ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಸಿಂಗಟಗೆರೆ ಪೊಲೀಸ್ ಠಾಣೆ.

ದಿನಾಂಕ;09-01-2022 ರಂದು ಪಿರ್ಯಾದಿ ತುಂಬೆಗೌಡ ಬಿನ್ ಬೊಮ್ಮಲಿಂಗೇಗೌಡ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಎರಡನೇ ಮಗನಾದ ಚಂದ್ರಕಾಂತನು ತನ್ನ ಬಾಬ್ತು ಕೆಎ-18- ಅರ್-3823 ನೇ ನಂಬರಿನ ಹಿರೋಹೊಂಡಾ ಬೈಕಿನಲ್ಲಿ ತಮ್ಮ ಊರಾದ ಬಿಟ್ಟೇನಹಳ್ಳಿಗೆ ಹೋಗಿ ವಾಪಾಸ್ಸು ಬರುವಾಗ ಸಿಂಗಟಗೆರೆ ಬಳಿ 9 ನೇ ಮೈಲಿಕಲ್ಲು ಸಮೀಪ ಭದ್ರ ಮೇಲ್ದಂಡೆ ಚಾನಲ್ ಕಾಮಗಾರಿ ನಡೆಯುತ್ತಿರುವ  ರಸ್ತೆಯ ಬಳಿ ಯಾವುದೋ ಅಪರಿಚಿತ ವಾಹನವು ಚಂದ್ರಕಾಂತ ರವರು ಚಾಲನೆ ಮಾಡುತ್ತಿದ್ದ ಬೈಕಿಗೆ ರಾತ್ರಿ ವೇಳೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಪಘಾತಪಡಿಸಿ ವಾಹನವನ್ನು ನಿಲ್ಲಿಸದೇ ಹೋಗಿದ್ದು, ಅಪಘಾತದಲ್ಲಿ ಚಂದ್ರಕಾಂತ ರವರು ತಲೆಗೆ ಬಲಭಾಗಕ್ಕೆ ಪೆಟ್ಟು ಬಿದ್ದು ರಕ್ತಗಾಯವಾಗಿದ್ದು ಚಂದ್ರಕಾಂತರವರನ್ನು ಅಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು ವೈದ್ಯರು ಪರೀಕ್ಷಿಸಿ ಚಂದ್ರಕಾಂತ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಚಂದ್ರಕಾಂತ ರವರ ಕೆಎ-18- ಅರ್-3823 ನೇ ಬೈಕಿಗೆ ಅಪಘಾತಪಡಿಸಿ ವಾಹನವನ್ನು ನಿಲ್ಲಿಸದೇ ಹೋದ ವಾಹನ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ  ಪ್ರಕರಣ

 ಗೋಣೀಬೀಡು ಪೊಲೀಸ್ ಠಾಣೆ.

 ದಿನಾಂಕ:08-01-2022 ರಂದು ರಾತ್ರಿ 8.10 ಗಂಟೆ ಸಮಯದಲ್ಲಿ  ಗೋಣಿಬೀಡು ಠಾಣಾ ಸರಹದ್ದಿನ ಚಿನ್ನಿಗಾ ಗ್ರಾಮದಲ್ಲಿ ಕುಮಾರ್ ಬಿನ್ ಲೇಟ್ ಪುಟ್ಟಪ್ಪ ರವರು ಅವರ ದಿನಸಿ ಅಂಗಡಿಯ ಮುಂದಿನ ಕಟ್ಟೆಯ ಮೇಲೆ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದವನನ್ನು ವಶಕ್ಕೆ ಪಡೆದು ಅರೋಪಿ ಬಳಿ ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ 64 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1962/- ರೂ ಅಗಿದ್ದು ಸದೆರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಧನಂಜಯ , ಮ.ಎ.ಎಸ್.ಐ. ಹೇಮ ಮತ್ತು ಸಿಬ್ಬಂದಿಯವರಾದ ರಾಜು, ಸಂತೋಷಕುಮಾರ್, ರವೀಂದ್ರ ಲೋಕೇಶ್ ರವರು ಪಾಲ್ಗೊಂಡಿರುತ್ತಾರೆ.

ಕೊಪ್ಪ ಪೊಲೀಸ್ ಠಾಣೆ.

 ದಿನಾಂಕ:08-01-2022 ರಂದು ಸಂಜೆ  ಕೊಪ್ಪ ಠಾಣಾ ಸರಹದ್ದಿನ ಕಲ್ಕೆರೆ ಗ್ರಾಮದಲ್ಲಿ ರಘುನಾಥ್ ಬಿನ್ ಸುಂದರ ಪೂಜಾರಿ ರವರು ಅವರ ದಿನಸಿ ಅಂಗಡಿಯ ಮುಂದೆ ಮೇಲೆ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದವನನ್ನು ವಶಕ್ಕೆ ಪಡೆದು ಅರೋಪಿ ಬಳಿ ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ 179 ಟೆಟ್ರಾಪ್ಯಾಕ್ ಮತ್ತು 180 ಎಂ.ಎಲ್. ನ 9 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 7242/- ರೂ ಅಗಿದ್ದು ಸದೆರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀನಾಥರೆಡ್ಡಿ. ವಿ. ಮತ್ತು ಸಿಬ್ಬಂದಿಯವರಾದ ಸಾದೀಕ್ ಬಾಷಾ, ದೇವರಾಜ್ ರವರು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಲಕ್ಕವಳ್ಳಿ ಪೊಲೀಸ್ ಠಾಣೆ.

ದಿನಾಂಕ:08-01-2022 ರಂದು ಪಿರ್ಯಾದಿ ದೇವರಾಜ ಬಿನ್ ಧರ್ಮಣ್ಣ ಚಾಟ್ ಪಟ್ ನಗರ ಲಕ್ಕವಳ್ಳಿ  ವಾಸಿ  ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು ದಿನಾಂಕ 06-01-2022 ರಂದು ಪಿರ್ಯಾದಿಯವರು  ಕುರಿಗಳನ್ನು ಮೇಯಿಸಿಕೊಂಡು ಬಂದು ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಕೊಟ್ಟಿಗೆಯ ಮುಂಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ 07-01-2022 ರಂದು ಬೆಳಿಗ್ಗೆ ಪಿರ್ಯಾದಿ ಕೊಟ್ಟಿಗೆಗೆ ಹೋಗಿ ನೋಡಲಾಗಿ ಯಾರೋ ಕಳ್ಳರು ಯಾವುದೋ ಅಯುಧ ಬಳಸಿ ಕೊಟ್ಟಿಗೆಯ ಬಾಗಿಲಿನ ಬೀಗವನ್ನು ಹೊಡೆದು ಹಾಕಿ 6 ಕುರಿಗಳ ಪೈಕಿ 2 ಕುರಿಗಳನ್ನು (ಟಗರು) ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಸದರಿ ಕುರಿಗಳ ಬೆಲೆ 40,000/- ರೂ ಗಳು ಅಗಿದ್ದು, ಈವರೆಗೂ ಕುರಿಗಳನ್ನು ಹುಡುಕಿದರೂ ಪತ್ತೆಯಾಗಿಲ್ಲವೆಂದು  ಕಳ್ಳರನ್ನು  ಮತ್ತು ಕಳವುವಾಗಿರುವ ಕುರಿಗಳನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 09-01-2022 07:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080