ಅಭಿಪ್ರಾಯ / ಸಲಹೆಗಳು

ಕಳ್ಳತನ ಪ್ರಕರಣ. 

ಬಣಕಲ್ ಪೊಲೀಸ್ ಠಾಣೆ.

ದಿನಾಂಕ:08/03/2022 ರಂದು ಪಿರ್ಯಾದಿ ಕುಮಾರ್ ಎಂ.ಹೆಚ್. ಜಿ.ಹೆಚ್.ಪಿ.ಎಸ್. ಶಾಲೆಯ ಮುಖ್ಯ ಶಿಕ್ಷಕರು,  ಅತ್ತಿಗೆರೆ, ಬಣಕಲ್ ಮೂಡಿಗೆರೆ ಇವರು ನೀಡಿದ ದೂರಿನಲ್ಲಿ ದಿನಾಂಕ;07/03/2022 ರಂದು ಪಿರ್ಯಾದಿ ರವರು ಶಾಲೆಯಲ್ಲಿ ಬಿಳ್ಕೋಡಿಗೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಶಾಲೆಗೆ ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ 08.03.2022 ರಂದು ಬಂದು ನೋಡಲಾಗಿ ಶಾಲೆಯ ಕಛೇರಿಯ ಹಂಚನ್ನು ಯಾರೋ ಕಳ್ಳರು ತೆಗೆದು ಗಾಡ್ರಜ್ ಬೀರುವಿನ ಲಾಕ್ ಮುರಿದು ಅದರಲ್ಲಿದ್ದ ಶಾಲೆಯ ಪ್ರೋಜೆಕ್ಟರ್ ಅಂದಾಜು ಬೆಲೆ 40000/-ರೂ  ಹಾಗು  2000/- ರೂ ನಗದು ಹಣವನ್ನು  ಕಳ್ಳತನ ಮಾಡಿದ್ದು ಕಳ್ಳರನ್ನು ಪತ್ತೆಮಾಡಿ ಕಳುವಾಗಿರುವ ಸ್ವತ್ತನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ತರೀಕೆರೆ ಪೊಲೀಸ್  ಠಾಣೆ.

ದಿನಾಂಕ:07/03/2022 ರಂದು ಪಿರ್ಯಾದಿ ತಿಮ್ಮಯ್ಯ ಸಿಡುಕನಹಳ್ಳಿ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿ ರವರು ತಮ್ಮ ಬಾಬ್ತು ಹಸು ಮತ್ತು ಕರುವನ್ನು ಅಮೀರ್ ಜಾನ್ ರವರ ಅಡಿಕೆ ತೋಟದಲ್ಲಿರುವ ಕೊಟ್ಟಿಗೆ ಮನೆಯಲ್ಲಿ ಸಾಕಿಕೊಂಡು ಇದ್ದು ದಿನಾಂಕ;04/03/2022 ರಂದು ಕೊಟ್ಟಿಗೆ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ 05.03.2022 ರಂದು ಬಂದು ನೋಡಲಾಗಿ ಕೊಟ್ಟಿಗೆಮನೆಗೆ ಬೀಗವನ್ನು ಯಾರೋ ಕಳ್ಳರು ಮೀಟಿ ಬೀಗ ತೆಗೆದು ಹಸು ಮತ್ತು ಕರುವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಹಸು ಮತ್ತು ಕರುವಿನ  ಅಂದಾಜು ಬೆಲೆ 50000/- ರೂ ಗಳಾಗಿದ್ದು, ಕಳ್ಳರನ್ನು ಪತ್ತೆಮಾಡಿ ಕಳುವಾಗಿರುವ ಹಸು ಮತ್ತು ಕರುವನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ:07/03/2022 ರಂದು ಅಜ್ಜಂಪುರ ಠಾಣಾ ಸರಹದ್ದಿನ ಅಂತರಗಟ್ಟೆ ನರಿಗೆಕಲ್ಲು ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿ ಧರ್ಮರಾಜ್ ಬಿನ್ ಹನುಮಂತಪ್ಪ, ಸಂಕ್ಲಾಪುರ ಕಡೂರು ತಾಲ್ಲೋಕು ವಾಸಿ ಈತನನ್ನು  ವಶಕ್ಕೆ ಪಡೆದುಕೊಂಡಿದ್ದು ಆರೋಪಿತನ ವಶದಲ್ಲಿದ್ದ 1ಲೀಟರ್ 890 ಎಂ.ಎಲ್. ಮದ್ಯವನ್ನು ಅಂದಾಜು ಬೆಲೆ 871 ಹಾಗೂ ಅರೋಪಿತನು ಮಾರಾಟ ಮಾಡಿದ ಮದ್ಯದಿಂದ ಸಂಗ್ರಹಿಸಿದ ಹಣ 100/- ರೂ ವನ್ನು  ಅಮಾನತ್ತುಪಡಿಸಿಕೊಂಡು ಬಂದು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಜಿ.ಕೆ. ಬಸವರಾಜ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಹರಿಹರಪುರ ಪೊಲೀಸ್ ಠಾಣೆ.

ದಿನಾಂಕ; 07-03-2022 ರಂದು ಪಿರ್ಯಾದಿ ಸತೀಶ ಹೆಚ್.ವೈ. ಬಿನ್ ಯೋಗೀಂದ್ರ ಜೋಗಿ  ಚಾಲ್ಮನೆ , ಕೊಪ್ಪ ತಾಲ್ಲೋಕು ರವರು ನೀಡಿದ ದೂರಿನಲ್ಲಿ ಫಿರ್ಯಾದಿ ತಂದೆ ಯೋಗೀಂದ್ರ ಜೋಗಿ ಬಿನ್ ಲೇಟ್ ಗುಂಡ ಜೋಗಿ ರವರು 5.03.2022 ರಂದು ಮದ್ಯಾಹ್ನ ಬಳ್ಳಿ ಕಡಿದುಕೊಂಡು ಬರಲು ಕತ್ತಿಯನ್ನು ತೆಗೆದುಕೊಂಡು ಕಾಡಿನ ಕಡೆ ಹೋದವರು ವಾಪಾಸ್ ಮನೆಗೆ ಬಾರದೇ ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಿದರೂ ಸಹ ಪತ್ತೆಯಾಗಲಿಲ್ಲ. ಕಾಣೆಯಾಗಿರುವ ಯೋಗೀಂದ್ರ ಜೋಗಿ ಬಿನ್ ಲೇಟ್ ಗುಂಡ ಜೋಗಿ, 5.0 ಅಡಿ ಎತ್ತರ, ಎಣ್ಣೆಗೆಂಪು ಮೈ ಬಣ್ಣ ತೆಳು ಶರೀರ ಖಾಕಿ ಬಣ್ಣದ ಚಡ್ಡಿ , ನೀಲಿ ಬಣ್ಣದ ಷರಟು ಧರಿಸಿರುತ್ತಾರೆ. ಕಾಣೆಯಾಗಿರುವ ತನ್ನ ತಂದೆಯನ್ನು ಪತ್ತೆ ಮಾಡಿಕೊಡುವಂತೆ  ನೀಡಿದ ದೂರಿನ ಮೇರೆಗೆ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಡೂರು ಪೊಲೀಸ್ ಠಾಣೆ.

ದಿನಾಂಕ; 08-03-2022 ರಂದು ಪಿರ್ಯಾದಿ ಶ್ರೀಮತಿ ಕೆ.ಎಂ. ರಾಧಿಕಾ ಕೋಂ ಭರತ್ ,ಸಿದ್ದಾರ್ಥ ನಗರ ಕಡೂರು ರವರು ನೀಡಿದ ದೂರಿನಲ್ಲಿ ಫಿರ್ಯಾದಿ ಗಂಡ ಭರತ್ ರವರು 4.03.2022 ರಂದು ಬೆಳಿಗ್ಗೆ ಮನೆಯಿಂದ ಮೊಬೈಲ್ ಅಂಗಡಿಗೆ ಹೋದವರು ವಾಪಾಸ್ ಮನೆಗೆ ಬಾರದೇ ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಿದರೂ ಸಹ ಪತ್ತೆಯಾಗಲಿಲ್ಲ. ಕಾಣೆಯಾಗಿರುವ ಭರತ್, 5.0 ಅಡಿ ಎತ್ತರ, 23 ವರ್ಷ ಎಣ್ಣೆಗೆಂಪು ಮೈ ಬಣ್ಣ ಸಾದಾರಣ ಮೈಕಟ್ಟು, ಕೋಲು ಮುಖ, ಕನ್ನಡ ತಮಿಳು ಮಾತನಾಡುತ್ತಾರೆ. ಎಡಗಡೆ ಭುಜದ ಮೇಲೆ ಗಾಯದ ಗುರುತು ಇರುತ್ತೆ. ಕಾಣೆಯಾಗಿರುವ ತನ್ನ ಗಂಡನನ್ನು  ಪತ್ತೆ ಮಾಡಿಕೊಡುವಂತೆ  ನೀಡಿದ ದೂರಿನ ಮೇರೆಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 08-03-2022 08:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080