ಅಭಿಪ್ರಾಯ / ಸಲಹೆಗಳು

ಕಳ್ಳತನ  ಪ್ರಕರಣ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ;08/08/2021 ರಂದು ಪಿರ್ಯಾದುದಾರರಾದ ಅಣ್ಣಪ್ಪ ಬಿನ್ ಗಂಗಪ್ಪ ಭಕ್ತನಕಟ್ಟೆ ವಾಸಿ ನೀಡಿದ ದೂರಿನಲ್ಲಿ  ದಿನಾಂಕ;06/08/2021 ರಂದು ರಾತ್ರಿ ಪಿರ್ಯಾಧಿಯವರು 10.00 ಗಂಟೆ ಸಮಯದಲ್ಲಿ 10 ಕುರಿಗಳನ್ನು ದನದ ಕೊಟ್ಟಿಗೆಗೆ ಕಟ್ಟಿ ಹಾಕಿದ್ದು , ರಾತ್ರಿ 2.00 ಗಂಟೆ ಸಮಯದಲ್ಲಿ 10 ಕುರಿಗಳು ಇದ್ದು , ನಂತರ ದಿನಾಂಕ 07/08/2021 ಬೆಳಗಿನ ಜಾವ 3.00 ಗಂಟೆಯಿಂದ 4.30 ಗಂಟೆಯ ಒಳಗೆ ಯಾರೋ ಕಳ್ಳರು ಪಿರ್ಯಾದಿಯ ಬಾಬ್ತು 10 ಕುರಿಗಳನ್ನು  ಹಾಗೂ ಪಿರ್ಯಾದಿ ಅಣ್ಣನ ಮಗ ಮಹಾಂತೇಶ್ ಇವರ ಬಾಬ್ತು 02 ಕುರಿಗಳು  ಒಟ್ಟು 12 ಕುರಿಗಳನ್ನು ಅಂದಾಜು ಬೆಲೆ 60,000/- ಕಳ್ಳತನ ಮಾಡಿಕೊಂಡು ಹೋಗಿದ್ದು ಈ ವರೆಗೂ ಹುಡುಕಾಡಿದರೂ ಕುರಿಗಳು ಪತ್ತೆ ಅಗಿಲ್ಲವೆಂದು ಕಳವುವಾಗಿರುವ ಕುರಿಗಳನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.   

ಮನುಷ್ಯ ಕಾಣೆ ಪ್ರಕರಣ

ಎನ್. ಆರ್. ಪೊಲೀಸ್ ಠಾಣೆ.

ದಿನಾಂಕ;08-08-2021 ರಂದು ಶಂಕರ ಬಿನ್ ಕಿಟ್ಟಯ್ಯ ಎಂಬುವರು ನೀಡಿದ ದೂರಿನಲ್ಲಿ ನನ್ನ ತಂದೆ ಕಿಟ್ಟಯ್ಯ ಇವರಿಗೆ ಆರೋಗ್ಯ ಸರಿಯಿಲ್ಲದೆ ನನ್ನ ತಂಗಿ ಗುಲಾಬಿಯ ಊರಾದ ಮಕ್ಕಿಮನೆ ಯಲ್ಲಿ ವಾಸವಿದ್ದು, ದಿನಾಂಕ 03/08/2021 ರಂದು ನನ್ನ ತಂದೆ ಊಟ ಮಾಡಿ ಮಲ್ಲಗಿದ್ದವರು ದಿನಾಂಕ 04/08/2021 ರಂದು  ಬೆಳಿಗ್ಗೆ ನೋಡಿದಾಗ ಮನೆ ಬಿಟ್ಟು ಹೋಗಿದ್ದು , ನನ್ನ ತಂದೆಯನ್ನು ಈವರೆಗೂ ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆ ಅಗಿಲ್ಲವೆಂದು ಕಾಣೆಯಗಿರುವ ತನ್ನ ತಂದೆ ಕಿಟ್ಟಯ್ಯ, 70 ವರ್ಷ ಪ್ರಾಯ ಇವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಎನ್.ಆರ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 08-08-2021 07:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080