ಅಭಿಪ್ರಾಯ / ಸಲಹೆಗಳು

ಅಕ್ರಮ ಗೋ ಮಾಂಸ ಮಾರಾಟ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ:09/02/2022 ರಂದು ನಗರ ಠಾಣಾ ಸರಹದ್ದಿನ ಮಾರ್ಕೇಟ್ ರಸ್ತೆಯ ಎ.ಕೆ. ಕಾಲೋನಿಯಿಂದ ಟಿಪ್ಪು ನಗರಕ್ಕೆ ಹೋಗುವ ಅಡ್ಡ ರಸ್ತೆಯಲ್ಲಿ ವಾಟರ್ ಟ್ಯಾಂಕ್ ಪಕ್ಕದ ಸಿಮೆಂಟ್ ಶೀಟಿನ ಮನೆಯಲ್ಲಿ ಜಾವೀದ್ ಬಿನ್ ಫಜಲೂರ್ ರೆಹಮಾನ್ ಎಂಬುವನು  ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದು ಈತನನ್ನು ವಶಕ್ಕೆ ಪಡೆದು ಆರೋಪಿತನ ವಶದಲ್ಲಿದ್ದ  ಮಾಂಸ ಮತ್ತು ಮೂಳೆಯ ಇರುವ ಸುಮಾರು 2 ಕೆ.ಜಿಯ 8 ಪ್ಯಾಕೇಟ್ ಕೊಬ್ಬು ತುಂಬಿದ ಪ್ಯಾಕ್ ಗಳು, 1 ಕೆ.ಜಿ ತೂಕದ 11 ಪ್ಯಾಕೇಟ್ ಗಳು ಮತ್ತು ಒಂದು ಕೆ.ಜಿ ತೂಕದ  58 ಮಾಂಸದ ಪ್ಯಾಕೆಟ್ ಗಳು ಇದ್ದು ಅವುಗಳನ್ನು ಅಮಾನತ್ತುಪಡಿಸಿಕೊಂಡು ಬಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶರತ್ ಎಲ್.ಎಂ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಪಂಚನಹಳ್ಳಿ ಪೊಲೀಸ್ ಠಾಣೆ.

ದಿನಾಂಕ:09/02/2022 ರಂದು ಪಂಚನಹಳ್ಳಿ ಠಾಣಾ ಸರಹದ್ದಿನ ಗೋವಿಂದರಾಜ್ ಬಿನ್  ರಾಮನಾಯ್ಕ್ ರವರು ನೀಡಿದ ದೂರಿನಲ್ಲಿ ದಿನಾಂಕ;08/02/2022  ರಂದು ಕಡೂರು ತಾಲ್ಲೋಕು ಉಡುಗೆರೆಗೆ ಹೋಗಲು ಪಿರ್ಯಾದಿ ಮತ್ತು ನಟರಾಜ್ ರವರು ತಮ್ಮ ಬಾಬ್ತು ಕೆಎ-51-ಈ-2831 ರ ಡಿಸ್ಕವರಿ ಬೈಕಿನಲ್ಲಿ ನಟರಾಜ್ ರವರು ಬೈಕ್  ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಅಡಿಗೆರೆ-ಉಡುಗೆರೆ ಗ್ರಾಮದ ಮದ್ಯೆದಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಿದ್ದು ಪಿರ್ಯಾದಿಗೆ ಮತ್ತು ನಟರಾಜನಿಗೆ ಪೆಟ್ಟಾಗಿದ್ದು ನಟರಾಜನಿಗೆ ತೀವ್ರತರವಾದ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದು  ಮುಂದಿನ ಕ್ರಮದ ಬಗ್ಗೆ ನೀಡಿದ ದೂರಿನ ಮೇರೆಗೆ ಪಂಚನಹಳ್ಳಿ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಬಸವನಹಳ್ಳಿ ಪೊಲೀಸ್ ಠಾಣೆ.

ದಿನಾಂಕ:08-02-2022 ರಂದು ಬಸವನಹಳ್ಳಿ ಠಾಣಾ ಸರಹದ್ದಿನ ಅಲ್ಲಂಪುರ ವಾಟರ್ ಟ್ಯಾಂಕ್  ವಾಸಿ ತಿರುಮಲಯ್ಯ ಬಿನ್ ಗೇಜ್ಜಯ್ಯ ಎಂಬುವನು ತಮ್ಮ ಬಾಬ್ತು ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಪೌಚ್ ನಿಂದ ಪ್ಲಾಸ್ಟಿಕ್ ಲೋಟಕ್ಕೆ ಹಾಕಿಕೊಡುತ್ತಿದ್ದು ಅರೋಪಿಯನ್ನು ವಶಕ್ಕೆ ಪಡೆದು ಆರೋಪಿ ವಶದಲ್ಲಿ 90 ಎಂ.ಎಲ್.ನ 5 ಟೆಟ್ರಾಪ್ಯಾಕ್ ಮದ್ಯ ಅಂದಾಜು ಬೆಲೆ 175/- ರೂ ಅಗಿದ್ದು ಪ್ಲಾಸ್ಟಿಕ್ ಲೋಟ ಮತ್ತು 2 ಖಾಲಿ ಪೌಚ್ ಮತ್ತು ಮದ್ಯ ಮಾರಾಟ ಹಣ 120/- ರೂ ವನ್ನು ಅಮಾನತ್ತುಪಡಿಸಿಕೊಂಡು ಬಂದು   ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಕಿರಣ್ ಕುಮಾರ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:08/02/2022 ರಂದು ತರೀಕೆರೆ ಠಾಣಾ ಸರಹದ್ದಿನ ಸ್ಟೇಷನ್ ದುಗ್ಲಾಪುರ ಗ್ರಾಮದಲ್ಲಿ ನಾಗರಾಜ್ ಬಿನ್ ಅಣ್ಣಾಮಲೈ ಈತನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಈತನನ್ನು ವಶಕ್ಕೆ ಪಡೆದು ಆರೋಪಿತನ ವಶದಲ್ಲಿದ್ದ 90.ಎಂ.ಎಲ್.ನ 41 ಮದ್ಯ ತುಂಬಿರುವ ಪೌಚ್ ಗಳನ್ನು ಅಂದಾಜು ಬೆಲೆ 1440/- ರೂ ಅಗಿದ್ದು  ಮದ್ಯವನ್ನು  ಅಮಾನತ್ತುಪಡಿಸಿಕೊಂಡು ಬಂದು   ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಕೃಷ್ಣನಾಯ್ಕ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅನೈತಿಕ ಚಟುವಟಿಕೆ ಪ್ರಕರಣ

ಮಹಿಳಾ ಪೊಲೀಸ್ ಠಾಣೆ.

ದಿನಾಂಕ:08/02/2022 ರಂದು ರಾತ್ರಿ ಚಿಕ್ಕಮಗಳೂರು ನಗರದ ಐ,ಜಿ ರಸ್ತೆಯಲ್ಲಿರುವ ರಾಯಲ್ ಆರ್ಕಿಡ್ ವಸತಿ ಗೃಹದಲ್ಲಿ ಅಕ್ರಮವಾಗಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ರಮೇಶ ಬಿ.ಟಿ ಬಿನ್ ಲೇಟ್ ತಿಮ್ಮಪ್ಪ, ವಾಸ ಬಳ್ಳಾರಿ ಮತ್ತು ಗುರು ಬಳ್ಳಾರಿ ಇವರನ್ನು ವಶಕ್ಕೆ ಪಡೆದು ಅರೋಪಿತರು 5 ಜನರನ್ನು ವೆಶ್ಯಾವಾಟಿಕೆಗೆ ತಳ್ಳಿದ್ದು ಆರೋಪಿತರ ವಿರುದ್ದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಐ. ಮೊಹಮ್ಮದ್ ಸಲೀಂ ಅಬ್ಬಾಸ್  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 09-02-2022 07:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080