ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ .

ಎನ್.ಆರ್.ಪುರ   ಪೊಲೀಸ್ ಠಾಣೆ.

ದಿನಾಂಕ: 08/07/2021 ರಂದು ಕಲ್ಲೂರು ಹರಾವರಿ ಗ್ರಾಮದ ವಾಸಿಯಾದ ಶ್ರೀನಿವಾಸ ಎಂಬುವವರು ತಮ್ಮ ಮನೆಯ ಮುಂದೆ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾನೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದು ಶ್ರೀನಿವಾಸ ಎಂಬುವವರು  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು ಆತನನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ ಮದ್ಯವನ್ನು ವಶಪಡಿಸಿಕೊಂಡು ಆರೋಪಿತನಾದ ಶ್ರೀನಿವಾಸರವರ ವಿರುದ್ದ ಎನ್.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ದಿಲೀಪ್ ಕುಮಾರ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಕರ್ನಾಟಕ ಜಾನುವಾರು  ಹತ್ಯಾ ಪ್ರತಿಬಂಧಕ ಸಂರಕ್ಷಣಾ ಆದ್ಯಾದೇಶ

ತರೀಕೆರೆ  ಪೊಲೀಸ್ ಠಾಣೆ .

ದಿನಾಂಕ 08-07-2021 ರಂದು ಹಾದಿಕೆರೆ ಕಡೆಯಿಂದ ತರೀಕೆರೆ ಕೋಟೆಕ್ಯಾಂಪ್ ಕಡೆಗೆ ಅಕ್ರಮವಾಗಿ ಜಾನುವಾರುಗಳನ್ನು ಆಪೆ ಗೂಡ್ಸ್ ವಾಹನದಲ್ಲಿ ತುಂಬಿಕೊಂಡು ಕಸಾಯಿಖಾನೆಗೆ ಸಾಗಿಸುತ್ತಿರುವುದಾಗಿ  ಮಾಹಿತಿ ಬಂದ ಮೇರೆಗೆ ದಾಳಿ ನಡೆಸಲಾಗಿ   ಕೆಎ-18 ಎ-7591 ಗೂಡ್ಸ್ ವಾಹನವನ್ನು ನಿಲ್ಲಿಸಿ ಚಾಲಕನ ಹೆಸರು ಕೇಳಲಾಗಿ ಜಿಯೋ ಬಿನ್ ಅಹ್ಮದ್ ಖಾನ್, ಕೋಟೆಕ್ಯಾಂಪ್ ತರೀಕೆರೆ ಟೌನ್ ಎಂದು ಹಾಗೂ ಇನ್ನೊಬ್ಬನ ಹೆಸರು ಕೇಳಲಾಗಿ ಮುಕ್ರಿಂ ಬಿನ್ ಸಿಖಂದರ್ ಖಾನ್ , ಕೋಟೆಕ್ಯಾಂಪ್ ತರೀಕೆರೆ ಟೌನ್ ಎಂದು ತಿಳಿಸಿದ್ದು , ಗೂಡ್ಸ್ ವಾಹನವನ್ನು ಪರಿಶೀಲಿಸಲಾಗಿ ವಾಹನದಲ್ಲಿ  ಅಕ್ರಮವಾಗಿ 2 ಎತ್ತುಗಳನ್ನು ತುಂಬಿದ್ದು ಚಾಲಕನನ್ನು ವಿಚಾರ ಮಾಡಲಾಗಿ ಸದರಿ ಎತ್ತುಗಳನ್ನು ತರೀಕೆರೆಯ ಅಕ್ರಮ ಕಸಾಯಿಖಾನೆಗಳಲ್ಲಿ ಎತ್ತುಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಖರೀದಿ ಮಾಡಿದ್ದಾಗಿ ತಿಳಿಸಿದ್ದು  ಯಾವುದೇ ಪರವಾನಗಿಯನ್ನು ಪಡೆಯದೆ ಸದರಿ ಎತ್ತುಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಖರೀದಿ ಮಾಡಿ ಸಾಗಾಟ ಮಾಡುತ್ತಿದ್ದರಿಂದ  ಆರೋಪಿಗಳ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಐ. ರಾಘವೇಂದ್ರ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.                

ಆಲ್ದೂರು   ಪೊಲೀಸ್ ಠಾಣೆ .

ದಿನಾಂಕ 08-07-2021 ರಂದು  ದೋಣಕುಡಿಗೆ ಗ್ರಾಮದ ಕಡೆಯಿಂದ ಆಲ್ದೂರು ಕಡೆಗೆ ಟಾಟಾ ಎಸಿ ವಾಹನದಲ್ಲಿ ದನಗಳನ್ನು ತುಂಬಿಕೊಂಡು ಬರುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರೊಂದಿಗೆ ದಾಳಿ ನಡೆಸಿದ್ದು ದೋಣಕುಡಿಗೆ ಗ್ರಾಮದ ಕಡೆಯಿಂದ ಕೆಎ-11 ಬಿ-0515 ಟಾಟಾ ಎಸಿ ಕಂಪೆನಿಯ ವಾಹನ ಬಂದಿದ್ದು ತಪಾಸಣೆ ನಡೆಸಿದ್ದು ಚಾಲಕನು ಸೇರಿ 2 ಜನರು ಇದ್ದು ವಾಹನದಲ್ಲಿ 5 ಜಾನುವಾರುಗಳಿದ್ದು , ಈ ಬಗ್ಗೆ ಚಾಲಕನನ್ನು  ವಿಚಾರ ಮಾಡಲಾಗಿ ಗೋಪಾಲ ಬಿನ್ ಮೇಟೇಗೌಡ, ಬಿ.ಹೊಸಳ್ಳಿ, ಮೂಡಿಗೆರೆ ತಾಲ್ಲೂಕು ಇವರಿಂದ ಹಣ ಕೊಟ್ಟು ಮನೆಗೆ ಸಾಕುವುದಕ್ಕಾಗಿ ಸಾಗಾಟ ಮಾಡಿಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಸಾಗಾಟಮಾಡುವುದಕ್ಕೆ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದು , ಚಾಲಕನ ಹೆಸರು ಮಹೇಶ ಬಿನ್ ದೊಡ್ಡಕರಿಯಯ್ಯ, ಸಬ್ಬನಹಳ್ಳಿ , ಮಂಡ್ಯ ಜಿಲ್ಲೆ ವಾಸಿ ಎಂದು , ಅವನ ಜೊತೆಯಲ್ಲಿದ್ದ ಇನ್ನೊಬ್ಬನ ಹೆಸರು ಮಲ್ಲರಾಜು ಬಿನ್ ಮರಿಸ್ವಾಮಿ, ಯಡಗನಹಳ್ಳಿ, ಚಿಕ್ಕರಸನಕೆರೆ , ಮದ್ದೂರು ತಾಲ್ಲೂಕು , ಮಂಡ್ಯ ವಾಸಿ ಎಂದು ತಿಳಿಸಿದ್ದು , ಯಾವುದೇ ಪರವಾನಗಿ ಇಲ್ಲದೆ 5 ಜಾನುವಾರುಗಳನ್ನು ಕ್ರೂರವಾಗಿ ಹಿಂಸೆಯಿಂದ ವಾಹನದಲ್ಲಿ ತುಂಬಿಕೊಂಡು ಹೋಗುತ್ತಿದ್ದವರ  ವಿರುದ್ದ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ .ಶಿವರುದ್ರಮ್ಮ   ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಯಗಟಿ ಪೊಲೀಸ್ ಠಾಣೆ.

ಕಳ್ಳತನ ಪ್ರಕರಣ .

ದಿನಾಂಕ 07/07/2021 ರಂದು 17.30 ಗಂಟೆಗೆ ಪಿರ್ಯಾದಿ ರಂಗಪ್ಪ ಬಿನ್ ಹನುಮಂತಪ್ಪ, ಮುಗಳಿಕಟ್ಟೆ ರವರು ನೀಡಿದ ದೂರಿನಲ್ಲಿ ನನ್ನ ಆಣ್ಣ ಹಾಲಪ್ಪನವರು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ಮುಗಳಿಕಟ್ಟೆ ಗೇಟಿನ ಹತ್ತಿರ ಮನೆ ಹಾಗೂ ಶೆಡ್ ಮಾಡಿದ್ದು ಅದರಲ್ಲಿ 20 ಕುರಿಗಳನ್ನು ಸಾಕಿದ್ದು ಅದನ್ನು ನೋಡಿಕೊಳ್ಳಲು ಮಹೇಶ ಹಾಗೂ ಆತನ ಹೆಂಡತಿಯನ್ನು ಬಿಟ್ಟಿದ್ದು , ದಿನಾಂಕ 06-07-2021 ರಂದು ರಾತ್ರಿ ಕುರಿಶೆಡ್ ನ ಬೀಗವನ್ನು ಹೊಡೆದು 7 ಕುರಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನವಾಗಿರುವ ಕುರಿಗಳ ಅಂದಾಜು ಬೆಲೆ 38,000/- ರೂ ಗಳಾಗಿರುತ್ತೆ. ಕಳುವಾಗಿರುವ ಕುರಿಗಳನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 08-07-2021 06:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080