ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ.

ಅಲ್ದೂರು ಪೊಲೀಸ್ ಠಾಣೆ.

ದಿನಾಂಕ 07-11-2021 ರಂದು ಅಲ್ದೂರು ಠಾಣಾ ಸರಹದ್ದಿನ  ಕೆಳಗೂರು ಗ್ರಾಮದ ಯಶವಂತ್ ಬಿನ್ ನಾರಾಯಣ ಎಂಬುವರು ತಮ್ಮ ದಿನಸಿ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಫಿಯನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 90 ಎಂ.ಎಲ್. 7 ಟೆಟ್ರಾಪ್ಯಾಕ್ ಮದ್ಯವನ್ನು ಮತ್ತು 70 ರೂ ನಗದು ಹಣವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 299/-ರೂ ಆಗಿದ್ದು, ಆರೋಪಿ ವಿರುದ್ದ  ಅಲ್ದೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ ಶಿವರುದ್ರಮ್ಮ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:07-11-2021 ರಂದು ತರೀಕೆರೆ ಠಾಣಾ ಸರಹದ್ದಿನ  ಬೆಲೆನಹಳ್ಳಿ ತಾಂಡ್ಯದ ಗ್ರಾಮದ ಚಂದ್ರನಾಯ್ಕ ಬಿನ್ ಕಮಲನಾಯ್ಕ ಎಂಬುವರು ತಮ್ಮ ದಿನಸಿ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಫಿತನು ದಾಳಿ ಸಮಯದಲ್ಲಿ ಓಡಿ ಹೋಗಿದ್ದು  ಆರೋಪಿ ಬಳಿಯಿದ್ದ 90 ಎಂ.ಎಲ್. 9 ಟೆಟ್ರಾಪ್ಯಾಕ್ ಮದ್ಯವನ್ನು ಮತ್ತು 200 ರೂ ನಗದು ಹಣವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 317/-ರೂ ಆಗಿದ್ದು, ಆರೋಪಿ ವಿರುದ್ದ  ತರೀಕೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಶ್ರೀ ಕೃಷ್ಣನಾಯ್ಕ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:07-11-2021 ರಂದು ತರೀಕೆರೆ ಠಾಣಾ ಸರಹದ್ದಿನ ತುದಿಪೇಟೆ ಮಾಚೇನಹಳ್ಳಿ ಗ್ರಾಮದ ಮಲ್ಲೇಶ್  ಬಿನ್ ಮರಿಯಪ್ಪ ಎಂಬುವರು ತಮ್ಮ ದಿನಸಿ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಫಿತನು ದಾಳಿ ಸಮಯದಲ್ಲಿ ಓಡಿ ಹೋಗಿದ್ದು  ಆರೋಪಿ ಬಳಿಯಿದ್ದ 90 ಎಂ.ಎಲ್. 7 ಟೆಟ್ರಾಪ್ಯಾಕ್ ಮದ್ಯವನ್ನು ಮತ್ತು 200 ರೂ ನಗದು ಹಣವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 247/-ರೂ ಆಗಿದ್ದು, ಆರೋಪಿ ವಿರುದ್ದ  ತರೀಕೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಚಂದ್ರಮ್ಮ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಮಹಿಳಾ ಪೊಲೀಸ್ ಠಾಣೆ.

ದಿನಾಂಕ;08/11/2021 ರಂದು ಶಿವರಾಜ್ ಬಿ.ಆರ್. ಬಿನ್ ರಂಗಪ್ಪಶೆಟ್ಟಿ ರವರು ನೀಡಿದ ದೂರಿನಲ್ಲಿ ತನ್ನ ಹೆಂಡತಿ ಪಲ್ಲವಿಯನ್ನು ಚಿಕ್ಕಮಗಳೂರು ನಗರದಲ್ಲಿರುವ ಬಿ.ಸಿ.ಎಮ್ ಹಾಸ್ಟೇಲ್ ಬಸವನಹಳ್ಳಿ ನಲ್ಲಿರುವ ಹಾಸ್ಟೇಲ್ ಗೆ ಬಿಟ್ಟಿದ್ದು ಬಿ.ಕಾಂ ವಿದ್ಯಾಬ್ಯಾಸ ಮಾಡುತ್ತಿದ್ದು, ದಿನಾಂಕ 31-10-2021 ರಂದು ಕಾಲೇಜು ವಿದ್ಯಾಬ್ಯಾಸ ಮುಗಿಸಿದ್ದು ಅವರು ಹಾಸ್ಟೇಲ್ ನಿಂದ ಮನೆಗೆ ಬಾರದೇ ಎಲ್ಲೋ ಹೋಗಿದ್ದು ಈವರೆಗೂ ಹುಡುಕಿದರು ಪತ್ತೆಯಾಗಿಲ್ಲವೆಂದು ಕಾಣೇಯಾಗಿರುವ ತನ್ನ ಹೆಂಡತಿ ಪಲ್ಲವಿ, ವಯಸ್ಸು 21 ವರ್ಷ, ಎತ್ತರ 5 ಅಡಿ 4 ಇಂಚು, ಕೋಲುಮುಖ ಸಾದಾರಾಣ ಮೈಕಟ್ಟು, ಎಣ್ಣೆಗೆಂಪು ಬಣ್ಣ , ಸಾದಾರಣ ಮೈಕಟ್ಟು , ತಿಳಿ ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಬಲಭಾಗದ ಕಣ್ಣಿನ ಉಬ್ಬಿನ ಮೇಲೆ ಹಳೇಯ ಗಾಯದ ಗುರುತು ಇರುತ್ತೆ. ಕಾಣೆಯಾಗಿರುವ ತನ್ನ ಹೆಂಡತಿ ಪಲ್ಲವಿಯನ್ನು ಪತ್ತೆ ಮಾಡಿ ಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ದರೋಡೆ ಪ್ರಕರಣ

ಅಲ್ದೂರು ಪೊಲೀಸ್ ಠಾಣೆ.

ದಿನಾಂಕ:07-11-2021 ರಂದು ರಾತ್ರಿ 10.30 ಗಂಟೆಯಲ್ಲಿ ಪಿರ್ಯಾದಿ ರಫೀಕ್ ಬಿನ್ ಅಬ್ದುಲ್ ರೆಹಮಾನ್  ರವರು ನೀಡಿದ ದೂರಿನಲ್ಲಿ ದಿನಾಂಕ 06-11-2021 ರಂದು ಕೆಎ-18-ಸಿ-5544 ರ ಐಷರ್ ಲಾರಿಯಲ್ಲಿ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಪೆಂಟ್ ಡಬ್ಬಗಳನ್ನು ತುಂಬಿಕೊಂಡು ಬರುತ್ತಿರುವಾಗ ರಾತ್ರಿ 2-00 ಗಂಟೆ ಸಮಯದಲ್ಲಿ ಹಾಂದಿ ಗ್ರಾಮ ದಾಟಿ ಚಿಕ್ಕಮಗಳೂರಿಗೆ ಬರುತ್ತಿರುವಾಗ ಕಬ್ಬಿಣಸೇತುವೆಯಿಂದ ಮುಂದಿನ ಅಪ್ಪಿನಲ್ಲಿ ಯಾರೋ 5 ಜನರು ಒಂದು ಕಪ್ಪು ಬಣ್ಣದ ಕಾರಿನಲ್ಲಿ ಬಂದು ಲಾರಿಯನ್ನು ಅಡ್ಡಗಟ್ಟಿ ಪುನಃ ಅಲದಗುಡ್ಡೆ ಅಪ್ ನ ಪಾರೆಸ್ಟ್ಗೇಟ್ ಬಳಿ ಅಡ್ಡಗಟ್ಟಿ  ವಾಹನದಲ್ಲಿದ್ದ ಬಾಡಿಗೆ ಹಣ 31,000/- ರೂ ವನ್ನು ಕಿತ್ತ್ತುಕೊಂಡು ತನನ್ನು ಪಕ್ಕಕ್ಕೆ ತಳ್ಳಿ ಕಾರಿನಲ್ಲಿ ಹೋಗಿರುವುದಾಗಿ ಆರೋಫಿತರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ  ಅಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 08-11-2021 06:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080