್ಬಿಣದ ಕತ್ತಿ, , ಒಂದು ಚಾಕು , ಒಂದು ಮುಸ್ಕುಲ್ಲಾ (ಚರ್ಮವನ್ನು ಸುಲಿಯುವ ಸಾಧನ) ಇವುಗಳನ್ನು  ವಶಕ್ಕೆ ಪಡೆದು, ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಆರೋಪಿಯ ವಿರುದ್ದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ  ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಶಂಭುಲಿಂಗಯ್ಯ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಮನುಷ್ಯ ಕಾಣೆ ಪ್ರಕರಣ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ 06/10/2021 ರಂದು ಪಾಲಾಕ್ಷಪ್ಪ. ಎಂ.ಚೋಮನಹಳ್ಳಿ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ ಮೊದಲನೇ ಮಗಳಾದ ಚೈತ್ರಾ, 21 ವರ್ಷ ಈಕೆಯು ಪದವಿ ವ್ಯಾಸಂಗ ಮುಗಿಸಿ ಮನೆಯಲ್ಲಿಯೇ ಇದ್ದಳು. ದಿನಾಂಕ 06-10-2021 ರಂದು ಬೆಳಗ್ಗೆ ನಾನು ನನ್ನ ಹೆಂಡತಿ ಹಾಗೂ ಮಕ್ಕಳಾದ ಚೈತ್ರಾ, ಪಲ್ಲವಿಯವರೊಂದಿಗೆ ಆಲದಹಳ್ಳಿಗೆ ಹೋಗಿ ಗಿರಿಯಾಪುರದಿಂದ ವಿಜಯ ಬಸ್ಸಿನಲ್ಲಿ ಹೋಗುತ್ತಿರುವಾಗ ಅಂತರಘಟ್ಟೆಯಲ್ಲಿ ಬಸ್ ನಿಲ್ಲಿಸಿದ್ದು, ನನ್ನ ಮಗಳು  ಚೈತ್ರಾ ಹೂ, ಹಣ್ಣು ತರಲೆಂದು ಬಸ್ಸಿನಿಂದ ಕೆಳಗೆ ಇಳಿದು ಹೋದವಳು ಬಸ್ ಹೊರಟರೂ ಬಾರದಿದ್ದ ಕಾರಣ ನಾವುಗಳು ಬಸ್ಸಿನಿಂದ ಇಳಿದು ಎಲ್ಲಾ ಕಡೆ ಹುಡುಕಾಡಿದ್ದು ಎಲ್ಲಿಯೂ ಪ್ತತೆಯಾಗಿರುವುದಿಲ್ಲ. ಆದ್ದರಿಂದ ನನ್ನ ಮಗಳಾದ ಚೈತ್ರಾಳನ್ನು ಪ್ತತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಅಜ್ಜಂಪುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ .

ಅಕ್ರಮ ಮಟ್ಕಾ ಜೂಜಾಟ ಪ್ರಕರಣ.

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ 05-10-2021 ರಂದು ಮದ್ಯಾಹ್ನ 12-35 ಗಂಟೆ ಸಮಯದಲ್ಲಿ ಮೂಡಿಗೆರೆ ತಾಲ್ಲೂಕು ಕಿತ್ಲೇಗಂಡಿ ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣದ ಬಳಿ ಅಕ್ರಮವಾಗಿಮ ಮಟ್ಕಾ ಜೂಜಾಟವಾಡಿಸುತ್ತಿದ್ದ ಅಬ್ದುಲ್ ಕರೀಂ ಬಿನ್ ಅಹಮದ್ ಭಾವ ಈತನನ್ನು ವಶಕ್ಕೆ ಪಡೆದು, ಇಬ್ಬರು ಆಸಾಮಿಗಳು ಓಡಿಹೋಗಿದ್ದು, ಅಬ್ದುಲ್ ಕರೀಂರವರ ಬಳಿಯಿದ್ದ ಒಂದು ಅಂಕೆ ಸಂಖ್ಯೆ ಬರೆದಿರುವ ಚೀಟಿ, ಒಂದು ಬಾಲ್ ಪೆನ್ ಹಾಗೂ 1710/- ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿಯ ವಿರುದ್ದ  ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ರವಿ.ಜಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ 05-10-2021 ರಂದು ಮದ್ಯಾಹ್ನ 14-35 ಗಂಟೆ ಸಮಯದಲ್ಲಿ ಮೂಡಿಗೆರೆ ಪಟ್ಟಣದ ಈದ್ಗಾ ಮೈದಾನದ ಹತ್ತಿರವಿರುವ ಪಟ್ಟಣ ಪಂಚಾಯ್ತಿಗೆ ಸೇರಿರುವ ವಾಟರ್ ಟ್ಯಾಂಕ್ಗಳ ಎದುರು ಸಂಪಿಗೆ ಕಟ್ಟೆಯ ರಸ್ತೆಯಲ್ಲಿ ಅಕ್ರಮವಾಗಿಮ ಮಟ್ಕಾ ಜೂಜಾಟವಾಡಿಸುತ್ತಿದ್ದ ನವೀದ್ ಅಹಮದ್ @ ಅಜೀಜ್ ಅಹಮದ್ ಬಿನ್ ಬಷೀರ್ ಅಹಮದ್ ಹಾಗೂ ಮಹಮದ್ ಹನೀಫ್ @ ಟಿಪ್ಪು ಬಿನ್ ಅಲಿಜಾನ್  ಇವರುಗಳನ್ನು  ವಶಕ್ಕೆ ಪಡೆದು, ಇವರುಗಳ ಬಳಿಯಿದ್ದ ಒಂದು ಮಟ್ಕಾ ಚೀಟಿ, ಒಂದು ಬಾಲ್ ಪೆನ್ ಹಾಗೂ 2,000/- ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರ ವಿರುದ್ದ  ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.ಈ ಕಾರ್ಯಾಚರಣೆಯಲ್ಲಿ ಸಿ.ಪಿ.ಐ. ಸೋಮಶೇಖರ.ಜೆ.ಸಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 07-10-2021 05:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080