ಅಭಿಪ್ರಾಯ / ಸಲಹೆಗಳು

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ.

ಸಿ.ಇ.ಎನ್. ಪೊಲೀಸ್ ಠಾಣೆ.

ದಿನಾಂಕ 08-11-2021 ರಂದು ಗ್ರಾಮಾಂತರ ಠಾಣಾ ಸರಹದ್ದಿನ  ಕುರುವಂಗಿ ಗ್ರಾಮದ ಕೆರೆಯ ದಡದ ಮೇಲ್ಬಾಗದಲ್ಲಿ  ಸಾರ್ವಜನಿಕ ಖಾಲಿ ಜಾಗದಲ್ಲಿ  ಅಕ್ರಮವಾಗಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಫಿತರಾದ 1. ವಿಜಯ್ ಕೆ. 2. ಮಹೇಶ್ ಎನ್.ಆರ್. 3. ಧನಂಜಯ ಬಿ.ಪಿ. 4. ರವಿ 5. ಚಂದು 6. ಕಿಶೋರ ವಿ. 7.ನಾಗರಾಜ್ 8. ಕಾಂತರಾಜ್ ಕೆ.ಎಲ್. 9. ಹರೀಶ್ ಕೆ.ಎಂ. 10 ರಘು ಬಿ.ಬಿ. 11. ಯತೀಶ್  ರವರನ್ನು ವಶಕ್ಕೆ ಪಡೆದು ಆರೋಪಿತರಾದ ಉಮೇಶ್ 2. ಲೋಹಿತ್ ರವರು ಓಡಿ ಹೋಗಿದ್ದು,  ಆರೋಫಿತರು ಇಸ್ಪೀಟ್ ಜೂಜಾಡಲು ಉಪಯೋಗಿಸಿದ 16980/- ರೂ ನಗದು ಹಣ 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲ, ಎರಡು ಅರ್ಧ ಉರಿದ ಕ್ಯಾಂಡಲ್ ಹಾಗೂ ವಿವಿಧ ಕಂಪನಿಯ 10 ಮೋಬೈಲ್ ಗಳನ್ನು ಅಮಾನತ್ತುಪಡಿಸಿಕೊಂಡು ಬಂದು, ಆರೋಪಿತರ ವಿರುದ್ದ  ಸಿ.ಇ.ಎನ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ರಫೀಕ್ ಎಂ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ:08-11-2021 ರಂದು ಪಿರ್ಯಾದಿ ಅರವಿಂದ ಗೌಡ ಬಿನ್ ಲಕ್ಮಣಗೌಡ ಸನ್ನೀದಿ ಲೇ ಔಟ್ ಮೂಡಿಗೆರೆ ರವರು ನೀಡಿದ ದೂರಿನಲ್ಲಿ ದಿನಾಂಕ:07-11-2021 ರಂದು ಪಿರ್ಯಾದಿ ಸಂಬಂಧಿಕರ ಮದುವೆಗೆ ಬೆಂಗಳೂರಿಗೆ ಹೋಗಿದ್ದು ದಿನಾಂಕ 08-11-2021 ರಂದು ವಾಪಾಸ್ಸು ಬಂದು ನೋಡಲಾಗಿ ಯಾರೋ ಕಳ್ಳರು ಮೊದಲನೇ ಮಹಡಿಯ ಹಿಂಬದಿಯ ಬಾಗಿಲ ಇಂಟರ್ ಲಾಕ್ ಬಾಗಿಲು ಮುರಿದು ಬೆಡ್ ರೂಂ ವಾಲ್ ಡ್ರೂಬ್ ನಲ್ಲಿದ್ದ 2,50,000/- ರೂ ನಗದು ಹಾಗೂ 30,000/- ರೂ ಮೌಲ್ಯದ 2 ಜೊತೆ ಕಿವಿ ಓಲೆಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆ ಹಚ್ಚಿ ಕಳುವಾಗಿರುವ ನಗದು ಮತ್ತು ಕಿವಿ ಓಲೆಯನ್ನು ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕುರಿ ಕಳ್ಳತನ ಪ್ರಕರಣ

ಕಡೂರು ಪೊಲೀಸ್ ಠಾಣೆ.

ದಿನಾಂಕ:08-11-2021 ರಂದು ಕಡೂರು ಟೌನ್ ಹಳೇಪೇಟೆ ವಾಸಿ ಕೆ.ಪಿ. ಕುಮಾರ ಬಿನ್ ಪುಟ್ಟಪ್ಪ ಇವರು ನೀಡಿದ ದೂರಿನಲ್ಲಿ ಪಿರ್ಯಾದಿ 200 ಕುರಿಗಳನ್ನು ಸಾಕಿಕೊಂಡಿದ್ದು ದಿನಾಂಕ 03-11-2021 ರಂದು ರಾತ್ರಿ ತನ್ನ ಬಾಬ್ತು ಕುರಿಗಳನ್ನು ಕಡೂರು ಚಿಕ್ಕಮಗಳೂರು ಮುಖ್ಯ ರಸ್ತೆಯಲ್ಲಿರುವ ಹೊಸ ಪೆಟ್ರೋಲ್ ಬಂಕ್ ಮುಂಭಾಗ ಇರುವ ಮೀಸೆ ಹೊನ್ನಪ್ಪರವರ ಅಡಿಕೆ ತೋಟದಲ್ಲಿ ಕುರಿಗಳನ್ನು ಮಂದೆ ಬಿಟ್ಟಿದ್ದು ಮಾರನೇ ದಿನ ಬೆಳ್ಳಿಗ್ಗೆ ನೋಡಲಾಗಿ 2 ಟಗರು ಮತ್ತು 8 ಹೆಣ್ಣು ಕುರಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕುರಿಗಳ ಬೆಲೆ 1,20,000/-ರೂ ಗಳಾಗಿದು  ಕಳ್ಳರನ್ನು  ಕಳುವಾಗಿರುವ ಕುರಿಗಳನ್ನು ಪತ್ತೆ ಮಾಡಿ ಕೊಡುವಂತೆ ದೂರು ನೀಡಿದ ಮೇರೆಗೆ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ: 08-11-2021 ರಂದು ತರೀಕೆರೆ ಠಾಣಾ ಸರಹದ್ದಿನ  ಬಿ. ರಾಮನಹಳ್ಳಿ ಗ್ರಾಮದಲ್ಲಿ ಮೂರ್ತಿ ಬಿನ್ ಮಾರಪ್ಪ,್ಪ  ಎಂಬುವರು ತಮ್ಮ ಚಿಲ್ಲರೆ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 90 ಎಂ.ಎಲ್. 8 ಟೆಟ್ರಾಪ್ಯಾಕ್ ಮದ್ಯವನ್ನು ಮತ್ತು 250 ರೂ ನಗದು ಹಣವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 250/-ರೂ ಆಗಿದ್ದು, ಆರೋಪಿ ವಿರುದ್ದ  ತರೀಕೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಶ್ರೀ ಕೃಷ್ಣನಾಯ್ಕ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಬೀರೂರು ಪೊಲೀಸ್ ಠಾಣೆ.

ದಿನಾಂಕ:09-11-2021 ರಂದು ಬೀರೂರು ಠಾಣಾ ಸರಹದ್ದಿನ ಹೊಗರೆಹಳ್ಳಿ ವಾಸಿ ಮೂರ್ತಪ್ಪ  ಹೆಚ್.ಎಲ್ ಬಿನ್ ಲಕ್ಷ್ಮಯ್ಯ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ಮಗಳು ಭೂಮಿಕಾ ಹೆಚ್.ಎಂ., 18 ವರ್ಷ ಇವಳು ದಿನಾಂಕ 08-11-2021 ರಂದು ಹೊಗರೇಹಳ್ಳಿಯಿಂದ ಬೀರೂರಿಗೆ ಕಾಲೇಜಿಗೆ ಹೋಗಿ ಬರುತ್ತೇನೆಂದು ಬೆಳಿಗ್ಗೆ ಹೋದವಳು ಈವರೆಗೂ ಮನೆಗೆ ವಾಪಾಸ್ಸು ಬಂದಿರುವುದಿಲ್ಲ. ಎಲ್ಲಾ ಹುಡುಕಡಿದರೂ ಈ ವರೆಗೂ ಮಗಳು ಪತ್ತೆ ಅಗದೆ ಇದ್ದು ನನ್ನ ಮಗಳ ಚಹರೆ ಕು; ಭೂಮಿಕಾ , 18 ವರ್ಷ, ಗೋದಿ ಮೈ ಬಣ್ಣ , ಸಾದಾರಣ ಮೈಕಟ್ಟು , ಕಾಫಿ ಬಣ್ಣದ ಚೂಡಿದಾರ ಮತ್ತು ನೀಲಿ ಬಣ್ಣದ ಜಿನ್ಸ್ ಕೋಟ್ ಧರಿಸಿರುತ್ತಾಳೆ. ಭಾಷೆ ಕನ್ನಡ ಮಾತಾನಾಡುತ್ತಾಳೆ. ಇವಳನ್ನು ಪತ್ತೆ ಮಾಡಿ ಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 09-11-2021 07:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080