ಅಭಿಪ್ರಾಯ / ಸಲಹೆಗಳು

ರಸ್ತೆ  ಅಪಘಾತ  ಪ್ರಕರಣ.

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ: 09-12-2021 ರಂದು  ವಡ್ಡಂಬಾಳು, ಹುಣಸೂರು ಗ್ರಾಮದ ವಾಸಿ ಕಾರ್ತಿಕ್ ರವರು ನೀಡಿದ ದೂರಿನಲ್ಲಿ ದಿನಾಂಕ:08-12-2021 ರಂದು ಪಿರ್ಯಾದಿಯವರ ಅಣ್ಣನಾದ  ಗೌತಮ್ ರವರು ತನ್ನ ಬಾಬ್ತು ಕೆಎ-45 ಇಈ- 9135 ಬೈಕಿನಲ್ಲಿ ರಾತ್ರಿ 08-45 ಗಂಟೆ ಸಮಯದಲ್ಲಿ ಜೋಡಿಹೋಚಿಹಳ್ಳಿಯ ವಸತಿ ಶಾಲೆಯ ಮುಂದೆ ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಕೆಎ-13 ಸಿ- 3033 ಲಾರಿ ಚಾಲಕ ಲಾರಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಗೌತಮ್ ರವರ ತಲೆಗೆ ಹಾಗೂ ಎದೆಗೆ  ತೀವ್ರ ಪೆಟ್ಟಾಗಿದ್ದು  ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಪಘಾತಗೊಳಿಸಿದ ಲಾರಿ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ  ಪ್ರಕರಣ.

ಮೂಡಿಗೆರೆ  ಪೊಲೀಸ್ ಠಾಣೆ.

ದಿನಾಂಕ:09-12-2021 ರಂದು ಮೂಡಿಗೆರೆ ಪೊಲೀಸ್ ಠಾಣಾ ಸರಹದ್ದಿನ ದೊಡ್ಡಿಬೀದಿ  ಗ್ರಾಮದ ವಾಸಿ ಇಸ್ಮಾಯಿಲ್ ಷರೀಫ್ ಇವರು ನೀಡಿದ ದೂರಿನಲ್ಲಿ ದಿನಾಂಕ:07-12-2021 ರಂದು ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ ಪಿರ್ಯಾದಿಯವರ ಹೆಂಡತಿಯಾದ ರಿಜ್ವಾನ್ ಕೌಸರ್ರವರು ಅಂಗಡಿಗೆ ಬೇಕಾದ ಸಾಮಾನುಗಳನ್ನು ತರಲು ಹೋಗಿದ್ದವರು ಇದುವರೆವಿಗೂ ಮನೆಗೆ ಬಂದಿರುವುದಿಲ್ಲ. ಇವರನ್ನು ಎಲ್ಲಾ ಕಡೆ ಹುಡುಕಾಡಿದರೂ ಸಹ ಈವರೆಗೆ ಸಿಕ್ಕಿರುವುದಿಲ್ಲವೆಂದು ಕಾಣೆಯಾಗಿರುವ ನನ್ನ ಹೆಂಡತಿ ರಿಜ್ವಾನ್ ಕೌಸರ್, 45 ವರ್ಷ, ಸಾದಾರಣ ಮೈ ಕಟ್ಟು, ಎಣ್ಣೆಗೆಂಪು ಮೈ ಬಣ್ಣ, ಹಿಂದಿ ಮಾತಾನಾಡುತ್ತಾರೆ.ಕಾಣೆಯಾಗಿರುವ ರಿಜ್ವಾನ್ ಕೌಸರ್ರವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಮೂಡಿಗೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

 

ಇತ್ತೀಚಿನ ನವೀಕರಣ​ : 09-12-2021 06:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080