ಅಭಿಪ್ರಾಯ / ಸಲಹೆಗಳು

ಅಕ್ರಮ  ಮದ್ಯ  ಮಾರಾಟ ಪ್ರಕರಣ.

ಯಗಟಿ ಪೊಲೀಸ್ ಠಾಣೆ.

ದಿನಾಂಕ 10-08-2021 ರಂದು ಬೆಳಿಗ್ಗೆ  ಕಡೂರು ತಾಲ್ಲೋಕು ಆರೇಹಳ್ಳಿ  ಗ್ರಾಮದ ವಾಸಿಯಾದ ಸೋಮನಾಥ ಬಿನ್ ರಂಗಪ್ಪ  ಎಂಬುವರು ತಮ್ಮ ಮನೆಯ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಆರೋಪಿತನು ಅಕ್ರಮವಾಗಿ ಹೊಂದಿದ 1090/-ರೂ ಬೆಲೆಯ 90 ಎಂ.ಎಲ್.ನ 31 ಟೆಟ್ರಾಪ್ಯಾಕ್ ರಾಜಾವಿಸ್ಕಿಯನ್ನು ಅಮಾನತ್ತು ಪಡಿಸಿಕೊಂಡು ಬಂದು ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿ.ಎಸ್.ಐ. ಶಶಿಕುಮಾರ್ ವೈ . ಎಸ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕೊಪ್ಪ ಪೊಲೀಸ್ ಠಾಣೆ.

ದಿನಾಂಕ 10-08-2021 ರಂದು 11.40 ಗಂಟೆ ಸಮಯದಲ್ಲಿ ಕೊಪ್ಪ  ತಾಲ್ಲೋಕು ಹುಲ್ಲುಮಕ್ಕಿ  ಬಸ್ ನಿಲ್ದಾಣದ ಬಳಿ ಆದರ್ಶ  ಬಿನ್ ರಾಮಪ್ಪಗೌಡ ಕಾಗಲಗೋಡು ಗ್ರಾಮದ ವಾಸಿ ಈತನು ಕೊಪ್ಪದಿಂದ ಕೊಪ್ಪದ ಸುತ್ತಮುತ್ತಲ ಹಳ್ಳಿಗಳಿಗೆ ಮದ್ಯ ಮಾರಾಟ ಮಾಡಲು ತನ್ನ ಬಾಬ್ತು ಕೆಎ-18-ಎಕ್ಸ್ 9712 ರ ಬಜಾಜ್  ಪಲ್ಸರ್ ಬೈಕಿನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದು , ಆರೋಪಿಯನ್ನು ವಶಕ್ಕೆ ಪಡೆದು, ಆರೋಪಿತನು ಅಕ್ರಮವಾಗಿ ಹೊಂದಿದ್ದ 2666/-ರೂ ಬೆಲೆಯ 90 ಎಂ.ಎಲ್.ನ 60 ಟೆಟ್ರಾಪ್ಯಾಕ್ ಓರಿಜನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯ ಮತ್ತು 90 ಎಂ.ಎಲ್.ನ 20 ಟೆಟ್ರಾಪ್ಯಾಕ್ ಡಿ.ಕೆ. ಡಬಲ್ಕಿಕ್ ಫೈನ್ ವಿಸ್ಕಿಯನ್ನು , ಕೆಎ-18-ಎಕ್ಸ್ 9712 ರ ಬಜಾಜ್  ಪಲ್ಸರ್ ಬೈಕನ್ನು ಅಮಾನತ್ತುಪಡಿಸಿಕೊಂಡು ಬಂದು ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿ.ಎಸ್.ಐ. ಶ್ರೀನಾಥ ರೆಡ್ಡಿ .ವಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಲಕ್ಕವಳ್ಳಿ ಪೊಲೀಸ್ ಠಾಣೆ

ದಿನಾಂಕ:10/08/2021 ರಂದು ಪಿರ್ಯಾದು ದಾರರಾದ ಸೋಮಶೇಖರ್ ರವರು ನೀಡಿದ ದೂರಿನಲ್ಲಿ ದಿನಾಂಕ:09/08/2021 ರಂದು ರಾತ್ರಿಯಿಂದ ದಿನಾಂಕ:10/08/2021 ರ ಬೆಳಿಗ್ಗೆ ನ ಮದ್ಯದ ಅವಧಿಯಲ್ಲಿ ಸೋಂಪುರ ಗ್ರಾಮದ ಶ್ರೀ ಪ್ರಸನ್ನ ಸೋಮೇಶ್ವರ ದೇವಸ್ಥಾನದ ಮುಂಭಾಗದ ಬೀಗವನ್ನು ಯಾರೋ ಕಳ್ಳರು, ಯಾವುದೋ ಆಯುಧದಿಂದ ಹೊಡೆದು ದೇವಸ್ಥಾನದ ಒಳಗೆ ಪ್ರವೇಶಿಸಿ ಒಳಗಿದ್ದ ಕಬ್ಬಿಣದ ಹುಂಡಿಯನ್ನು ಹೊಡೆದು ಹುಂಡಿಯಲ್ಲಿಂದ 3,000/- ರೂ ನಷ್ಟು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನ ಮಾಡಿದವರನ್ನು  ಮತ್ತು ಕಳುವಾಗಿರುವ ನಗದನ್ನು ಪತ್ತೆ ಮಾಡಿ ಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 10-08-2021 07:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080