ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಕರಣ

ಪಂಚನಹಳ್ಳಿ ಪೊಲೀಸ್ ಠಾಣೆ.

ದಿನಾಂಕ:09/07/2021 ರಂದು  ಪಂಚನಹಳ್ಳಿ ಠಾಣಾ ಸರಹದ್ದಿನ ಬಿ. ಕಾವಲಹಟ್ಟಿ ವಾಸಿ ಹಾಲೇಶ್ ಬಿನ್ ಶೇಖರಪ್ಪ ಎಂಬುವನು ಠಾಣೆಗೆ ಹಾಜರಾಗಿ  ತನ್ನ ತಂದೆ ಮತ್ತು ತಾಯಿ ಗೀತಾ ಇವರೊಂದಿಗೆ ವಾಸವಿದ್ದು ಇಬ್ಬರೂ ಕೂಲಿ ಕೆಲಸ ಮಾಡಿಕೊಂಡಿದ್ದು , ತನ್ನ ತಂದೆಗೆ ಕುಡಿಯುವ ಅಬ್ಯಾಸವಿದ್ದು  ತನ್ನ ತಾಯಿ ಹತ್ತಿರ ಯಾವಾಗಲೂ ಜಗಳ ಆಡುತ್ತಿದ್ದು ಕುಡಿಯಲು ಹಣವಿಲ್ಲವೆಂದಾಗ ಹಣಕ್ಕಾಗಿ ತಾಯಿಯನ್ನು ಹಣ ಕೊಡುವಂತೆ ಪೀಡಿಸುತ್ತಿದ್ದು, ದಿನಾಂಕ:08/07/2021 ರಂದು ಹಣಕ್ಕಾಗಿ ಪೀಡಿಸಿದ್ದು ಪಿರ್ಯಾದಿ ಸಂಬಂದಿಕರೊಂದಿಗೆ ಮದ್ಯಾಹ್ನ ಸಂಬಂಧಿಕರ ಮನೆಗೆ ಹೋಗಿದ್ದಾಗ,  ವಾಪಾಸ್ಸು ಬಂದು ನೋಡಿದ್ದು ತಂದೆ ಶೇಖರಪ್ಪ ತಾಯಿಗೆ ಕೋಲಿನಿಂದ ವಿಪರೀತವಾಗಿ ಹೊಡೆದು, ಮೈ, ಕೈ, ಗೆ ಪರಚಿ, ನೆಲದ ಮೇಲೆ ಬಿಳಿಸಿದ್ದು, ತಾಯಿಯ 2  ತೊಡೆಗಳಲ್ಲಿ ಹಾಗು ಮೈ, ಕೈಯಲ್ಲಿ ಹಸಿರು ಬಂದಿದ್ದು. ಎರಡು ಕಣ್ಣು ಮತ್ತು ತಲೆಯಲ್ಲಿ ರಕ್ತ ಬರುತ್ತಿದ್ದು,ಕುಡಿಯಲು ತಾಯಿಯವರು ಹಣ ಕೊಡಲಿಲ್ಲವೆಂದು, ನನ್ನ ತಾಯಿಯವರಿಗೆ ಹೊಡೆದಿದ್ದು, ನಂತರ ನಾನು ರಾತ್ರ್ರಿ ಬಂದು ನೋಡಿ, ನಮ್ಮ ತಾಯಿಯನ್ನು ಉಪಚರಿಸಿದ್ದು , ಅಸ್ಪತ್ರೆಗೆ ಕರೆದುಕೊಂಡು ಹೋಗಲು ಅಗದೇ ಇದ್ದು, ಬೆಳಿಗ್ಗೆ ಹೋಗಿ ನೋಡಲಾಗಿ, ತಾಯಿರವರು ಮೃತಪಟ್ಟಿದ್ದು, ತಾಯಿ ಗೀತಾಯವರ ಸಾವಿಗೆ ಕಾರಣರಾದ ತನ್ನ ತಂದೆ ಶೇಖರಪ್ಪರವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲು ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ದ ಪಂಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಜೂಜಾಟ ಪ್ರಕರಣ

ಬಸವನಹಳ್ಳಿ ಪೊಲೀಸ್ ಠಾಣೆ.

 ದಿನಾಂಕ:08/07/2021 ರಂದು  ಬಸವನಹಳ್ಳಿ ಠಾಣಾ ಸರಹದ್ದಿನ ಅಲ್ಲಂಪುರ ಗ್ರಾಮದ ಬಳಿಯ ಸೆಂಟ್ ಜೇವೀರ್ ಶಾಲೆ ಮುಂಭಾಗದ ರಸ್ತೆಯ ಬಳಿ 6 ಜನರು ಅಂದರ್ ಬಾಹರ್ ಇಸ್ಪಿಟ್ ಜೂಜಾಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿತರಾದ 1. ಇಬ್ರಾಹಿಂ, 2. ಜಬ್ಬಿ, 3. ಆಶ್ರಫ್, 4. ಜಮ್ಸಿದ್ 5. ತಜಮ್ ಮುಲ್ @ ತಜ್ಜು ರವರನ್ನು  ವಶಕ್ಕೆ ಪಡೆದು, ಆರೋಪಿತರ ಜೂಜಾಡಲು ಬಳಸಿದ್ದ ಹಳೆಯ ನ್ಯೂಸ್ ಪೇಪರ್ 52 ಇಸ್ಪಿಟ್ ಎಲೆಗಳು ಹಾಗೂ 4,470/- ರೂ ನಗದು ಹಣವನ್ನು ಅಮಾನತ್ತುಪಡಿಕೊಂಡು ಬಂದು ಆರೋಇತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 ಮನುಷ್ಯ ಕಾಣೆ

ನ.ರಾ.ಪುರ ಪೊಲೀಸ್ ಠಾಣೆ.

ದಿನಾಂಕ:09/07/2021 ರಂದು ನ.ರಾ.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕುಂದ ಸಾಲೂರು ಗ್ರಾಮ ವಾಸಿ ಕಾರ್ತಿಕ್ ಎಸ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ  ಈಗ್ಗೆ 6 ವರ್ಷದ ಹಿಂದೆ ಗೋಮತಿ ಎಂಬುವರನ್ನು ವಿವಾಹವಾಗಿದ್ದು, 2 ಜನ ಮಕ್ಕಳಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದು, ದಿ:07/07/2021 ರಂದು ರಾತ್ರಿ ಸುಮಾರು 1-00 ಗಂಟೆಯ ಸಮಯದಲ್ಲಿ ನನ್ನ ಹೆಂಡತಿ ಮನೆಯಿಂದ ಕಾಣೆಯಾಗಿದ್ದು, ನನ್ನ ಹೆಂಡತಿಯನ್ನು ಎಲ್ಲಾ ಕಡೆ ಹುಡುಕಿದರು ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ತನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಕಳ್ಳತನ ಕಾಣೆ

ನ.ರಾ.ಪುರ ಪೊಲೀಸ್ ಠಾಣೆ

ದಿನಾಂಕ:09/07/2021 ರಂದು ನ.ರಾ.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ತಿನಕೊಪ್ಪ  ಜನತಾ ಕಾಲೋನಿ ವಾಸಿ ಮಹಮ್ಮದ್ ಉರ್ಪನ್ ಬಿನ್ ಶೇಖ್ ಮೊಹಿದ್ದೀನ್  ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ತನ್ನ ಬಾಭ್ತು   ಮುತ್ತಿನಕೊಪ್ಪ ಸ.ಹಿಪ್ರಾ ಶಾಲೆಯ ಮುಂಬಾಗದಲ್ಲಿ ಕಿಂಗ್ಸ್ ಎಂಬ ಮೋಬೈಲ್ ಅಂಗಡಿಯಲ್ಲಿ ದಿನಾಂಕ 08/07/2021 ರಂದು ರಾತ್ರಿ ವ್ಯಾಪಾರ ಮುಗಿಸಿ ಬೀಗಹಾಕಿಕೊಂಡು ಬಂದಿದ್ದು ದಿನಾಂಕ 09/07/2021 ರಂದು ಬೆಳಿಗ್ಗೆ 8-30 ಗಂಟೆಗೆ ಬಂದು ಅಂಗಡಿ ತೆಗೆದು ನೋಡಿದಾಗ ಯಾರೋ ಕಳ್ಳರು ಅಂಗಡಿ ಮೇಲ್ಬಾಗದ ಸಿಮೆಂಟ್ ಶೀಟ್ ಮತ್ತು ಪ್ಲೇ ವುಡ್ ಶಿಟ್  ಹೊಡೆದು ಒಳ ಪ್ರವೇಶಿಸಿ ಅಂದಾಜು 1,07.000/- ರೂ ಗಳ 8 ಮೊಬೈಲ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳುವಾಗಿರುವ ಮೊಬೈಲ್ ಗಳನ್ನು ಮತ್ತು ಕಳ್ಳರನ್ನು ಪತ್ತೆ ಮಾಡುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಇತ್ತೀಚಿನ ನವೀಕರಣ​ : 09-07-2021 07:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080