ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಕರಣ

ಎನ್.ಅರ್. ಪುರ ಪೊಲೀಸ್ ಠಾಣೆ.

ದಿನಾಂಕ:08/04/2022 ರಂದು ಪಿರ್ಯಾದಿ ಶ್ರೀ ನರೇಶ್ ಎ.ವೈ. ಬಿನ್ ಯೋಗೇಶ್ ಕೆ.ಅರ್. ವಾಸ ಆಳಲಗೆರೆ ಬಡಗಬೈಲು ಗ್ರಾಮ  ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ;07/04/2022 ರಂದು ಪಿರ್ಯಾದಿಯ ಅಣ್ಣ ಶಿರೀಶನು ತಿರುಮಲ ಬಾರ್ ಹತ್ತಿರ ಇದ್ದೇನೆ ಕರೆದುಕೊಂಡು ಬಾ ಎಂದು ಹೇಳಿದಾಗ ಪಿರ್ಯಾದಿ ಆತನನ್ನು ಕರೆದುಕೊಂಡು ಬರಲು ಹೋಗಿದ್ದು ಅಲ್ಲಿ ಶಿರೀಶನಿಗೂ ಮೆಣಸೂರು ಬಾಬುವಿಗೂ ಹಣದ ವಿಚಾರದಲ್ಲಿ ಜಗಳ ಅಗಿದ್ದು, ನಾನು ಶಿರೀಶನನ್ನು ಕರೆದುಕೊಂಡು ಮನೆಗೆ ಬರುತ್ತಿದ್ದಾಗ  ಮೆಣಸೂರು ಬಳಿ ಶಿರೀಶನಿಗೆ ಪೋನ್ ಬಂದಿದ್ದು, ಶಿರೀಶನಿಗೆ ದುಡ್ಡು ಕೊಡುತ್ತೇನೆ ಮನೆಗೆ ಬಾ ಎಂದು ಬಾಬು ಶಿರೀಶನನ್ನು ಕರೆದುಕೊಂಡು ಹೋಗಿದ್ದು ನಂತರ ಶಿರೀಶ ಮನೆಗೆ ವಾಪಾಸ್ಸು ಬರದಿದ್ದಾಗ ಮೆಣಸೂರು ಬಾಬು ಮನೆಯ ಹತ್ತಿರ ನೋಡಲಾಗಿ  ಬಾಬು ಶಿರೀಶ ನನ್ನು ಕತ್ತಿಯಿಂದ ತಲೆಗೆ ಕಡಿದಿದ್ದು, ಕೂಡಲೇ ಶಿರೀಶನನ್ನು ಎನ್.ಆರ್. ಪುರ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಶಿರೀಶನು ಮೃತಪಟ್ಟಿದ್ದು  ಪಿರ್ಯಾದಿ ಅಣ್ಣ ಶಿರೀಶನ  ಸಾವಿಗೆ ಕಾರಣನಾದ ಬಾಬು ರವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಎನ್.ಆರ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮಟ್ಕಾ ಜೂಜಾಟ ಪ್ರಕರಣ

ಬಸವನಹಳ್ಳಿ ಪೊಲೀಸ್ ಠಾಣೆ.

ದಿನಾಂಕ;08/04/2022 ರಂದು ಚಿಕ್ಕಮಗಳೂರು ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ  ಸಮೀರ್ ಬಿನ್ ಮಹಮ್ಮದ್ ಷರೀಪ್  ರವರು ಅಕ್ರಮವಾಗಿ ಮಟ್ಕಾ ಜೂಜಾಟ ಆಡಿಸುತ್ತಿದ್ದ ಅರೋಪಿತರನ್ನು ವಶಕ್ಕೆ ಪಡೆದು, ಅರೋಪಿತರಿಂದ  ಮಟ್ಕಾ ಚೀಟಿ, ಒಂದು ಬಾಲ್ ಪೆನ್ನು ಮತ್ತು 2840/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಬಂದು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಡಿ.ಸಿ.ಐ.ಬಿ. ಪಿ.ಎಸ್.ಐ. ಗೋವಿಂದನಾಯ್ಕ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ದನದ ಮಾಂಸ ಸಾಗಾಣಿಕೆ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ; 08/04/2022 ರಂದು ಚಿಕ್ಕಮಗಳೂರು ನಗರದ ಅಂಜುಮಾನ್ ಬೀದಿಯಲ್ಲಿರುವ  ಕಲೀಂ ರವರ ಮನೆಯಲ್ಲಿ  ಅಕ್ರಮವಾಗಿ ದನದ ಮಾಂಸವನ್ನು ಮಾಡುತ್ತಿದ್ದ ಎಹೆತಾ ಶಾಮ್ ಬಿನ್ ಇಕ್ಬಾಲ್ ಅಹ್ಮದ್  ವಾಸ ಶಾದುಲಿ ನಗರ ಉಪ್ಪಳ್ಳಿ ವಾಸಿ ಈತನನ್ನು ವಶಕ್ಕೆ ಪಡೆದು ನೋಡಲಾಗಿ 25 ಕೆ.ಜಿ. ದನದ ಮಾಂಸವನ್ನು ಅಂದಾಜು ರೂ 1040/- ರೂ ಅಗಿದ್ದು, ದನದ ವನ್ನು ಕಡಿಯಲು ಬಳಸಿದ ಪರಿಕರಗಳನ್ನು ದನದ ಮಾಂಸವನ್ನು ಆಮಾನತ್ತುಪಡಿಸಿಕೊಂಡು ಬಂದು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ನಾಗೇಂದ್ರನಾಯ್ಕ ಹೆಚ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಮನುಷ್ಯ ಕಾಣೆ ಪ್ರಕರಣ.

ಕಡೂರು ಪೊಲೀಸ್ ಠಾಣೆ.

ದಿನಾಂಕ:08/04/2022 ರಂದು ಪಿರ್ಯಾದಿ ರೇಣುಕಪ್ಪ ವಾಸ ಗೆದ್ಲೆಹಳ್ಳಿ ಗ್ರಾಮ, ಇವರು ನೀಡಿದ ದೂರಿನಲ್ಲಿ ಪಿರ್ಯಾದಿ ಮಗಳು ಹೇಮಲತಾ ಜಿ.ಅರ್. ಇವಳು ಕಡೂರು ಕಾಲೇಜಿನಲ್ಲಿ ಪದವಿ ಓದುತ್ತಿದ್ದು,  ದಿನಾಂಕ 07/04/2022 ರಂದು  ಮನೆಯಿಂದ ಕಾಲೇಜಿಗೆ ಪರೀಕ್ಷೆಗೆ ಹೋದವಳು ವಾಪಾಸ್ಸು ಮನೆಗೆ ಬಾರದೇ  ಕಾಣೆಯಾಗಿದ್ದು,  ಈ ವರೆಗೂ ಎಲ್ಲಾ ಕಡೆಯಲ್ಲಿಯೂ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಹೇಮಲತಾ ಜಿ.ಆರ್,  21 ವರ್ಷ, 5.3 ಅಡಿ ಎತ್ತರ, ಕೋಲುಮುಖ, ಬಿಳಿ ಮೈ ಬಣ್ಣ, ಕಪ್ಪು ಕೂದಲು, ಹಳದಿ ಬಣ್ಣದ ಟಾಪ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಚೂಡಿದಾರ್ ಧರಿಸಿರುತ್ತಾಳೆ.  ಕನ್ನಡ ಬಾಷೆ ಮಾತನಾಡುತ್ತಾಳೆ. ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 08-04-2022 07:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080