ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ

ಕಳಸ ಪೊಲೀಸ್ ಠಾಣೆ.

ದಿನಾಂಕ:10/03/2022 ರಂದು ಕಳಸ ಠಾಣಾ ಸರಹದ್ದಿನ ಮರಸಣಿಗೆ  ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿ ಸುಧಾಕರ ಬಿನ್ ಕೊರಗಪ್ಪ ಮಾವಿನಕೆರೆ ಕಳಸ ತಾಲ್ಲೋಕು ವಾಸಿ ಈತನನ್ನು ವಶಕ್ಕೆ ಪಡೆದುಕೊಂಡಿದ್ದು ಆರೋಪಿತನ ವಶದಲ್ಲಿದ್ದ 90 ಎಂ.ಎಲ್. ನ 40 ಟೆಟ್ರಾಪ್ಯಾಕ್ ಮದ್ಯದ ಬೆಲೆ 1405.20/- ರೂ ಅಗಿದ್ದು ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಹೆಚ್.ಕೆ. ಹರ್ಷವರ್ಧನ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಜ್ಜಂಫುರ ಪೊಲೀಸ್ ಠಾಣೆ.

ದಿನಾಂಕ:10/03/2022 ರಂದು ಅಜ್ಜಂಫುರ ಠಾಣಾ ಸರಹದ್ದಿನ  ಶಿವನಿ ಗ್ರಾಮದ ಕೆರೆ ಏರಿಯ ಹಿಂಭಾಗ ಕಲ್ಲೇನಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ  ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಮದ್ಯವನ್ನು ತೆಗೆದುಕೊಂಡು ಹೋಗುತ್ತಿದ್ದ ಗುರು ಬಿನ್ ಓಂಕಾರಯ್ಯ, ಅರಳಹಳ್ಳಿ ವಾಸಿ ಈತನನ್ನು ವಶಕ್ಕೆ ಪಡೆದುಕೊಂಡಿದ್ದು ಆರೋಪಿತನ ವಶದಲ್ಲಿದ್ದ 90 ಎಂ.ಎಲ್. ನ 33 ಟೆಟ್ರಾಪ್ಯಾಕ್  ಮದ್ಯದ  ಬೆಲೆ 1159/- ರೂ ಅಗಿದ್ದು ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅಜ್ಜಂಫುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಮಹಾಂತೇಶ್ ಜಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ. 

ಶೃಂಗೇರಿ ಪೊಲೀಸ್ ಠಾಣೆ.

ದಿನಾಂಕ:09/03/2022 ರಂದು ಪಿರ್ಯಾದಿ ಸುಧಾಕರ ಜಿ.ಬಿ. ಗುಬ್ಬಗೋಡು, ಗಂಡಘಟ್ಟ ಶೃಂಗೇರಿ ತಾಲ್ಲೋಕು ಇವರು ನೀಡಿದ ದೂರಿನಲ್ಲಿ ದಿನಾಂಕ;08/03/2022 ರಂದು ಪಿರ್ಯಾದಿರವರು ಮನೆಗೆ ಬೀಗ ಹಾಕಿಕೊಂಡು ಕೂಲಿಕೆಲಸಕ್ಕೆ ಹೋಗಿದ್ದು ಸಂಜೆ ವಾಪಸ್ಸು ಬಂದು ನೋಡಲಾಗಿ ಯಾರೋ ಕಳ್ಳರು ಮುಂಭಾಗದ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು  ಮನೆಯನ್ನು ಪ್ರವೇಶಿಸಿ ಮನೆಯಲ್ಲಿದ್ದ  21 ಗ್ರಾಂ ಚಿನ್ನದ ವಡವೆಗಳು 18,000/-ಹಾಗೂ 4,000/- ರೂ ನಗದು ಸೇರಿ ಒಟ್ಟು 22,000/- ರೂ ಬೆಲೆ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆಮಾಡಿ ಕಳುವಾಗಿರುವ ಸ್ವತ್ತನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:09/03/2022 ರಂದು ಪಿರ್ಯಾದಿ ಚಂದ್ರೇಗೌಡ ಬಿನ್ ತಿಮ್ಮೇಗೌಡ  ಕಟ್ಟೆತಿಮ್ಮನಹಳ್ಳಿ ಚಿಕ್ಕಮಗಳೂರು ತಾಲ್ಲೋಕು ಇವರು ನೀಡಿದ ದೂರಿನಲ್ಲಿ ದಿನಾಂಕ;04/03/2022 ರಂದು ಪಿರ್ಯಾದಿರವರು ತಮ್ಮ ದನದ ಕೊಟ್ಟಿಗೆಯಲ್ಲಿ ಕುರಿ ಮತ್ತು ಹಸುಗಳನ್ನು ಕಟ್ಟಿ ಬೀಗ ಹಾಕಿಕೊಂಡು ಬಂದಿದ್ದು  ದಿನಾಂಕ 05/03/2022 ರಂದು ಬೆಳಿಗ್ಗೆ  ನೋಡಲಾಗಿ ಯಾರೋ ಕಳ್ಳರು ಕೊಟ್ಟಿಗೆಗೆ ಹಾಕಿದ ಬೀಗವನ್ನು ಮುರಿದು  4 ಕುರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು  ಅವುಗಳ ಅಂದಾಜು ಬೆಲೆ ಸುಮಾರು 40,000/- ರೂ ಗಳಾಗಬಹುದೆಂದು ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆಮಾಡಿ ಕಳುವಾಗಿರುವ ಕುರಿಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಅಜ್ಜಂಫುರ ಪೊಲೀಸ್ ಠಾಣೆ.

ದಿನಾಂಕ 09/03/2022 ರಂದು ಪಿರ್ಯಾದಿ ಆರ್. ತಿಮ್ಮಪ್ಪ ಬಿನ್ ರಂಗಪ್ಪ ಇವರು ನೀಡಿದ ದೂರಿನಲ್ಲಿ ದಿನಾಂಕ 09/03/2022 ರಂದು ಪಿರ್ಯಾದಿ ಮಗ ಮನು ಆತನ ಸ್ನೇಹಿತರಾದ ತೇಜಸ್  ಇಬ್ಬರೂ ತೇಜಸ್ ರವರ ಬಿಳಿ ಬಣ್ಣದ ಹೋಂಡಾ ಸ್ಕೂಟರ್ ನಂಬರ್ ಕೆಎ-16-ಇಪಿ-7532 ರಲ್ಲಿ ಹೋಗುತ್ತಿದ್ದಾಗ ಸಂಜೆ ಸುಮಾರು 4.30 ಗಂಟೆ ಸಮಯದಲ್ಲಿ ಅಂತರಘಟ್ಟೆ ಕೆರೆ ಏರಿ ಮೇಲೆ ತೇಜಸ್ ನು ಕೆಎ-16-ಇಪಿ-7532 ರ ಸ್ಕೂಟರ್ ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯಲ್ಲಿ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಮೋಟಾರು ಸೈಕಲ್ ಅಯತಪ್ಪಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಿವಮಣಿ ರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಮನು ಮತ್ತು ತೇಜಸ್ ಬೈಕ್ ಸಮೇತ ಬಿದ್ದಿದ್ದರಿಂದ ಮನು ಗೆ ತಲೆಗೆ ತೀವ್ರತರವಾದ ಪೆಟ್ಟು ಬಿದ್ದು ತೇಜಸ್ ಮತ್ತು ಶಿವಮಣಿ ರವರಿಗೂ ಸಹ ಸಣ್ಣಪುಟ್ಟ ಪೆಟ್ಟಾಗಿದ್ದು, ಮನು ಅಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯದಲ್ಲಿ ಮೃತಪಟ್ಟಿದ್ದು ಅಪಘಾತಕ್ಕೆ ಕಾರಣನಾದ ಬೈಕ್ ಚಾಲಕ ತೇಜಸ್ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 10-03-2022 07:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080