ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ.

ಗೋಣಿಬೀಡು ಪೊಲೀಸ್ ಠಾಣೆ.

ದಿನಾಂಕ 08-06-2022 ರಂದು ರಘುಕುಮಾರ್ ಬಿನ್ ಕುಮಾರಪ್ಪ, ದೇವವೃಂದ ವಾಸಿರವರು ನೀಡಿದ  ದೂರಿನ ಸಾರಾಂಶವೇನೆಂದರೆ ನಾನು  ನನ್ನ ಹೆಂಡತಿ ಲಕ್ಷ್ಮಿಯೊಂದಿಗೆ ದೇವವೃಂದದ ನಾಗರತ್ನರವರ ತೋಟದಲ್ಲಿ ಕೂಲಿಕೆಲಸ ಮಾಡಿಕೊಂಡು ವಾಸವಾಗಿದ್ದು, ದಿನಾಂಕ 06-06-2022 ರಂದು ನನ್ನ ಹೆಂಡತಿ ಲಕ್ಷ್ಮಿ ನನಗೆ ಆರೋಗ್ಯ ಸರಿಯಿಲ್ಲ ನಾನು ಕೂಲಿ ಕೆಲಸಕ್ಕೆ ಬರುವುದಿಲ್ಲವೆಂದು ಹೇಳಿ ಮನೆಯಲ್ಲಿಯೆ ಇರುತ್ತೇನೆಂದು ಹೇಳಿದ್ದು , ನಾನು ಕೂಲಿಕೆಲಸಕ್ಕೆ ಹೋಗಿ ಮದ್ಯಾಹ್ನ ಊಟಕ್ಕೆ ಮನೆಗೆ ಬಂದಾಗ ನನ್ನ ಹೆಂಡತಿ ಮನೆಯಲ್ಲಿ ಇರಲಿಲ್ಲ. ಅವಳನ್ನು ಎಲ್ಲಾ ಕಡೆ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ನನ್ನ ಹೆಂಡತಿ ಲಕ್ಷ್ಮಿರವರನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಗೋಣಿಬೀಡು  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಅಕ್ರಮ  ಗೋ ಮಾಂಸ ಮಾರಾಟ ಪ್ರಕರಣ

ನಗರ  ಪೊಲೀಸ್ ಠಾಣೆ .

ದಿನಾಂಕ: 06/06/2021  ರಂದು ಸಂಜೆ 05-30 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ನಗರದ ತಮಿಳು ಕಾಲೋನಿಯ ಚಾಮುಂಡಿ ಕಾಫಿ ಕ್ಯೂರಿಂಗ್ ಹಿಂಭಾಗದ ಗೋಡನ್ನಲ್ಲಿ ಮಹಮದ್ ಇಕ್ಬಾಲ್ ಖುರೇಶಿ ಎಂಬಾತನು ಅಕ್ರಮವಾಗಿ  ದನವನ್ನು ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಬಂದಿದೆ ಎಂದು ತಿಳಿಸಿದ್ದು ಪಂಚರೊಂದಿಗೆ ದಾಳಿ ನಡೆಸಿದ್ದು ದನವನ್ನು ಕಡಿದು ಮಾರಾಟ ಮಾಡುತ್ತಿದ್ದವರನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1)ಮಹಮದ್ ಇಕ್ಬಾಲ್ ಖುರೇಶಿ ಬಿನ್ ಫಜಲೂರ್ ರೆಹಮಾನ್ 2) ಸುಹೇಲ್ ಬಿನ್ ಅಬ್ದುಲ್ ರಶೀದ್ 3) ಪಾಜಿಲ್ ಬಿನ್ ಅಬ್ದುಲ್ ರಶೀದ್ ಎಲ್ಲರೂ ಟಿಪ್ಪುನಗರ, ಚಿಕ್ಕಮಗಳೂರು ಟೌನ್ ವಾಸಿಗಳಾಗಿದ್ದು  ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾರಾಟ ಮಾಡುತ್ತಿದ್ದರಿಂದ ಆರೋಪಿತರುಗಳನ್ನು ವಶಕ್ಕೆ ಪಡೆದು  ಅವರ ವಶದಲ್ಲಿದ್ದ ಸುಮಾರು 80 ಕೆಜಿಯಷ್ಟು ದನದ ಮಾಂಸ , 16 ಗೊರಸುಗಳು, ಒಂದು ಎಲೆಕ್ಟ್ರಾನಿಕ್ ಯಂತ್ರ, ಮೂರು ಕತ್ತಿಗಳು, ಎರಡು ಚಾಕುಗಳು, , ಎರಡು ಹರಗಳನ್ನು ವಶಕ್ಕೆ ಪಡೆದು,  ಆರೋಪಿತರುಗಳ ವಿರುದ್ದ ನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ನಗರ ಠಾಣಾ ಪಿ.ಎಸ್.ಐ. ನಾಗೇಂದ್ರನಾಯ್ಕ್  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಅಕ್ರಮ ಮದ್ಯ ಮಾರಾಟ ಪ್ರಕರಣ.

ಶೃಂಗೇರಿ ಪೊಲೀಸ್ ಠಾಣೆ.

ದಿನಾಂಕ 07-06-2022 ರಂದು ಸಂಜೆ 05-30 ಗಂಟೆ ಸಮಯದಲ್ಲಿ ಶೃಂಗೇರಿ ಠಾಣಾ ಸರಹದ್ದಿನ ಅಡ್ಡಗದ್ದೆಯಿಂದ ಶೃಂಗೇರಿ ಕಡೆಗೆ ಹೋಗುವಾಗ ಸಿಗುವ ಕೊನೆಯ ಪಾಳುಬಿದ್ದ ಬಸ್ ನಿಲ್ದಾಣದ ಮುಂಭಾಗದಲ್ಲಿ ವಿಶ್ವನಾಥ ಬಿನ್ ರಾಜುಪೂಜಾರಿ, 54 ವರ್ಷ, ಅಡ್ಡಗದ್ದೆ ಗ್ರಾಮ ವಾಸಿ ಈತನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ 90 ಎಂ.ಎಲ್ ನ ಓರಿಜಿನಲ್ ಚಾಯ್ಸ್ ವಿಸ್ಕಿಯ 100 ಪೌಚ್ ಗಳನ್ನು ವಶಕ್ಕೆ ಪಡೆದಿದ್ದು, ಮದ್ಯದ ಅಂದಾಜು ಬೆಲೆ 3513/- ರೂ ಆಗಿರುತ್ತೆ , ಮದ್ಯವನ್ನು ಅಮಾನತ್ತುಪಡಿಸಿಕೊಂಡು ಆರೋಪಿಯ ವಿರುದ್ದ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಶೃಂಗೇರಿ ಠಾಣಾ ಪಿ.ಐ. ರವಿ. ಬಿ.ಎಸ್.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಇತ್ತೀಚಿನ ನವೀಕರಣ​ : 08-06-2022 06:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080