ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ  ಪ್ರಕರಣ.
ಅಜ್ಜಂಪುರ  ಪೊಲೀಸ್ ಠಾಣೆ.
ದಿನಾಂಕ 08-09-2021 ರಂದು ಪಿರ್ಯಾದಿ ಹರೀಶ್ ಡಿ.ಎಸ್. ನೀಡಿದ ದೂರೇನೆಂದರೆ, ದಿನಾಂಕ 04-04-2021 ರಂದು ರಾತ್ರಿ ಪಿರ್ಯಾದಿ ತಮ್ಮ ನಿರಂಜನಮೂರ್ತಿಯು ಪಿರ್ಯಾದಿ ಬಾಬ್ತು ಬೈಕಿನಲ್ಲಿ ಮನೆಯಲ್ಲಿ ಯಾರೀಗೂ ತಿಳಿಸದೇ ಎಲ್ಲಿಗೋ ಹೋಗಿದ್ದು ನಂತರ ಬೈಕ್ ನ್ನು ಬುಕ್ಕಂಬೂದಿಯ ಬಸ್ ನಿಲ್ದಾಣಕ್ಕೆ ಹೋಗಿ ಅಲ್ಲಿ ನಿಲ್ಲಿಸಿ  ಹೋಗಿದ್ದು ತಿಳಿದಿದ್ದು ಈವರೆಗೂ ಎಲ್ಲಾ ಕಡೆಯೂ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ನಿರಂಜನಮೂರ್ತಿ, 34 ವರ್ಷ, ಎತ್ತರ 5.7 ಅಡಿ ದೃಡಕಾಯ  ಶರೀರ, ಗೋದಿ ಮೈಬಣ್ಣ ಕನ್ನಡ ಬಾಷೆ ಮಾತಾನಾಡುತ್ತಾನೆ. ಬಲಗೈಯಲ್ಲಿ ಚೆಲುವ ಎಂಬ ಅಚ್ಚೆ ಗುರುತು ಇರುತ್ತೆ ಗಡ್ಡ ಸಣ್ಣದಾಗಿ ಬಿಟ್ಟಿರುತ್ತಾನೆ. ಜಿನ್ಸ್  ಪ್ಯಾಂಟ್ ಧರಿಸುತ್ತಾನೆ. ಎಂದು ಕಾಣೆಯಾಗಿರುವ ನನ್ನ ತಮ್ಮ ನಿರಂಜನಮೂರ್ತಿಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಅಜ್ಜಂಫುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ 08/09/2021 ರಂದು ಪಿರ್ಯಾದಿ ಗಣೇಶ್ ರಾಮನಾಯ್ಕ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯು ತರೀಕೆರೆ ಪಟ್ಟಣದ ಅಸ್ಪತ್ರೆಯ ಹಿಂಭಾಗದ  ಹಾಲಿನ ಡೈರಿಯ ಹತ್ತಿರ ಬಾಡಿಗೆ ಮನೆಯಲ್ಲಿ ಇದ್ದು  ದಿನಾಂಕ 05/07/2021 ರಂದು  ತನ್ನ ಬಾಭ್ತು ಕೆಎ-47 ಜೆ 7428  ನೇ ನಂಬರ್ ನ ಹಿರೋ ಹೊಂಡಾ ಸ್ಲೆಂಡರ್ ವಾಹನವನ್ನು ನಿಲ್ಲಿಸಿ ಸ್ವಂತ ಊರಾದ ಮುರುಡೇಶ್ವರಕ್ಕೆ ಹೋಗಿದ್ದು  ದಿನಾಂಕ;12/07/2021 ರಿಂದ 13/07/2021 ರ ಬೆಳಿಗ್ಗೆ 6-00 ಗಂಟೆಯ ಮದ್ಯದ ಅವಧಿಯಲ್ಲಿ ಸದರಿ ಬೈಕನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು, ಅದರ ಬೈಕಿನ ಬೆಲೆ 45,000/- ರೂ ಗಳಾಗಿದ್ದು  ಈ ವರೆಗೂ ಬೈಕನ್ನು ಹುಡುಕಿದರೂ ಸಹ ಪತ್ತೆಯಾಗಿಲ್ಲವೆಂದು ಕಳುವಾಗಿರುವ ಬೈಕನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
  ಅಕ್ರಮ ಮದ್ಯ ಮಾರಾಟ ಪ್ರಕರಣ

ಲಕ್ಕವಳ್ಳಿ  ಪೊಲೀಸ್ ಠಾಣೆ

ದಿನಾಂಕ 07/09/2021 ರಂದು 15-30 ಗಂಟೆ ಸಮಯದಲ್ಲಿ ಬಾವಿಕೆರೆ ಮಸೀದಿ ಪಕ್ಕದ ರಸ್ತೆಯಲ್ಲಿ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಎಂಬುವವನನ್ನು ವಶಕ್ಕೆ ಪಡೆದು ಆರೋಪಿತನು ಹೊಂದಿದ್ದ 36 ಪ್ಯಾಕ್ 90 ಎಂ.ಎಲ್ ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ ಪೌಚ್ ಗಳನ್ನು  ವಶಕ್ಕೆ ಪಡೆದಿದ್ದು ಮದ್ಯದ ಅಂದಾಜು ಬೆಲೆ 1250/ - ರೂ ಆಗಿರುತ್ತೆ, ಆರೋಪಿ ವಿರುದ್ದ ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ಮೇಘ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಕೊಪ್ಪ  ಪೊಲೀಸ್ ಠಾಣೆ

ದಿನಾಂಕ 07/09/2021 ರಂದು 13-00 ಗಂಟೆ ಸಮಯದಲ್ಲಿ ಕೊಪ್ಪ ಕಡೆಯಿಂದ ಬೆಳಗೋಡು ರಸ್ತೆ ಕಡೆಗೆ ಬೈಕಿನಲ್ಲಿ ಹೆಚ್.ಹೊಸೂರು ವಾಸಿ ಪವನ್ ಎಂಬುವನು ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಲಾಗಿ ಪೊಲೀಸ್ ಜೀಪನ್ನು ನೋಡಿ ಪವನ್ ಬೈಕ್ ನ್ನು ಬಿಟ್ಟು ಓಡಿಹೋಗಿದ್ದು ಬೈಕ್ ನ್ನು ಪರಿಶೀಲಿಸಲಾಗಿ ಹಳದಿ ಪ್ಲಾಸ್ಟಿಕ್ ಚೀಲದಲ್ಲಿ 90 ಎಂ.ಎಲ್ .ನ 96 ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ ಪೌಚ್ ಗಳಿದ್ದು , ಮದ್ಯದ ಅಂದಾಜು ಬೆಲೆ 6,744/ - ರೂ ಆಗಿರುತ್ತೆ, ಬೈಕನ್ನು ಅಮಾನತ್ತುಪಡಿಸಿಕೊಂಡು ಆರೋಪಿ ವಿರುದ್ದ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ಶ್ರೀನಾಥ್ ರೆಡ್ಡಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕರ್ನಾಟಕ ಜಾನುವಾರು ಕಳ್ಳತನ ಹಾಗೂ ಹತ್ಯಾ ಪ್ರತಿಬಂಧಕ ಸಂರಕ್ಷಣಾ ಆದ್ಯಾದೇಶ-2020

ಬಾಳೊಹೊನ್ನೂರು  ಪೊಲೀಸ್ ಠಾಣೆ .

ದಿನಾಂಕ 07-09-2021 ರಂದು ಪಿರ್ಯಾದುದಾರರದ ಅನಿಲ್ ಬಿನ್ ಕೃಷ್ಣೇಗೌಡ, ಹಲಸೂರು ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 06-09-2021 ರಂದು ಬೆಳಗ್ಗೆ ಜಾನುವಾರುಗಳನ್ನು ಕಾಡಿಗೆ ಮೇಯಲು ಬಿಟ್ಟಿದ್ದು , ಅದರಲ್ಲಿ 5 ವರ್ಷ ಪ್ರಾಯದ  ಎತ್ತು ಮನೆಗೆ ಬಂದಿರಲಿಲ್ಲ. ದಿನಾಂಕ 07-09-2021 ರಂದು ಬೆಳಗ್ಗೆ ಮನೆಗೆ ಬಾರದ ಎತ್ತನ್ನು ಹುಡುಕುತ್ತಾ ಹೋದಾಗ ಹಲಸೂರು ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಒಂದು ಮರದ ಕೆಳಗೆ ಜಾನುವಾರುವನ್ನು ಕಡಿದು ಮಾಂಸಮಾಡಿರುವಂತೆ ಕಂಡುಬಂದಿದ್ದು , ಯಾರೋ ಕಳ್ಳರು ಕಾಡಿಗೆ ಮೇಯಲು ಹೋಗಿದ್ದ ಜಾನುವಾರುವನ್ನು ಕಳ್ಳತನದಿಂದ ಹಿಡಿದು ಕಡಿದು ಮಾಂಸ ಮಾಡಿ ತೆಗೆದುಕೊಂಡು ಹೋಗಿರುತ್ತಾರೆಂದು , ಅವರುಗಳನ್ನು ಪತ್ತೆ ಮಾಡಬೇಕೆಂದು ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.        

ಕಳ್ಳತನ ಪ್ರಕರಣ.

ಅಜ್ಜಂಪುರ  ಪೊಲೀಸ್ ಠಾಣೆ,

ದಿನಾಂಕ 07-09-2021 ರಂದು ಸುರೇಶ ಎಂಬುವವರು ನೀಡಿದ ದೂರಿನ ಸಾರಾಂಶವೇನೆಂದರೆ , ಈಗ್ಗೆ 1 ತಿಂಗಳ ಹಿಂದೆ  ನನ್ನ ಹೆಂಡತಿ ನಿರ್ಮಲಾರವರು ಬಾಣಂತನಕ್ಕಾಗಿ ತನ್ನ ತವರೂರಾದ ಹೊಸದುರ್ಗ ತಾಲ್ಲೂಕಿನ ಪೀರಾಪುರಕ್ಕೆ ಹೋಗಿದ್ದು ,ದಿನಾಂಕ 05-09-2021 ರಂದು ಮದ್ಯಾಹ್ನ ನನ್ನ ಮಗುವಿಗೆ ಅನಾರೋಗ್ಯದ ಕಾರಣ ಮಲ್ಲೇನಹಳ್ಳಿಯಲ್ಲಿರುವ ನನ್ನ ಮನೆಗೆ ಬೀಗಹಾಕಿಕೊಂಡು ಪೀರಾಪುರಕ್ಕೆ ಹೋಗಿದ್ದು, ದಿನಾಂಕ 07-09-2021 ರಂದು ಸಂಜೆ ಪೀರಾಪುರದಿಂದ ಮಲ್ಲೇನಹಳ್ಳಿಗೆ ಬಂದಾಗ ನನ್ನ ಮನೆಯ ಮುಂಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಮುರಿದು ಹಾಲ್ ನಲ್ಲಿದ್ದ ಗಾಡ್ರೇಜ್ ಬೀರುವಿನ ಲಾಕರ್ ಮುರಿದು ಸುಮಾರು 127 ಗ್ರಾಂ ಚಿನ್ನಾಭರಣ , 10 ಗ್ರಾಂ ಬೆಳ್ಳಿ ಹಾಗೂ 55,000/-ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು , ಕಳ್ಳತನ ಮಾಡಿರುವ ವ್ಯಕ್ತಿಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.       

ಕೊಲೆ ಪ್ರಯತ್ನ ಪ್ರಕರಣ.

ಬಾಳೂರು ಪೊಲೀಸ್ ಠಾಣೆ.

ದಿನಾಂಕ 07-09-2021  ರಂದು ಪಿರ್ಯಾದಿ ಅರುಣಾ, ಚನ್ನಡ್ಲು ವಾಸಿರವರು ನೀಡಿದ ದೂರೇನೆಂದರೆ , ಈ ದಿವಸ ಸಂಜೆ ನಾನು ಕೆಲಸ ಮುಗಿಸಿಕೊಂಡು ಬಂದು ಮನೆಯಲ್ಲಿದ್ದಾಗ ,ನನ್ನ ಬಾವನಾದ ಕೋಟೆ ಪೂಜಾರಿರವರು ಮನೆಯ ಬಳಿ ಬಂದು ಜಮೀನಿನ ವಿಚಾರಕ್ಕೆ ಗಲಾಟೆ ಮಾಡಿದ್ದು, ಕೊಲೆ ಮಾಡುವ ಉದ್ದೇಶದಿಂದಲೇ ಕಬ್ಬಿಣದ ರಾಡಿನಿಂದ ನನ್ನ ತಲೆಗೆ ಹೊಡೆದು ರಕ್ತ ಗಾಯವನ್ನುಂಟುಮಾಡಿದ್ದು, ಕೋಟೆ ಪೂಜಾರಿಯ ಮೇಲೆ ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ  ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 08-09-2021 08:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080