ಅಭಿಪ್ರಾಯ / ಸಲಹೆಗಳು

ಅಜ್ಜಂಫುರ ಪೊಲೀಸ್ ಠಾಣೆ.

ರಸ್ತೆ  ಅಪಘಾತ  ಪ್ರಕರಣ.

ದಿನಾಂಕ: 07-12-2021 ರಂದು  ಅಜ್ಜಂಪುರ ಪೊಲೀಸ್ ಠಾಣಾ ಸರಹದ್ದಿನ ಬಗ್ಗವಳ್ಳಿ ಗ್ರಾಮದ ವಾಸಿ ಮೃತ್ಯುಂಜಯರವರು ನೀಡಿದ ದೂರಿನಲ್ಲಿ ದಿನಾಂಕ:06-12-2021 ರಂದು ಪಿರ್ಯಾದಿಯವರ ಅಣ್ಣನಾದ  ಬಿ.ಪಿ.ಆನಂದಮೂರ್ತಿರವರು ತನ್ನ ಬಾಬ್ತು ಕೆಎ-18-ಹೆಚ್- 4779 ಬೈಕಿನಲ್ಲಿ ರಾತ್ರಿ 08-00 ಗಂಟೆ ಸಮಯದಲ್ಲಿ ಸೋಮೇನಹಳ್ಳಿ ಗ್ರಾಮದ ಹತ್ತಿರ ಬರುತ್ತಿರುವಾಗ ಯಾವುದೋ ವಾಹನ ಅಪಘಾತಗೊಳಿಸಿದ್ದು ತಲೆಗೆ ಹಾಗೂ ಮೂಗಿಗೆ ತೀವ್ರ ಪೆಟ್ಟಾಗಿದ್ದು  ಚಿಕಿತ್ಸೆಗೆ ಅಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಆನಂದಮೂರ್ತಿರವರು  ಮೃತಪಟ್ಟಿದ್ದು, ಅಪಘಾತಗೊಳಿಸಿ ವಾಹನವನ್ನು ನಿಲ್ಲಿಸದೇ ಹೋದ ವಾಹನ ಹಾಗೂ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಅಕ್ರಮ ಮದ್ಯ ಮಾರಾಟ ಪ್ರಕರಣ.

ಅಜ್ಜಂಪುರ  ಪೊಲೀಸ್ ಠಾಣೆ.

ದಿನಾಂಕ:06-12-2021 ರಂದು ಅಜ್ಜಂಪುರ  ಠಾಣಾ ಸರಹದ್ದಿನ  ಸೊಕ್ಕೆ  ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನದ  ಹತ್ತಿರದ ರಸ್ತೆಯಲ್ಲಿ ದಿಲೀಪ ಬಿನ್ ತಿಪ್ಪೇಶಪ್ಪ  ಎಂಬುವರು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 90 ಎಂ.ಎಲ್. ನ ರಾಜಾವಿಸ್ಕಿಯ 8 ಟೆಟ್ರಾಪ್ಯಾಕ್ ಮದ್ಯ ಹಾಗೂ 180 ಎಂ.ಎಲ್ ನ ಆಪೀಸರ್ಸ್ ಚಾಯ್ಸ್ ವಿಸ್ಕಿಯನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 1555/-ರೂ ಆಗಿದ್ದು, ಆರೋಪಿ ವಿರುದ್ದ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.ಈಕಾರ್ಯಾಚರಣೆಯಲ್ಲಿಅಜ್ಜಂಪುರಠಾಣಾಪಿ.ಎಸ್.ಐ.ತಿಪ್ಪೇಶ ಹಾಗೂ ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 07-12-2021 06:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080