ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ  ಪ್ರಕರಣ

ಕಳಸ ಪೊಲೀಸ್ ಠಾಣೆ.

 ದಿನಾಂಕ:09-01-2022 ರಂದು ಕಳಸ ಠಾಣಾ ಸರಹದ್ದಿನ ಮರಸಣಿಗೆ ಗ್ರಾಮದ ಮಕ್ಕಿತಲೆ ಎಂಬಲ್ಲಿ ದುಗ್ಗನಮಕ್ಕಿ ವಾಸಿ ವರುಣ್ ವಿ ಬಿನ್ ಈರಪ್ಪ ರವರು ಅವರ ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದವನನ್ನು ವಶಕ್ಕೆ ಪಡೆದು ಅರೋಪಿ ಬಳಿ ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ 20ಟೆಟ್ರಾಪ್ಯಾಕ್ ಮತ್ತು 180 ಎಂ.ಎಲ್. ನ 5 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1140/- ರೂ ಅಗಿದ್ದು ಸದೆರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಹರ್ಷವರ್ಧನ್, ಹೆಚ್.ಕೆ. ಮತ್ತು ಸಿಬ್ಬಂದಿಯವರಾದ ಶಿವಕುಮಾರ್, ಬಸವರಾಜ್ ಗುಂಡ್ಲೂರ್ ಉಮೇಶ್ ಕರಿಗೂಳಿ ಹಾಗೂ ಚಂದ್ರಶೇಖರ್  ರವರು ಪಾಲ್ಗೊಂಡಿರುತ್ತಾರೆ.

ಕಳಸ ಪೊಲೀಸ್ ಠಾಣೆ.

 ದಿನಾಂಕ:09-01-2022 ರಂದು ಕಳಸ ಠಾಣಾ ಸರಹದ್ದಿನ ಮರಸಣಿಗೆ ಗ್ರಾಮದ ಕೆಳಮರಸಣಿಗೆ ಎಂಬಲ್ಲಿ ಮರಸಣಿಗೆ ವಾಸಿ ಲ್ಯಾನ್ಸಿ ಡಿಸೋಜಾ ಬಿನ್ ಲೇಟ್ ಫೆಲಿಕ್ಸ್ ರವರು ಅವರ ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದವನನ್ನು ವಶಕ್ಕೆ ಪಡೆದು ಅರೋಪಿ ಬಳಿ ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ 23 ಟೆಟ್ರಾಪ್ಯಾಕ್ ಮತ್ತು 180 ಎಂ.ಎಲ್. ನ 5 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1241/- ರೂ ಅಗಿದ್ದು ಸದೆರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಹರ್ಷವರ್ಧನ್, ಹೆಚ್.ಕೆ. ಮತ್ತು ಸಿಬ್ಬಂದಿಯವರಾದ ಶಿವಕುಮಾರ್, ಬಸವರಾಜ್ ಗುಂಡ್ಲೂರ್, ಉಮೇಶ್ ಕರಿಗೂಳಿ ಹಾಗೂ ಚಂದ್ರಶೇಖರ್  ರವರು ಪಾಲ್ಗೊಂಡಿರುತ್ತಾರೆ.

  ಬಾಳೆಹೊನ್ನೂರು ಪೊಲೀಸ್ ಠಾಣೆ.

 ದಿನಾಂಕ:09-01-2022 ರಂದು ಬಾಳೆಹೊನ್ನೂರು ಠಾಣಾ ಸರಹದ್ದಿನ ಬನ್ನೂರು ಗ್ರಾಮದಲ್ಲಿ  ಜಕ್ಕಣಕ್ಕಿ ಗ್ರಾಮದ ವಾಸಿ ಲಕ್ಷ್ಮಣ ಬಿನ್ ಲೇಟ್ ಮೋಟೇಗೌಡ  ರವರು ಅವರ ದಿನಸಿ ಅಂಗಡಿಯ ಮುಂಭಾಗದಲ್ಲಿ  ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದವನನ್ನು ವಶಕ್ಕೆ ಪಡೆದು ಅರೋಪಿ ಬಳಿ ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ 34 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1194/- ರೂ ಅಗಿದ್ದು ಸದೆರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ನಿತ್ಯಾನಂದಗೌಡ ಪಿ.ಡಿ. ಮತ್ತು ಸಿಬ್ಬಂದಿಯವರಾದ ಶಶಿಕುಮಾರ್ ರವರು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಎನ್.ಆರ್. ಪುರ  ಪೊಲೀಸ್ ಠಾಣೆ.

ದಿನಾಂಕ:10-01-2022 ರಂದು ಪಿರ್ಯಾದಿ ಸೆಲ್ವಕುಮಾರ್ ಬಿನ್ ಪಿ.ಗಾಂದಿ ನಾಗಲಾಪುರ  ವಾಸಿ  ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು ದಿನಾಂಕ 06-01-2022 ರಂದು ಪಿರ್ಯಾದಿಯವರು  ತಮ್ಮ ಬಾಭ್ತು ಕೆಎ-18-ಇಇ-9291 ನಂಬರಿನ ಬೈಕ್ ನಲ್ಲಿ ಪಿರ್ಯಾದಿ ಮಗನನ್ನು ಅಸ್ಪತ್ರೆಗೆ ತೋರಿಸಲು ಎನ್.ಅರ್. ಪುರಕ್ಕೆ ಬಂದು  ಬೆಳಿಗ್ಗೆ 9-00 ಗಂಟೆಗೆ ಎನ್.ಆರ್. ಸರ್ಕಾರಿ ಅಸ್ಪತ್ರೆಗೆ ಬಳಿ ಬೈಕ್ ನಿಲ್ಲಿಸಿ ಅಸ್ಪತ್ರೆಗೆ ಒಳಗೆ ತೋರಿಸಿ ವಾಪಸ್ಸು ಬಂದು ನೋಡಲಾಗಿ ಬೈಕ್ ಕಾಣೆಯಾಗಿದ್ದು ಯಾರೋ ಕಳ್ಳರು ಬೈಕ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಬೈಕಿನ ಬೆಲೆ ಸುಮಾರು 22,000/- ರೂ ಗಳು ಅಗಿದ್ದು, ಈವರೆಗೂ ಹುಡುಕಿದರೂ ಪತ್ತೆಯಾಗಿಲ್ಲವೆಂದು  ಕಳ್ಳರನ್ನು  ಮತ್ತು ಕಳವುವಾಗಿರುವ ಬೈಕ್ ನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಎನ್.ಆರ್. ಪುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಕಡೂರು ಪೊಲೀಸ್ ಠಾಣೆ.

ದಿನಾಂಕ;10-01-2022 ರಂದು ಪಿರ್ಯಾದಿ ಸಚ್ಚಿನ್ ಬಳ್ಳೇಕೆರೆ ವಾಸಿ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ತಂಗಿ ರಂಜಿತ ಳು ದಿನಾಂಕ05-01-2022 ರಂದು ಬೆಳಿಗ್ಗೆ ಮನೆಯಲ್ಲಿದ್ದವಳು  ಸಂಜೆ ಪಿರ್ಯಾದಿ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಇಲ್ಲದೆ ಇದ್ದು , ಈ ವರೆಗೂ ಹುಡುಕಾಡಿದ್ದು ಪತ್ತೆಯಾಗದೇ ಇದ್ದು, ಕಾಣೆಯಾಗಿರುವ ತನ್ನ ತಂಗಿ ಚಹರೆ ರಂಜಿತಾ , 21 ವರ್ಷ, 5.1 ಅಡಿ ಎತ್ತರ, ಗೋದಿ ಮೈ ಬಣ್ಣ, ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಕನ್ನಡ ಬಾಷೆ ಮಾತನಾಡುತ್ತಾಳೆ. ಕಾಣೆಯಾಗಿರುವ ತನ್ನ ತಂಗಿ ರಂಜಿತಾಳನ್ನು ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಕಡೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 10-01-2022 08:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080