ಅಭಿಪ್ರಾಯ / ಸಲಹೆಗಳು

ಕಳ್ಳತನ ಪ್ರಕರಣ

 ಜಯಪುರ ಪೊಲೀಸ್ ಠಾಣೆ.

 ದಿನಾಂಕ:07-01-2022 ರಂದು ಪಿರ್ಯಾದಿ ಸದಾನಂದ, ದುರ್ಗನಗರ ಅಗಳಗಂಡಿ ಕೊಪ್ಪ ತಾಲ್ಲೋಕು  ವಾಸಿ  ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು ದಿನಾಂಕ;06-01-2022 ರಂದು ಮನೆಗೆ ಬೀಗ ಹಾಕಿಕೊಂಡು ಶೃಂಗೇರಿ ಹಾಲುಗಾರಿಗೆ ಹೋಗಿದ್ದು ನಂತರ ದಿನಾಂಕ 07/01/2022 ರಂದು ವಾಪಾಸ್ಸು ಬಂದು ನೋಡಲಾಗಿ ಮನೆಯ ಮುಂಬಾಗಿಲು ತೆರೆದಿದ್ದು , ಮನೆಯ ಬಾಗಿಲನ್ನು ಯಾರೋ ಕಳ್ಳರು  ಒಂದು ಕಬ್ಬಿಣದ ರಾಡಿನಿಂದ ಮನೆಗೆ ಹಾಕಿದ್ದ ಬೀಗವನ್ನು ಮುರಿದು ಮನೆಯ ಒಳ ಪ್ರವೇಶಿಸಿ ಮನೆಯ ಗಾಡ್ರೇಜ್ ಬೀರುವಿನಲ್ಲಿದ್ದ 1] ಸುಮಾರು 24,000/- ಬೆಲೆಯ 6 ಗ್ರಾಂ ತೂಕದ ಬಂಗಾರದ ಚೈನ್ 2] ಸುಮಾರು 16,000/- ರೂ ಬೆಲೆಯ 4 ಗ್ರಾಂ ತೂಕದ ಒಂದು ಜೊತೆ ಓಲೆ 3] ಸುಮಾರು 40,000/- ರೂ ಬೆಲೆಯ 10 ಗ್ರಾಂ ತೂಕದ 3 ಬಂಗಾರದ ಉಂಗುರುಗಳು ಹಾಗೂ 2000/- ರೂ ನಗದು ಹಣವನ್ನು  ಒಟ್ಟು 82,000/- ರೂ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಚಿನ್ನದ ವಡೆವೆಗಳನ್ನು ಹಾಗೂ ನಗದು ಹಣವನ್ನು  ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಜಯಪುರ ಪೊಲೀಸ್ ಠಾಣೆ.

ದಿನಾಂಕ:07-01-2022 ರಂದು ಪಿರ್ಯಾದಿ ಗಿರಿಜಾ ಕೊಂ ಬೋಜ ದುರ್ಗನಗರ ಅಗಳಗಂಡಿ ಕೊಪ್ಪ ತಾಲ್ಲೋಕು  ವಾಸಿ  ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು ದಿನಾಂಕ 07-01-2022 ರಂದು ಮನೆಗೆ ಬೀಗ ಹಾಕಿಕೊಂಡು ಕೂಳಿ ಕೆಲಸಕ್ಕೆ ಹೋಗಿದ್ದು ಮದ್ಯಾಹ್ನ ಮನೆಗೆ  ವಾಪಾಸ್ಸು ಬಂದು ನೋಡಲಾಗಿ ಮನೆಯ ಮುಂಬಾಗಿಲು ತೆರೆದಿದ್ದು, ಮನೆಯ ಬಾಗಿಲನ್ನು ಯಾರೋ ಕಳ್ಳರು  ಬಾಗಿಲಿನ ಬೀಗ ಒಡೆದು ಮನೆಯ ಒಳ ಪ್ರವೇಶಿಸಿ ಮನೆಯ ಬೀರುವಿನಲ್ಲಿ ಇಟ್ಟಿದ್ದ ಮಗಳ ಒಂದು ಜೊತೆ ಬೆಳ್ಳಿ ಕಾಲು ಚೈನು ಬೆಲೆ ಸುಮಾರು 2,000/- ರೂ  ಮತ್ತು 6,700/- ರೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕಳ್ಳರನ್ನು ಮತ್ತು ಸ್ವತ್ತನ್ನು  ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 08-01-2022 07:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080