ಅಭಿಪ್ರಾಯ / ಸಲಹೆಗಳು

 

ಮನುಷ್ಯ ಕಾಣೆ  ಪ್ರಕರಣ.

ತರೀಕೆರೆ  ಪೊಲೀಸ್ ಠಾಣೆ.

ದಿನಾಂಕ 08-05-2022 ರಂದು ಅನಂದಪ್ಪ ಬಿನ್ ಯಲ್ಲಪ್ಪ, ಎಂ.ಸಿ. ಹಳ್ಳಿ ತರೀಕೆರೆ ವಾಸಿ ರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಮಗಳಾದ ಮಂಜುಳಾ , ಶಿಲ್ಪ, ಹಗೂ ನವೀನ್ ಇವರು ದಿನಾಂಕ;04/05/2022 ರಂದು ರಾತ್ರಿ ಕೋಳಿ ಫಾರಂ ನಲ್ಲಿ ಮಲಗಲು ಹೋಗುತ್ತೇವೆ ಎಂದು ಹೇಳಿ ಹೋದವರು ದಿನಾಂಕ 05/05/2022 ರಂದು ಬೆಳಿಗ್ಗೆ ಹೋಗಿ ನೋಡಲಾಗಿ ಎಲ್ಲರೂ ಕಾಣೆಯಾಗಿರುತ್ತಾರೆ. ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಎಂ. ನವೀನ್ ಬಿನ್ ಮಾರಣ್ಣ, 21 ವರ್ಷ, ಕೋಲುಮುಖ, ಸಾದಾರಣ ಮೈಕಟ್ಟು, ಕಪ್ಪು ಮೈ ಬಣ್ಣ ಕುರುಚಲು ಗಡ್ಡ ಬಿಟ್ಟಿರುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಾನೆ. ವಾಸ ಪಟ್ರಳ್ಳಿ ಹಿರಿಯೂರು  2.] ಮಂಜುಳ ಬಿನ್ ಅನಂದಪ್ಪ , 22 ವರ್ಷ, ದೊರೆಸ್ವಾಮಿ ಕಾಂಪೌಂಡ್ ಎಂ.ಸಿ. ಹಳ್ಳಿ, ತರೀಕೆರೆ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈ ಕಟ್ಟು, ಎಡಕೈ ಮೇಲೆ ಅಪ್ಪ ಎಂಬ ಹಚ್ಚೆ ಗುರುತು ಇರುತ್ತೆ ಕನ್ನಡ ಬಾಷೆ ಮಾತಾನಾಡುತ್ತಾಳೆ. ಮನೆಯಿಂದ ಹೋಗುವಾಗ ಚೂಡಿದಾರ ಧರಿಸಿರುತ್ತಾರೆ. 3.] ಶಿಲ್ಪ ಬಿನ್ ಅನಂದಪ್ಪ, 16 ವರ್ಷ, ದೊರೆಸ್ವಾಮಿ ಕಾಂಪೌಂಡ್ ಎಂ.ಸಿ. ಹಳ್ಳಿ, ತರೀಕೆರೆ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈ ಕಟ್ಟು, ಕನ್ನಡ ಬಾಷೆ ಮಾತಾನಾಡುತ್ತಾಳೆ. ಮನೆಯಿಂದ ಹೋಗುವಾಗ ಚೂಡಿದಾರ ಧರಿಸಿರುತ್ತಾರೆ. ಕಾಣೆಯಾಗಿರುವ ನನ್ನ ಮಕ್ಕಳಾದ ಮಂಜುಳಾ, ಶಿಲ್ಪ ಹಾಗೂ ನವೀನ್ ಇವರನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮಟ್ಕಾ ಜೂಜಾಟ ಪ್ರಕರಣ

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ;07/05/2022 ರಂದು ತರೀಕೆರೆ ಪಟ್ಟಣದ ಎ.ಪಿ.ಎಂ.ಸಿ, ಗೇಟ್ ಬಳಿ  ಅನಂದ ಕೆ.ಆರ್. ಬಿನ್ ಲೇಟ್ ರಾಮಣ್ಣ, ಕೋಡಿ ಕ್ಯಾಂಪ್, ತರೀಕೆರೆ ಟೌನ್, ರವರು ಅಕ್ರಮವಾಗಿ ಮಟ್ಕಾ ಜೂಜಾಟ ಆಡಿಸುತ್ತಿದ್ದ ಅರೋಪಿತರನ್ನು ವಶಕ್ಕೆ ಪಡೆದು, ಅರೋಪಿತರಿಂದ  ಮಟ್ಕಾ ಚೀಟಿ, ಒಂದು ಬಾಲ್ ಪೆನ್ನು ಮತ್ತು 2540/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಬಂದು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ತರೀಕೆರೆ ಪಿ.ಎಸ್.ಐ. ಅನಿಲ್ ಕುಮಾರ್ ನಾಯ್ಕ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ.

ಸಿಂಗಟಗೆರೆ ಪೊಲೀಸ್ ಠಾಣೆ.

ದಿನಾಂಕ:07-05-2022 ರಂದು ಸಿಂಗಟಗೆರೆ ಪೊಲೀಸ್ ಠಾಣಾ ಸರಹದ್ದಿನ ದೇವರಳ್ಳಿ ಗೇಟ್ ಬಳಿ ಕೆಂಗುರುಬರಹಟ್ಟಿ ಗ್ರಾಮ ಬಾಣಾವಾರ ವಾಸಿ ಹುಲುಗಪ್ಪ ಬಿನ್ ಲೇಟ್ ತಿಪ್ಪಯ್ಯ, ಈತನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಅರೋಪಿಯನ್ನು ವಶಕ್ಕೆ ಪಡೆದು  ಅರೋಪಿ ವಶದಲ್ಲಿ ಇದ್ದ 90 ಎಂ.ಎಲ್. ನ 40 ರಾಜಾವಿಸ್ಕಿ ಪ್ಯಾಕೆಟ್ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಮದ್ಯದ ಅಂದಾಜು ಬೆಲೆ 1400/- ರೂ ಗಳಾಗಿರುತ್ತೆ. ಆರೋಪಿ ಹುಲುಗಪ್ಪ ವಿರುದ್ದ ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಶ್ರೀಮತಿ ಲೀಲಾವತಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ನಗರ ಪೊಲೀಸ್ ಠಾಣೆ.

ದಿನಾಂಕ:07-05-2022 ರಂದು ನಗರ ಪೊಲೀಸ್ ಠಾಣಾ ಸರಹದ್ದಿನ ಕೆ.ಎಸ್.ಆರ್.ಟಿ.ಸಿ. ಡಿಪೋ ಎದುರು  ಎಸ್.ಎಂ. ಗಂಗೇಗೌಡ ಬಿನ್ ಲೇಟ್ ಮಂಜೇಗೌಡ ಶಿರವಳಲು ವಸ್ತಾರೆ ಹೋಬಳಿ ಇವರು ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದು, ಅರೋಪಿಯನ್ನು ವಶಕ್ಕೆ ಪಡೆದು  ಅರೋಪಿ ವಶದಲ್ಲಿ ಇದ್ದ 8 ಲೀಟರ್ 500 ಎಂ.ಎಲ್. ನ ಮಧ್ಯವನ್ನು ಅಮಾನತ್ತುಪಡಿಸಿಕೊಂಡಿದ್ದು, ಮದ್ಯದ ಅಂದಾಜು ಬೆಲೆ 4072.86/- ರೂ ಗಳಾಗಿರುತ್ತೆ. ಆರೋಪಿ ಎಸ್.ಎಂ. ಗಂಗೇಗೌಡ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಡಿಸಿಐಬಿ ಪಿಎಸ್ಐ ಗೋವಿಂದನಾಯ್ಕ ಬಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಗೋಣಿಬೀಡು ಪೊಲೀಸ್ ಠಾಣೆ.

ದಿನಾಂಕ;07-05-2022 ರಂದು ಪಿರ್ಯಾದಿ ದೇವರಾಜ ಡಿ.ಜೆ. ಕುಂಬರಡಿ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾಧಿ ಬೆಳಿಗ್ಗೆ 8-00 ಗಂಟೆಗೆ ಕೆಲಕ್ಕೆ ಮನೆಯ ಬೀಗ ಹಾಕಿಕೊಂಡು ಹೋಗಿದ್ದು ವಾಪಾಸ್ಸು 3.30 ಗಂಟೆಗೆ ಬಂದು ನೋಡಲಾಗಿ ಮನೆಯ ಮೇಲ್ಚಾವಣಿಯ ಹೆಂಚನ್ನು ಯಾರೋ ತೆಗೆದು ಒಳಗೆ ಬಂದು ಮನೆಯ ಬೀರುವಿನ ಬೀಗ ತೆಗೆದು ಬೀರುವಿನಲ್ಲಿದ್ದ 25,000/- ರೂ ನಗದು ಹಣ ಮತ್ತು 2 ಚಿನ್ನದ ಉಂಗುರಗಳು ಅಂದಾಜು ಮೌಲ್ಯ 17,000/- ರೂ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳರನ್ನು ಪತ್ತೆ ಮಾಡಿ ಕಳ್ಳತನವಾಗಿರುವ ನಗದು ಹಣ ಮತ್ತು ಉಂಗುರಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 08-05-2022 07:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080