ಅಭಿಪ್ರಾಯ / ಸಲಹೆಗಳು

ಅಕ್ರಮ ಮಟ್ಕಾ ಜೂಜಾಟ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ; 09/04/2022 ರಂದು ಚಿಕ್ಕಮಗಳೂರು ನಗರದ ತೋಗರಿಹಂಕಲ್ ಸರ್ಕಲ್ ಹತ್ತಿರ ರಾಜು ಬಿನ್ ಮಾದೇಗೌಡ  ವಾಸ ತೇಗೂರು  ರವರು ಅಕ್ರಮವಾಗಿ ಮಟ್ಕಾ ಜೂಜಾಟ ಆಡಿಸುತ್ತಿದ್ದ ಅರೋಪಿತರನ್ನು ವಶಕ್ಕೆ ಪಡೆದು, ಅರೋಪಿತರಿಂದ  ಮಟ್ಕಾ ಚೀಟಿ, ಒಂದು ಬಾಲ್ ಪೆನ್ನು ಮತ್ತು 1650/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಬಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಡಿ.ಸಿ.ಐ.ಬಿ. ಪಿ.ಎಸ್.ಐ. ಗೋವಿಂದನಾಯ್ಕ ಬಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮಟ್ಕಾ ಜೂಜಾಟ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ; 09/04/2022 ರಂದು ಚಿಕ್ಕಮಗಳೂರು ನಗರದ ತೋಗರಿಹಂಕಲ್ ಸರ್ಕಲ್ ಪೆಟ್ರೋಲ್ ಬಂಕ್ ಬಳಿ  ಕುಮಾರಾಚಾರ್ ಬಿನ್ ಭಾಸ್ಕರಾಚಾರ್ ವಾಸ ಹಳ್ಳದ ರಾಮೇಶ್ವರ ಚಿಕ್ಕಮಗಳೂರು ರವರು ಅಕ್ರಮವಾಗಿ ಮಟ್ಕಾ ಜೂಜಾಟ ಆಡಿಸುತ್ತಿದ್ದ ಅರೋಪಿತರನ್ನು ವಶಕ್ಕೆ ಪಡೆದು, ಅರೋಪಿತರಿಂದ  ಮಟ್ಕಾ ಚೀಟಿ, ಒಂದು ಬಾಲ್ ಪೆನ್ನು ಮತ್ತು 1860/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಬಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಡಿ.ಸಿ.ಐ.ಬಿ. ಪಿ.ಎಸ್.ಐ. ಗೋವಿಂದನಾಯ್ಕ ಬಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಮಹಿಳಾ ಪೊಲೀಸ್ ಠಾಣೆ.

ದಿನಾಂಕ:09/04/2022 ರಂದು ಪಿರ್ಯಾದಿ ಮಂಜುನಾಥ ಬಿನ್ ಲೇಟ್ ವೇಲಾಯುಧನ್ ವಾಸ ಕಲ್ಲುದೊಡ್ಡಿ  ಗ್ರಾಮ, ಇವರು ನೀಡಿದ ದೂರಿನಲ್ಲಿ ಪಿರ್ಯಾದಿ ಮಗಳು ಶೀಲ್ಪಾ ಇವಳು ವೈಟ್ ಸ್ಟೋನ್ ದೂಮ್ ಧಮಾಕಾ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವಳು,  ದಿನಾಂಕ 08/04/2022 ರಂದು  ಮನೆಯಿಂದ ಅಂಗಡಿಗೆ  ಹೋದವಳು ವಾಪಾಸ್ಸು ಮನೆಗೆ ಬಾರದೇ  ಕಾಣೆಯಾಗಿದ್ದು, ಈ ವರೆಗೂ ಎಲ್ಲಾ ಕಡೆಯಲ್ಲಿಯೂ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಶಿಲ್ಪಾ,  19 ವರ್ಷ, 4.5 ಅಡಿ ಎತ್ತರ, ಕೋಲುಮುಖ, ಗೋದಿ ಮೈ ಬಣ್ಣ, ತೆಳುವಾದ ಮೈಕಟ್ಟು, ಕನ್ನಡ ಬಾಷೆ ಮಾತನಾಡುತ್ತಾಳೆ. ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಜಾನುವಾರು ಕಳ್ಳತನ ಮತ್ತು ಸಾಗಾಣಿಕೆ ಪ್ರಕರಣ

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ;08/04/2022 ರಂದು ಬಾಳೆಹೊನ್ನೂರು ಠಾಣಾ ಸರಹದ್ದಿನ ಜಬ್ಬರ್ ಬಿನ್ ಎಂ. ಹಸೈನರ್, ವಾಸ ಮಾಗುಂಡಿ ಮತ್ತು ಶಿವಣ್ಣ ಬಿನ್ ನಾಗಪ್ಪಶೆಟ್ಟಿ ವಾಸ ಬಿಕ್ಕರಣೆ ಹುಯಿಗೆರೆ ರವರು ಜಾನುವಾರುಗಳನ್ನು ಕಳ್ಳತನ ಮಾಡಿಕೊಂಡು ಕೆಎ-18-ಬಿ-1244 ಮಹೇಂದ್ರ ಪಿಕಪ್ ವಾಹನದಲ್ಲಿ ಬಿಕ್ಕರಣೆ-ಮಾಗುಂಡಿ ರಸ್ತೆಯಲ್ಲಿ  ಮಾಗುಂಡಿ ಕಡೆಗೆ ಅತೀವೇಗವಾಗಿ ಚಾಲನೆ ಮಾಡಿಕೊಂಡು ಹೋಗಿ ಪಿಕಪ್ ವಾಹನ ಪಲ್ಟಿಯಾಗಿದ್ದು, ಸದರಿ ಪಿಕಪ್ ವಾಹನದಲ್ಲಿ ಕಳುವು ಮಾಡಿಕೊಂಡು ಬಂದ 3 ಜಾನುವಾರುಗಳು ಇದ್ದು ಅವುಗಳ ಬೆಲೆ ಅಂದಾಜು ರೂ 30000/- ರೂ ಅಗಿದ್ದು, ಜಾನುವಾರುಗಳನ್ನು ಮತ್ತು ಸಾಗಾಣೀಕೆ ಮಾಡಲು ಬಳಸಿದ ಪಿಕಪ್ ವಾಹನವನ್ನು ಆಮಾನತ್ತುಪಡಿಸಿಕೊಂಡು ಬಂದು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 09-04-2022 06:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080