ಅಭಿಪ್ರಾಯ / ಸಲಹೆಗಳು

ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ

ಸಖರಾಯಪಟ್ಟಣ   ಪೊಲೀಸ್ ಠಾಣೆ.

ದಿನಾಂಕ 09/08/2021 ರಂದು ಬೆಳಿಗ್ಗೆ 09-30 ಗಂಟೆ ಸಮಯದಲ್ಲಿ  ಅನಂತರಾಮನಾಯ್ಕ, ಉಪತಹಶೀಲ್ದಾರ್, ನಾಡಕಛೇರಿ, ಸಖರಾಯಪಟ್ಟಣರವರು ಸಖರಾಯಪಟ್ಟಣದ ಬಸ್ ನಿಲ್ದಾಣದ ಬಳಿ ಹಳೇಹಟ್ಟಿ ಆನಂದನಾಯ್ಕರವರ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದು ಆನಂದನಾಯ್ಕ, ಪೈರೋಜ್ ಖಾನ್, ಮಂಜುನಾಥ, ಎನ್.ಡಿ. ಸಿ.ಟಿ.ಮಂಜುನಾಥ, ಚೇತನ್, ಮೋಹನ, ಯೋಗೀಶ್ ನಾಯ್ಕ, ಹೇಮಂತ್ ರವರು  ಯಾವುದೇ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೆ, ಕೊವಿಡ್ ನಿಯಮಗಳನ್ನು ಉಲ್ಲಂಘಿಸಿ ಪ್ರತಿಭಟನೆ ಮಾಡುತ್ತಿದ್ದರಿಂದ ಆರೋಪಿತರ ವಿರುದ್ದ ಸಖರಾಯಪಟ್ಟಣ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಪಘಾತ ಪ್ರಕರಣ.

ಸಂಚಾರ ಪೊಲೀಸ್ ಠಾಣೆ.

ದಿನಾಂಕ 09-08-2021 ರಂದು ಬೆಳಿಗ್ಗೆ 08-50 ಗಂಟೆ ಸಮಯದಲ್ಲಿ   ಅಭಿಷೇಕ ರವರ ಪತ್ನಿ ಕೋಮಲರವರು ಆಶ್ರಯ ಆಸ್ಪತ್ರೆಯ ಓಟಿ ಆಪರೇಟರ್ ಕೆಲಸಕ್ಕೆಂದು ಕೆಎ-13 ಇಎ-0038 ವಿಗೋದಲ್ಲಿ ಎಂಜಿ ರಸ್ತೆಯ ಸಂಗೀತಾ ಮೊಬೈಲ್ ಹತ್ತಿರ ಹೋಗುತ್ತಿರುವಾಗ ಜ್ಯೋತಿ ಸರ್ಕಲ್ ಕಡೆಯಿಂದ ಬಂದ ಕೆಎ-18 ಇಹೆಚ್-3889 ಬೈಕಿನ ಚಾಲಕ ಮುರುಗ ರವರು ತನ್ನ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೋಮಲರವರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಎಡಗಾಲು, ಎಡಗೈ ಹಾಗೂ ಮಂಡಿಗೆ ಪೆಟ್ಟಾಗಿದ್ದು, ಬೈಕ್  ಚಾಲಕನ ವಿರುದ್ದ ಕ್ರಮ ಕೈಗುಳ್ಳುವಂತೆ ನೀಡಿದ ದೂರಿನ ಮೇರೆಗೆ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ 09-08-2021 ರಂದು ಪಿರ್ಯಾದುದಾರರಾದ ಪುನೀತ್ ರವರು ನೀಡಿದ ದೂರೇನೆಂದರೆ ದಿನಾಂಕ 06-08-2021 ರಂದು ಸಂಜೆ 06-00 ಗಂಟೆ ಸಮಯದಲ್ಲಿ ಪುನೀತ್ ರವರ ತಂದೆ ದೊಡ್ಡಮಲ್ಲಪ್ಪರವರು ಬ್ಯಾಲದಾಳು ಬಸ್ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿರುವಾಗ ಕೆಎ-18 ಎ-9965 ಆಟೋ ಚಾಲಕ ಆಟೋವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದೊಡ್ಡಮಲ್ಲಪ್ಪರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ತಲೆಗೆ, ಬಲಗೈಗೆ ಪೆಟ್ಟಾಗಿದ್ದು, ಆಟೋ  ಚಾಲಕನ ವಿರುದ್ದ ಕ್ರಮ ಕೈಗುಳ್ಳುವಂತೆ ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಕಳ್ಳತನ  ಪ್ರಕರಣ.

ನಗರ ಪೊಲೀಸ್ ಠಾಣೆ.

ದಿನಾಂಕ;08/08/2021 ರಂದು ರಾತ್ರಿ ವಕೀಲರಾದ ಪಿ.ಇ.ಸುರೇಶ್ ರವರು ಚಿಕ್ಕಮಗಳೂರು ನಗರದ ಐ.ಜಿ ರಸ್ತೆಯ ಮಥಾಯಿಸ್ ಟವರ್ ಪಕ್ಕದ ಬಿಲ್ಡಿಂಗ್ ಒಂದನೇ ಮಹಡಿಯಲ್ಲಿರುವ ತಮ್ಮ ಕಛೇರಿಯಲ್ಲಿ ಕೆಲಸ ಮುಗಿಸಿ ಬೀಗವನ್ನು ಹಾಕಿಕೊಂಡು ಹೋಗಿದ್ದು ದಿನಾಂಕ 09-08-2021 ರಂದು  ಬೆಳಿಗ್ಗೆ 09-00 ಗಂಟೆಗೆ ಕಛೇರಿಗೆ ಬಂದಾಗ ಕಚೇರಿಗೆ ಹಾಕಿದ್ದ  ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಬೀಗವನ್ನು ಮೀಟಿ ಮುರಿದು ಕಛೇರಿಯಲ್ಲಿದ್ದ ರೆಡ್ ಮೀ ಮೊಬೈಲ್ ಹಾಗೂ 15,000/- ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ನಗರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

 

ಇತ್ತೀಚಿನ ನವೀಕರಣ​ : 09-08-2021 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080