ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಸಖರಾಯಪಟ್ಟಣ  ಪೊಲೀಸ್ ಠಾಣೆ

ದಿನಾಂಕ 09/09/2021 ರಂದು 13-45 ಗಂಟೆ ಸಮಯದಲ್ಲಿ ಎಂ.ಸಿ. ಚಂದ್ರಶೇಖರ್ ಬಿನ್ ಚನ್ನಬಸಪ್ಪಶೆಟ್ಟಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯರವರ ಅಣ್ಣ ಜಯಶಂಕರ್ ಎಂ.ಸಿ.ಮಗಳು ರಕ್ಷಿತಾ ಇವರು ದಿನಾಂಕ;09/09/2021 ರಂದು ಮದ್ಯಾಹ್ನ  12.30 ಗಂಟೆ ಸಮಯದಲ್ಲಿ ಕೆಎ-18-ಇಜೆ-2736 ರ ಟಿ.ವಿ.ಎಸ್. ನಲ್ಲಿ ಜಯಶಂಕರ್ ಎಂ.ಸಿ. ರವರನ್ನು ಕೂರಿಸಿಕೊಂಡು ಊರಿಗೆ ಹೋಗುತ್ತಿರುವಾಗ ಸಖರಾಯಪಟ್ಟಣದ ಉದ್ದೋಬೋರನಹಳ್ಳಿ ಗ್ರಾಮದ ಕಡೆಕಾಲುವೆ ಬಳಿ ಚಾಲನೆ ಮಾಡಿಕೊಂಡು ಬರುತ್ತಿರುವಾಗ ಎದುರುಗಡೆಯಿಂದ ಬಂದ ಕೆಎ-66-0117 ರ ಲಾರಿ ಚಾಲಕ ಲಾರಿಯನ್ನು ವೇಗ ಮತ್ತು ದುಡುಕಿನಿಂದ ಚಾಲನೆ ಮಾಡಿಕೊಂಡು ಬಂದು ಟಿ.ವಿ.ಎಸ್. ಗೆ ಡಿಕ್ಕಿ ಹೊಡೆಸಿದ ಪರಿಣಾಮ ಟಿ.ವಿಎಸ್.ಚಾಲನೆ ಮಾಡುತ್ತಿದ್ದ ರಕ್ಷಿತಳಿಗೆ ಮತ್ತು ಜಯಶಂಕರ್ ಎಂ.ಸಿ ರವರಿಗೆ  ತಲೆ, ಮೈ ಕೈಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅದ್ದರಿಂದ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ  ಸಖರಾಯಪಟ್ಟಣ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಗ್ರಾಮಾಂತರ ಪೊಲೀಸ್ ಠಾಣೆ

ದಿನಾಂಕ 09/09/2021 ರಂದು 13-15 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ಕೋಟೆ ಸುಗ್ಗಿಕಲ್ಲು ವಾಸಿ ಮಹೇಶ್  ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯರವರ ನಾದಿನಿ ಮಗ ಮನೋಜನು ದಿನಾಂಕ 09/09/2021 ರಂದು 10.00 ಗಂಟೆಯ ಸಮಯದಲ್ಲಿ ಕೆಎ-18-ಬಿ-8030 ರ ಅಟೋರೀಕ್ಷಾ ವನ್ನು ಮಲ್ಲೇದೇವರಹಳ್ಳಿ ಕ್ರಾಸ್ ಹತ್ತಿರ ಹಿರೇಮಗಳೂರು ಕಡೆಯಿಂದ ರಸ್ತೆಯ ಎಡಬದಿಯಲ್ಲಿ ಬರುತ್ತಿರುವಾಗ ಮಾಗಡಿ ರಸ್ತೆ ಕಡೆಯಿಂದ ಬಂದ ಕೆಎ-51-ಡಿ-6895 ನೇ ಟಾಟಾ ಏಸ್ ವಾಹನದ ಚಾಲಕನು ವಾಹನವನ್ನು ಅತೀವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿದ್ದವನು ಯಾವುದೇ ಸೂಚನೆ ಕೊಡದೇ ಮಲ್ಲೇದೇವರಹಳ್ಳಿ ಕಡೆಗೆ ರಸ್ತೆಗೆ ತಿರುಗಿಸಿದಾಗ ಹಿರೇಮಗಳೂರು ಕಡೆಯಿಂದ ಬಂದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡಿಸಿದ ಪರಿಣಾಮ ಮನೋಜನು ಪೆಟ್ಟಾಗಿ ಅಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ. ಅದ್ದರಿಂದ ಟಾಟಾ ಏಸ್ ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ  ಗ್ರಾಮಾಂತರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ತರೀಕೆರೆ  ಪೊಲೀಸ್ ಠಾಣೆ

ದಿನಾಂಕ;09/09/2021 ರಂದು 12.30 ಗಂಟೆ ಸಮಯದಲ್ಲಿ ತರೀಕೆರೆ ಠಾಣಾ ಸರಹದ್ದಿನ ಹಾದಿಕೆರೆ ವಾಸಿ ಪಿರ್ಯಾದಿ ವಿನಯ ರವರು ನೀಡಿದ ದೂರಿನಲ್ಲಿ ತನ್ನ ತಮ್ಮ ಮಂಜುನಾಥ ರವರಿಗೆ ಸಂಸಾರದ ವಿಚಾರದಲ್ಲಿ ಸಣ್ಣಪುಟ್ಟ ಮನಸ್ತಾಪಗಳು ಅಗಿದ್ದರಿಂದ ದಿನಾಂಕ;08/09/2021 ರಂದು ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ಪಿರ್ಯಾದಿಯ ಮನೆಯಿಂದ ತರೀಕೆರೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಇದುವರೆಗೂ ವಾಪಾಸ್ ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆ ಅಗಿಲ್ಲವೆಂದು ಕಾಣೆಯಾಗಿರುವ ತನ್ನ ತಮ್ಮನನ್ನು ಪತ್ತೆ ಮಾಡಿಕೊಡುವಂತೆ ನೀಡಿದ  ದೂರಿನ ಮೇರೆಗೆ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 09-09-2021 07:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080