ಅಭಿಪ್ರಾಯ / ಸಲಹೆಗಳು

ಕಳ್ಳತನ ಪ್ರಕರಣ .

ಬಸವನಹಳ್ಳಿ  ಪೊಲೀಸ್ ಠಾಣೆ.

ದಿನಾಂಕ:10/07/2021 ರಂದು ಬಸವನಹಳ್ಳಿ ಠಾಣಾ ವ್ಯಾಫ್ತಿಯ ಅಂಚೆ ಲಿಂಗಣ್ಣ ಬೀದಿ ವಾಸಿ ಶ್ರೀ ಜಗದೀಶ್ ಸಿ.ಎನ್.  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ಪಿರ್ಯಾದಿಯವರು ತಮ್ಮ ಬಾಬ್ತು ಟಿ.ವಿ.ಎಸ್. ಅಪಾಚಿ ಬೈಕ್ ನಂ ಕೆಎ-47 ಹೆಚ್- 3597  ಅನ್ನು ದಿನಾಂಕ:02/07/2021 ರಂದು ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದು,  ಮಾರನೇ ದಿನ ಬೆಳಿಗ್ಗೆ ನೋಡಲಾಗಿ ಯಾರೋ ಕಳ್ಳರು ಬೈಕ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈವರೆಗೂ ಬೈಕ್ ನ್ನು ಹುಡಕಲಾಗಿ ಪತ್ತೆ ಅಗಿರುವುದಿಲ್ಲವೆಂದು, ಬೈಕ್ ಕಲರ್ ನೀಲಿ ಬಣ್ಣದಾಗಿದ್ದು, ಸುಮಾರು 25,000/- ರೂ ಬೆಲೆಯದ್ದಾಗಿದ್ದು , ಕಳುವಾಗಿರುವ ಬೈಕ್ ನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 ರಸ್ತೆ ಅಪಘಾತ ಪ್ರಕರಣ

 ಅಜ್ಜಂಫುರ ಪೊಲೀಸ್ ಠಾಣೆ.

 ದಿನಾಂಕ:10/07/2021 ರಂದು ಸೊಕ್ಕೆ ತಿಮ್ಮಾಫುರದ ವಾಸಿಯಾದ ಪರಮೇಶ್ ಬಿನ್ ರಾಮಪ್ಪ ರವರು  ನೀಡಿದ ದೂರಿನಲ್ಲಿ ಈ ದಿನ ಬೆಳಿಗ್ಗೆ 7-00 ಗಂಟೆಗೆ ಪಿರ್ಯಾದಿ ಮತ್ತು ಅವರ ಗ್ರಾಮದವರು ಸುದರ್ಶನ ರವರು ಕೆಎ-46-7505 ಮಹೀಂದ್ರ ಇಂಪರಿಯರ್ ವಾಹನದಲ್ಲಿ ಸೊಕ್ಕೆ ತಿಮ್ಮಾಫುರ ಗ್ರಾಮದಿಂದ ಹೆಬ್ಬೂರು ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿರುವಾಗ ರಂಗಾಪುರದಿಂದ ಮುಂದೆ ಕಲ್ಲುಶೆಟ್ಟಿ ಕಡೆ ಬರುತ್ತಿರುವಾಗ ತಿರುವಿನಲ್ಲಿ ಕೆಎ-16-ಡಿ-6269 ಮಹೀಂದ್ರ ಪಿಕಪ್ ವಾಹನದ ಚಾಲಕ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಮಂಜಮ್ಮ , ಶೈಲಜಾ ಮತ್ತು ದೇವಿರಮ್ಮ ಎಂಬುವರಿಗೆ ಪೆಟ್ಟು ಅಗಿರುವುದಾಗಿ, ಅಪಘಾತಪಡಿಸಿದ ವಾಹನದ ಚಾಲಕನ ಮೇಲೆ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 10-07-2021 07:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080