ಅಭಿಪ್ರಾಯ / ಸಲಹೆಗಳು

 ಮನುಷ್ಯ ಕಾಣೆ ಪ್ರಕರಣ

ಮಹಿಳಾ ಪೊಲೀಸ್ ಠಾಣೆ.

ದಿನಾಂಕ;08/06/2022 ರಂದು ಪಿರ್ಯಾದಿ ಶ್ರೀ ಕುಮಾರ ಬಿನ್ ಲೇಟ್ ಕೃಷ್ಣಪ್ಪ,  ವಾಸ ಉಪ್ಪಳ್ಳಿ, ಚಿಕ್ಕಮಗಳೂರು ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಗಳು ಕು: ಯಶಸ್ವಿನಿ ಇವಳು ದ್ವಿತೀಯ ಬಿ,ಕಾಂ. ಓದುತ್ತಿದ್ದು, ದಿನಾಂಕ; 08/06/2022 ರಂದು 8.00 ಗಂಟೆ ಸಮಯದಲ್ಲಿ ಮನೆಯಲ್ಲಿ ಇದ್ದವಳು 8.30 ಗಂಟೆ ಸಮಯದಲ್ಲಿ ಮನೆಯಿಂದ ಯಾರಿಗೂ ಹೇಳದೆ ಹೋದವಳು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಕು;ಯಶಸ್ವಿನಿ,  19 ವರ್ಷ,  ಕೋಲುಮುಖ, 5.5 ಅಡಿ ಎತ್ತರ, ದುಂಡುಮುಖ, ಸಾದಾರಣ ಮೈಕಟ್ಟು,ಕನ್ನಡ, ತಮಿಳು ಬಾಷೆ ಮಾತಾನಾಡುತ್ತಾಳೆ,  ಬಿಳಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಕಾಣೆಯಾಗಿರುವ ತನ್ನ ಮಗಳು ಕು: ಯಶಸ್ವಿನಿ ರವರನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಮರಳು ಕಳ್ಳತನ ಪ್ರಕರಣ

ಗೋಣಿಬೀಡು ಪೊಲೀಸ್ ಠಾಣೆ.

ದಿನಾಂಕ;08/06/2022 ರಂದು ಗೋಣಿಬೀಡು ಠಾಣಾ ಸರಹದ್ದಿನ ಹಿರೇಶಿಗರ ಗ್ರಾಮದ ಕಲ್ಯಾಣ ಕುಮಾರ್ ರವರ ಕಾಪೀತೋಟದ ಮುಂಭಾಗದ ಹೇಮಾವತಿ ನದಿಯಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ದಾಳಿ ಮಾಡಿದ್ದು, ದಾಳಿ ವೇಳೆ ಅಕ್ರಮವಾಗಿ ಮರಳನ್ನು ಕೆಎ-46-7376 ನಂಬರಿನ ಮಹಿಂದ್ರಾ ಬುಲೋರೋ ಪಿಕಪ್ ವಾಹನಕ್ಕೆ ಮರಳನ್ನು ತುಂಬಿಸುತ್ತಿದ್ದು, ಆರೋಫಿತರು ಪಿರ್ಯಾದಿ ಹಾಗೂ ಸಿಬ್ಬಂದಿಯವರನ್ನು ನೋಡಿ ಓಡಿ ಹೋಗಿದ್ದು, ಆರೋಫಿತರು ಅಕ್ರಮವಾಗಿ ತೆಗೆದಿದ್ದ ಮರಳನ್ನು ಮತ್ತು ವಾಹನವನ್ನು ಹಾಗೂ ಮರಳನ್ನು ತುಂಬಲು ಉಪಯೋಗಿಸಿದ್ದ 2 ಬುಟ್ಟಿ ಮತ್ತು ಗುದ್ದಲಿಗಳನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಫಿತರ ವಿರುದ್ದ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಧನಂಜಯ ಎಂ,ಆರ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಬೈಕ್ ಕಳ್ಳತನ ಪ್ರಕರಣ

ನಗರ ಪೊಲೀಸ್ ಠಾಣೆ

 ದಿನಾಂಕ;09/06/2022 ಪಿರ್ಯಾದಿ ಅರವಿಂದ ಎಸ್. ಬಿನ್ ಆರ್. ಸೋಮಶೇಖರ ಹನುಮಂತರಾಯ ಬೀದಿ, ದರ್ಜೀ ಬೀದಿ, ಚಿಕ್ಕಮಗಳೂರು ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯು ಕೆಎ18-ಇಹೆಚ್-5281 ಬಜಾಜ್ ಪಲ್ಸರ್ ಎನ್. ಎಸ್. 200 ಬೈಕ್ ಅನ್ನು ದಿನಾಂಕ;31/05/2022 ರಂದು ತಮ್ಮ ಮನೆಯ ಮುಂದೆ ರಾತ್ರಿ 8-00 ಗಂಟೆ ನಿಲ್ಲಿಸಿದ್ದು ದಿನಾಂಕ;01/06/2022 ರಂದು ನೋಡಲಾಗಿ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಇರುವುದಿಲ್ಲ, ಯಾರೋ ಕಳ್ಳರು ಬೈಕ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಬೈಕಿನ ಬೆಲೆ 105000/- ರೂ ಗಳಾಗಿದ್ದು, ಕಳುವು ಮಾಡಿದ ಕಳ್ಳರನ್ನು ಪತ್ತೆ ಮಾಡಿ ಬೈಕ್ ಅನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ  ಗೋ ಹತ್ಯಾ ಮತ್ತು ಮಾಂಸ ಮಾರಾಟ ಪ್ರಕರಣ

ಎನ್. ಆರ್. ಪುರ ಪೊಲೀಸ್ ಠಾಣೆ

ದಿನಾಂಕ:08/06/2022 ರಂದು ಎನ್. ಆರ್. ಪುರ ಠಾಣಾ ಸರಹದ್ದಿನ ಕಡಹೀನಬೈಲು ಗ್ರಾಮದ ಮೆಣಸೂರು ಭದ್ರಾ ಕಾಲೋನಿ ವಾಸಿಗಳಾದ ಬದ್ರುದ್ದೀನ್ ಬಿನ್ ಅಹಮದ್ ಬ್ಯಾರಿ  ಮತ್ತು ತಾಹೀರ ಕೊಂ ಬದ್ರುದ್ದೀನ್ ಇವರು ಅಕ್ರಮವಾಗಿ ದನಗಳನ್ನು ಕಡಿದು ಮಾಂಸವನ್ನು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಆರೋಪಿತರು ಓಡಿ ಹೋಗಿದ್ದು, ಮಾಂಸವನ್ನು ತೆಗೆದು ಕೊಂಡು ಓಡಿ ಹೋಗಿದ್ದು, ಅರೋಫಿತರ ಮನೆಯ ಹಿಂಭಾಗದಲ್ಲಿ ಅರೋಫಿತರು ದನವನ್ನು ಕಡಿದ ಸ್ಥಳದಲ್ಲಿ ದನದ ಚರ್ಮ, ಕಿವಿ, ಬಾಲ, ದೊಡ್ಡ ಹೊಟ್ಟೆ, ಸಣ್ಣ ಕರಳು ಭಾಗಗಳು ಹಾಗೂ, ಒಂದು ಮಚ್ಚು, ಬಿಳಿ ಪ್ಲಾಸ್ಟಿಕ್ ಚೀಲವಿದ್ದು ಸದರಿಯವುಗಳನ್ನು ಅಮಾನತ್ತುಪಡಿಸಿಕೊಂಡು ಬಂದು, ಅರೋಫಿತರ ವಿರುದ್ದ ಎನ್. ಆರ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಎನ್. ಆರ್. ಪುರ  ಠಾಣಾ ಪಿ.ಎಸ್.ಐ. ಶ್ರೀಗುರು ಎ. ಸಜ್ಜನ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ:09/06/2022 ರಂದು ಬೆಳಿಗ್ಗೆ 1.00 ಗಂಟೆ ಸಮಯದಲ್ಲಿ ಸಖರಾಯಪಟ್ಟಣ ಠಾಣಾ ಸರಹದ್ದಿನ ಸಖರಾಯಪಟ್ಟಣದ ಬಾಣಾವರ ರಸ್ತೆಯಲ್ಲಿ  ಕೃಷ್ಣ ಎಸ್.ವಿ. ಬಿನ್ ಲೇಟ್ ವಸಂತ, ವಾಸ ಪಶು ಅಸ್ಪತ್ರೆ ಹತ್ತಿರ, ಸಖರಾಯಪಟ್ಟಣ ಈತನು ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಯನ್ನು ವಶಕ್ಕೆ ಪಡೆದು ಸದರಿ ಅಸಾಮಿ ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತನ ವಿರುದ್ದ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸಖರಾಯಪಟ್ಟಣ ಠಾಣಾ ಪಿ.ಎಸ್.ಐ ನವೀನ್ ಎನ್. ಪಿ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಬಣಕಲ್ ಪೊಲೀಸ್ ಠಾಣೆ.

ದಿನಾಂಕ:08/06/2022 ರಂದು ಸಂಜೆ ಬಣಕಲ್ ಠಾಣಾ ಸರಹದ್ದಿನ ಬಣಕಲ್ ಟೌನ್ ಚರ್ಚ್ ರಸ್ತೆಯಲ್ಲಿ ಅದೀಲ್ ಷಾ @ ಅಂಜು ಬಿನ್ ಲೇಟ್ ಬಿ. ಅಬ್ಬಾಸ್, ವಾಸ ಚರ್ಚ್ ರಸ್ತೆ, ಬಣಕಲ್ ಇವನು ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಯನ್ನು ವಶಕ್ಕೆ ಪಡೆದು ಸದರಿ ಅಸಾಮಿ ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತನ ವಿರುದ್ದ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಬಣಕಲ್ ಠಾಣಾ ಪಿ.ಎಸ್.ಐ ಶ್ರೀಮತಿ ಗಾಯಿತ್ರಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ:08/06/2022 ರಂದು ಮೂಡಿಗೆರೆ ಠಾಣಾ ಸರಹದ್ದಿನ ಗಂಗನಮಕ್ಕಿ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಶಾಹೀದ್ ಬಿನ್ ನೂರ್ ಅಹಮ್ಮದ್ ಈತನು ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಯನ್ನು ವಶಕ್ಕೆ ಪಡೆದು ಸದರಿ ಅಸಾಮಿ ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತನ ವಿರುದ್ದ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಮೂಡಿಗೆರೆ ಠಾಣಾ ಪಿ.ಎಸ್.ಐ ಆದರ್ಶ ಎಂ.ಎಸ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ:08/06/2022 ರಂದು ಮೂಡಿಗೆರೆ ಠಾಣಾ ಸರಹದ್ದಿನ ಮೂಡಿಗೆರೆ ಪಟ್ಟಣದ ಈದ್ಗಾ ಮೈದಾನದ ರಸ್ತೆಯಲ್ಲಿರುವ ವಾಟರ್ ಟ್ಯಾಂಕ್ ಮುಂದೆ ಜಂಶೀದ್ @ ಗಬ್ಬರ್ ಬಿನ್ ರಜಾಕ್ ವಾಸ ದೊಡ್ಡಿಬೀದಿ, ಮೂಡಿಗೆರೆ ಪಟ್ಟಣ ಈತನು ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಯನ್ನು ವಶಕ್ಕೆ ಪಡೆದು ಸದರಿ ಅಸಾಮಿ ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತನ ವಿರುದ್ದ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಮೂಡಿಗೆರೆ ಠಾಣಾ ಪಿ.ಎಸ್.ಐ ಆದರ್ಶ ಎಂ.ಎಸ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ನಗರ ಪೊಲೀಸ್ ಠಾಣೆ.

ದಿನಾಂಕ:08/06/2022 ರಂದು ನಗರ ಠಾಣಾ ಸರಹದ್ದಿನ ತಮಿಳು ಕಾಲೋನಿಯ ಸಂತೆ ಮೈದಾನದ ಲಾರಿ ಸ್ಯಾಂಡ್ ಬಳಿ ಮಹಮ್ಮದ್ ಶಾಹಿದ್ ಬಿನ್ ಸಾದಿಕ್ ಹುಸೇನ್ ವಾಸ ಅರವಿಂದ ನಗರದ ಸೆವೆಂಥ್ ಡೇ ಸ್ಕೂಲ್ ಹಿಂಭಾಗ ಚಿಕ್ಕಮಗಳೂರು ಈತನು ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಯನ್ನು ವಶಕ್ಕೆ ಪಡೆದು ಸದರಿ ಅಸಾಮಿ ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತನ ವಿರುದ್ದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ನಗರ ಠಾಣಾ ಪಿ.ಎಸ್.ಐ ಸತೀಶ್ ಕೆ.ಎಸ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ.

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ:08-06-2022 ರಂದು ಸಖರಾಯಪಟ್ಟಣ ಪೊಲೀಸ್ ಠಾಣಾ ಸರಹದ್ದಿನ ಎಸ್.ಬಿದರೆ ಗೇಟ್  ಕೆರೆಯ ಪಕ್ಕದ ಕಣದಾಳು ಗೆ ಹೋಗುವ ರಸ್ತೆಯಲ್ಲಿ  ರಂಗಸ್ವಾಮಿ ಬಿನ್ ದಿ: ಬಿ.ಎಸ್. ತಿಮ್ಮಶೇಟ್ಟಿ , ಎಸ್, ಬಿದರೆ ಈತನು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಅರೋಪಿಯನ್ನು ವಶಕ್ಕೆ ಪಡೆದು, ಅರೋಪಿತನ ವಶದಲ್ಲಿ ಇದ್ದ 90 ಎಂ.ಎಲ್. ನ 34 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1190/- ರೂ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತನ ವಿರುದ್ದ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸಖರಾಯಪಟ್ಟಣ ಠಾಣಾ ಪಿ.ಎಸ್.ಐ. ಲೋಕೇಶ್ ಜಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 09-06-2022 06:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080