ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಸಾಗಾಟ  ಹಾಗೂ ಕೊವಿಡ್-19 ನಿಯಮ ಉಲ್ಲಂಘನೆ ಪ್ರಕರಣ

ಲಿಂಗದಹಳ್ಳಿ   ಪೊಲೀಸ್ ಠಾಣೆ

ದಿನಾಂಕ 09/06/2021 ರಂದು ಲಿಂಗದಹಳ್ಳಿ ಠಾಣಾ ಸರಹದ್ದಿನ ಶಾಂತಿ ನಗರದ ವಾಸಿ ರಾಜು ಎಂಬುವನು ಬೈಕಿನಲ್ಲಿ ಲಿಂಗದಹಳ್ಳಿಯ ಅಂಜನೇಯ ಸರ್ಕಲ್ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಮದ್ಯ ತೆಗೆದುಕೊಂಡು ಹೋಗುತ್ತಿರುವ  ಬಗ್ಗೆ   ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಆರೋಪಿ ರಾಜಶೇಖರ್ ಬಿನ್ ಲೇಟ್ ಮಾಣಿಕ್ಯಂ ನನ್ನು  ವಶಕ್ಕೆ ಪಡೆದು  90 ಎಂ.ಎಲ್ ನ 31 ಓರಿಜನಲ್ ಚಾಯ್ಸ್  ಡಿಲಕ್ಸ್ ವಿಸ್ಕಿ  ಮದ್ಯ  ಬೆಲೆ 1089  /-ರೂ  ಹಾಗು ಕೆಎ-15 ಎಕ್ಸ್ -0274 ಯಮಹಾ ಆರ್. ಎಕ್ಸ್ ಬೈಕ್ ನ್ನು  ಆಮಾನತ್ತುಡಿಸಿಕೊಂಡು ಬಂದು  ಆರೋಪಿತನ ವಿರುದ್ದ ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ  ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ರಫೀಕ್ . ಎಂ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ .

ಬಾಳೆಹೊನ್ನೂರು  ಪೊಲೀಸ್ ಠಾಣೆ.

ದಿನಾಂಕ 08/06/2021 ರಂದು ಬಾಳೆಹೊನ್ನೂರು ಠಾಣೆಯಲ್ಲಿ ಗಸ್ತು ಮಾಡುತ್ತಿರುವಾಗ ಮಸೀದಿಕೆರೆಯ ಸಹದೇವ ಎಂಬುವವರು  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ಆರೋಪಿತನಾದ ಸಹದೇವನನ್ನು ವಶಕ್ಕೆ ಪಡೆದು ಆತನ  ಬಳಿಯಿದ್ದ ರಟ್ಟಿನ ಬಾಕ್ಸ್ ನಲ್ಲಿ 90 ಎಂ.ಎಲ್.ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ 62 ಪೌಚ್ ಗಳಿದ್ದು , ಮದ್ಯದ ಅಂದಾಜು  ಬೆಲೆ 2178 /-ರೂ ಆಗಿರುತ್ತೆ,  ಮದ್ಯ ಮಾರಾಟದಿಂದ ಬಂದ 150 ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತನಾದ ಸಹದೇವನ ವಿರುದ್ದ ಬಾಳೆಹೊನ್ನೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿಎಸ್ಐ. ಶ್ರೀಮತಿ .ನೀತು ಗುಡೆ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಮೂಡಿಗೆರೆ  ಪೊಲೀಸ್ ಠಾಣೆ.

ದಿನಾಂಕ 08/06/2021 ರಂದು ಮೂಡಿಗೆರೆ  ಠಾಣಾ ಸರಹದ್ದಿನ ಕುನ್ನಳ್ಳಿ ಗ್ರಾಮದ ಗೋಪಾಲಗೌಡ ಬಿನ್ ಲೇಟ್ ಮಂಜಪ್ಪ ಎಂಬುವವರು ತಮ್ಮ ಮನೆಯ ಹತ್ತಿರ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ಆರೋಪಿತನಾದ ಗೋಪಾಲಗೌಡನನ್ನು  ವಶಕ್ಕೆ ಪಡೆದು ಆತನ ಬಳಿಯಿದ್ದ ಪ್ಲಾಸ್ಟಿಕ್ ಚೀಲದಲ್ಲಿದ್ದ 90 ಎಂ.ಎಲ್.ನ ಕ್ಯಾಪ್ಟನ್ ಮಾರ್ಟಿನ್ ವಿಸ್ಕಿಯ 67 ಪೌಚ್ಗಳಿದ್ದು , ಮದ್ಯದ ಅಂದಾಜು  ಬೆಲೆ 2353 /-ರೂ ಆಗಿರುತ್ತೆ,  ಆರೋಪಿತನಾದ ಗೋಪಾಲಗೌಡನ  ವಿರುದ್ದ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿಎಸ್ಐ. ರವಿ.ಜಿ.ಎ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಜೂಜಾಟ  ಪ್ರಕರಣ

ತರೀಕೆರೆ  ಪೊಲೀಸ್ ಠಾಣೆ

ದಿನಾಂಕ 08/06/2021 ರಂದು ತರೀಕೆರೆ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡುತ್ತಿರುವಾಗ ತರೀಕೆರೆ ಟೌನ್ನ ಸುಂದರೇಶ ಬಡಾವಣೆಯ ಸರ್ಕಾರಿ ಜಾಗದಲ್ಲಿ  ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಸುಂದರೇಶ ಬಡಾವಣೆಯ ಸರ್ಕಾರಿ ಜಾಗದಲ್ಲಿ  8 ಜನರು ಗುಂಪಾಗಿ ಕುಳಿತುಕೊಂಡು ಅಕ್ರಮವಾಗಿ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ 8 ಜನ ಆರೋಪಿಗಳ ಮೇಲೆ ದಾಳಿ ಮಾಡಿದ್ದು 8 ಜನರನ್ನು ವಶಕ್ಕೆ  ಪಡೆದು ಆರೋಪಿತರುಗಳ ವಶದಲ್ಲಿದ್ದ ಒಂದು ಮಾಸಲು ಬಣ್ಣದ ಬೆಡೆಶೀಟ್ ,52 ಇಸ್ಪೀಟ್ ಎಲೆಗಳು ಹಾಗೂ 10.400 /-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ರಾಘವೇಂದ್ರ. ಪಿ.ಐ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಜೂಜಾಟ  ಹಾಗೂ ಕೊವಿಡ್-19 ನಿಯಮ ಉಲ್ಲಂಘನೆ ಪ್ರಕರಣ

ಲಿಂಗದಹಳ್ಳಿ   ಪೊಲೀಸ್ ಠಾಣೆ

ದಿನಾಂಕ 08/06/2021 ರಂದು ಲಿಂಗದಹಳ್ಳಿ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡುತ್ತಿರುವಾಗ ದೋರನಾಳು ಗ್ರಾಮದ ತುರುಮಂದಿಯಲ್ಲಿರುವ ಬೇವಿನ ಮರದ ಕಟ್ಟೆಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ರಂಗನಾಥಸ್ವಾಮಿ ದೇವಸ್ಥಾನದ  ಮುಂಭಾಗದ ಬನ್ನಿ ಮರದ ಕೆಳಗೆ  ಕರ್ನಾಟಕ ಸರ್ಕಾರವು ಸಾಂಕ್ರಾಮಿಕ ರೋಗ ಹರಡದಂತೆ 2 ಕ್ಕಿಂತ ಹೆಚ್ಚು ಜನರು ಒಂದು ಕಡೆ ಸೇರದಂತೆ ಆದೇಶಮಾಡಿದ್ದರೂ ಸಹ ಅಕ್ರಮವಾಗಿ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ 8  ಜನ ಆರೋಪಿಗಳ ಮೇಲೆ ದಾಳಿ ಮಾಡಿದ್ದು ಅದರಲ್ಲಿ 3 ಜನರನ್ನು ವಶಕ್ಕೆ ಪಡೆದಿದ್ದು, 5 ಜನರು ಓಡಿಹೋಗಿರುತ್ತಾರೆ. ಆರೋಪಿತರುಗಳ ವಶದಲ್ಲಿದ್ದ ಒಂದು ಮಾಸಲು ಬಿಳಿ ಬಣ್ಣದ ಹರಿದ ಬಟ್ಟೆ, 52 ಇಸ್ಪೀಟ್ ಎಲೆಗಳು ಹಾಗೂ 1760 /-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ. ರಫೀಕ್. ಎಂ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 25-06-2021 06:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080