ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಜಯಪುರ ಪೊಲೀಸ್ ಠಾಣೆ.

ದಿನಾಂಕ:10/04/2022 ರಂದು ಪಿರ್ಯಾದಿ ಶ್ರೀ ರವೀಂದ್ರ. ಎ.ಪಿ. ಬಿನ್  ಬಿನ್ ಪುಟ್ಟೇಗೌಡ, ವಾಸ ಶಿಡ್ಲೆ, ವೈಕುಂಠಪುರ ಗ್ರಾಮ ಶೃಂಗೇರಿ  ವಾಸಿ,  ಇವರು ನೀಡಿದ ದೂರಿನಲ್ಲಿ, ದಿನಾಂಕ:10/04/2022 ರಂದು ಪಿರ್ಯಾದಿಯ ಮಾವ ಮನೋಹರ ಮತ್ತು ಅವರ ಹೆಂಡತಿ ಜಯಲಕ್ಷ್ಮೀ ಮಗ ಅಭಿಷೇಕ್ ರವರೊಂದಿಗೆ, ಕೆಎ-51-ಎಂ-6268 ರ ವಾಗನ್ ಆರ್ ಕಾರಿನಲ್ಲಿ ಹರಿಹರಪುರಕ್ಕೆ ಹೋಗಿ, ವಾಪಾಸ್ ಮೂಡಿಗೆರೆಗೆ  ಬರುತ್ತಿರುವಾಗ,  ಕೊಪ್ಪ-ಜಯಪುರ ಮುಖ್ಯ ರಸ್ತೆಯಲ್ಲಿ ಅಭಿಷೇಕ್ ನು ಕಾರ್ ನ್ನು ಚಾಲನೆ ಮಾಡುತ್ತಿದ್ದು, ಕಾರನ್ನು ಅನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿದ ಪರಿಣಾಮ, ಜಯಪುರ ಕಟ್ಟೆಮನೆ ಸಮೀಪ ಕಾರು ಚಾಲಕನ ನಿಯಂತ್ರಣ ತಪ್ಪಿ ಒಂದು ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಜಯಲಕ್ಷ್ಮಿ ರವರ ಹಣೆಗೆ ಮುಖಕ್ಕೆ ತೀವ್ರ ಸ್ವರೂಪದ ಪೆಟ್ಟಾಗಿದ್ದು,  ಚಿಕಿತ್ಸೆಗೆ ಅಸ್ಪತ್ರಗೆ ಕರೆದುಕೊಂಡು ಹೋಗುವಾಗ, ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾರೆ. ಮನೋಹರ ರವರ ಎರಡೂ ಕಾಲುಗಳಿಗೆ ಪೆಟ್ಟಾಗಿ ರಕ್ತಗಾಯವಾಗಿರುತ್ತೆ.  ಅಪಘಾತ ಉಂಟು ಮಾಡಿದ ಕೆಎ-51-ಎಂ-6268 ರ ವಾಗನ್ ಆರ್ ಕಾರಿನ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು, ನೀಡಿದ ದೂರಿನ ಮೇರೆಗೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ನಿರ್ಲಕ್ಷತನದಿಂದ  ಸಾವು ಪ್ರಕರಣ

ಗೋಣಿಬೀಡು ಪೊಲೀಸ್ ಠಾಣೆ.

ದಿನಾಂಕ:10/04/2022 ರಂದು, ಪಿರ್ಯಾದಿ ಶ್ರೀಮತಿ ರೇಷ್ಮಾ ಕೊಂ ಮುಸ್ತಾಕ್ ಕೆ.ಎ.  ಕಸ್ಕೆಬೈಲು ಗ್ರಾಮ  ವಾಸಿ,  ಇವರು ನೀಡಿದ ದೂರಿನಲ್ಲಿ, ಪಿರ್ಯಾದಿ ಗಂಡ ಮುಸ್ತಾಕ್ ಕೆ.ಎ. ಕಸ್ಕೆಬೈಲು ವಾಸಿ ಅಶೋಕ ಇವರ ಹತ್ತಿರ ಟಿಂಬರ್ ಕೆಲಸ ಮಾಡಿಕೊಂಡಿದ್ದು, ದಿನಾಂಕ:09/04/2022 ರಂದು, ಪಿರ್ಯಾದಿಯ ಗಂಡ ಮುಸ್ತಾಕ್ ಕೆ.ಎ. ಆಶೋಕರವರೊಂದಿಗೆ ಟಿಂಬರ್ ಕೆಲಸಕ್ಕೆ, ಗೋಕಲ್ ಎಸ್ಟೇಟ್ ಗೆ ಹೋಗಿದ್ದು,  ಗೋಕುಲ್ ಎಸ್ಟೇಟ್ ನಲ್ಲಿ ಕಾಫಿ ತೋಟಕ್ಕೆ ಟಿಂಬರ್ ಕಡಿಯುವ ಕೆಲಸ ಮಾಡುತ್ತಿರುವಾಗ, ಅಶೋಕ ಮತ್ತು ತೋಟದ ಮಾಲೀಕರಾದ, ವಿಜಯಮ್ಮ ಮತ್ತು ಅವರ ಮಗ ಅವಿನ್ ಯಾವುದೇ ಮುಂಜಾಗ್ರತೆ ವಹಿಸಿದೆ, ಕೆಲಸ ಮಾಡಿಸುತ್ತಿದ್ದು, ಮರ ಕಡಿಯುವಾಗ ಮುಸ್ತಾಕ್ ನ ಮೇಲೆ ಮರ ಬಿದಿದ್ದು ಬಲವಾದ ಪೆಟ್ಟಾಗಿದ್ದು,  ಚಿಕಿತ್ಸೆಗೆ ಅಸ್ಪತ್ರಗೆ ಕರೆದುಕೊಂಡು ಹೋಗಿದ್ದು, ಮಂಗಳೂರಿನ ತೇಜಸ್ವಿನಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ, ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಪಿರ್ಯಾಧಿಯ ಗಂಡ ಮುಸ್ತಾಕ್ ರವರ ಸಾವಿಗೆ ಕಾರಣರದವರ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 10-04-2022 07:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080