ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ.

ಯಗಟಿ ಪೊಲೀಸ್ ಠಾಣೆ.

ದಿನಾಂಕ:10-05-2022 ರಂದು ಯಗಟಿ ಪೊಲೀಸ್ ಠಾಣಾ ಸರಹದ್ದಿನ ಕೆದಿಗೆರೆ ಗ್ರಾಮದಲ್ಲಿ ಸಾಕಮ್ಮ ಕೊಂ ಲೇಟ್ ಗುರುಸಿದ್ದಪ್ಪ ಕೆದಿಗೆರೆ ವಾಸಿ ಇವರು  ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಮದ್ಯವನ್ನು ಹಿರೆನಲ್ಲೂರಿನಿಂದ ಕೆದಿಗೆರೆ ಗ್ರಾಮಕ್ಕೆ ತೆಗೆದುಕೊಂಡು ಹೋಗುತ್ತಿದ್ದು ಅರೋಪಿತೆಯನ್ನು ವಶಕ್ಕೆ ಪಡೆದು ಅರೋಪಿತಳ ವಶದಲ್ಲಿ ಇದ್ದ 90 ಎಂ.ಎಲ್. ನ 45 ಮದ್ಯವನ್ನು ಅಮಾನತ್ತುಪಡಿಸಿಕೊಂಡಿದ್ದು, ಮದ್ಯದ ಅಂದಾಜು ಬೆಲೆ 1580/- ರೂ ಗಳಾಗಿರುತ್ತೆ. ಆರೋಪಿತನ ವಿರುದ್ದ ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಯಗಟಿ ಠಾಣಾ ಪಿಎಸ್ಐ ಶಶಿಕುಮಾರ್ ವೈ.ಎಸ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಗೋ ಸಾಗಾಣಿಕೆ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ:10-05-2022 ರಂದು ನಗರ ಪೊಲೀಸ್ ಠಾಣಾ ಸರಹದ್ದಿನ ಚಿಕ್ಕಮಗಳೂರು ನಗರದ ಶಂಕರಪುರ ಕೊಂಗನಾಟಮ್ಮ ದೇವಸ್ಥಾನದ ಹತ್ತಿರ ಅಕ್ರಮವಾಗಿ ಕೆಎ-18-ಸಿ-4650 ರ ಗೂಡ್ಸ್ ವಾಹನದಲ್ಲಿ 8 ವರ್ಷದ ಒಂದು ಹಸು ಮತ್ತು 1 ವರ್ಷದ ಕರುವನ್ನು ಚಿಕ್ಕಮಗಳೂರು ಗೌಡನಹಳ್ಳಿ ವಾಸಿ ವರದೇಗೌಡ ಬಿನ್ ಹುಚ್ಚೇಗೌಡ ಇವರು   ಸಿಕಂದರ್ , ಶಂಕರಪುರ ಚಿಕ್ಕಮಗಳೂರು ವಾಸಿ ಇವರಿಗೆ ದನವನ್ನು ಕಡಿಯಲು ಮಾರಾಟ ಮಾಡಲು ಸಾಗಾಣಿಕೆ  ಮಾಡುತ್ತಿದ್ದು  ಆರೋಪಿ ವರದೆಗೌಡನನ್ನು ವಶಕ್ಕೆ ಪಡೆದು  ಅರೋಪಿತನು ಹಸುಗಳನ್ನು ಸಾಗಿಸಲು ಉಪಯೋಗಿಸಿದ ಕೆಎ-18-ಸಿ-4650 ಗೂಡ್ಸ್ ವಾಹನ ಹಸುಗಳ ಸಮೇತ ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತರ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ನಗರ ಠಾಣಾ ಪಿಎಸ್ಐ ಲೋಹಿತ್ ಎಲ್.ಎಸ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಮನುಷ್ಯ ಕಾಣೆ  ಪ್ರಕರಣ.

ಕಡೂರು ಪೊಲೀಸ್ ಠಾಣೆ.

ದಿನಾಂಕ 10-05-2022 ರಂದು ಉಮೇಶ ವೈ. ಒ. ಬಿನ್ ಓಂಕಾರಪ್ಪ  ಯಳಗೊಂಡನಹಳ್ಳಿ ಕಡೂರು ವಾಸಿ ರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಹೆಂಡತಿ ರೇಖಾ  ತನ್ನ ಮಗ ಕಿಶೋರ ನೊಂದಿಗೆ ದಿನಾಂಕ;07-05-2022 ರಂದು ತವರು ಮನೆಗೆ ಹೋಗುತ್ತೇನೆಂದು ಹೋದವಳು ಮನೆಗೆ ಹೋಗದೇ ಕಾಣೆಯಾಗಿರುತ್ತಾರೆ. ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ರೇಖಾ ಕೋಂ ಉಮೇಶ 32 ವರ್ಷ, 5.4 ಅಡಿ ಎತ್ತರ, ಗೋದಿ ಮೈ ಬಣ್ಣ, ಸಾದಾರಣ ಮೈ ಕಟ್ಟು ಕಪ್ಪು ಕೆಂಪು ಮಿಶ್ರಿತ ಚೂಡಿದಾರ ಧರಿಸಿರುತ್ತಾರೆ. 2.] ಕಿಶೋರ ವೈ. ಯು. 6 ವರ್ಷ,  3.6 ಅಡಿ ಎತ್ತರ, ಕನ್ನಡ ಬಾಷೆ ಮಾತಾನಾಡುತ್ತಾನೆ. ಕಾಣೆಯಾಗಿರುವ ಹೆಂಡತಿ ರೂಪ ಮತ್ತು ನನ್ನ ಮಗ ಕಿಶೋರ ಇವರುಗಳನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ.

ಗೋಣಿಬೀಡು ಪೊಲೀಸ್ ಠಾಣೆ.

ದಿನಾಂಕ:09-05-2022 ರಂದು ಗೋಣಿಬೀಡು ಪೊಲೀಸ್ ಠಾಣಾ ಸರಹದ್ದಿನ ಕಿರುಗುಂದ ಗ್ರಾಮದಲ್ಲಿ ರಮೇಶ್ ಕೆ.ಎಲ್. ಬಿನ್ ಲೋಕೇಶ್ ಕಿರುಗುಂದ ವಾಸಿ ಈತನು ತಮ್ಮ ಬಾಬ್ತು ದಿನಸಿ ಆಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಅರೋಪಿಯನ್ನು ವಶಕ್ಕೆ ಪಡೆದು ಅರೋಪಿ ವಶದಲ್ಲಿ ಇದ್ದ 90 ಎಂ.ಎಲ್. ನ 26 ಟೆಟ್ರಾಪ್ಯಾಕ್ 180 ಎಂ.ಎಲ್.ನ 3 ಟೆಟ್ರಾಪ್ಯಾಕ್  ಮದ್ಯವನ್ನು ಅಮಾನತ್ತುಪಡಿಸಿಕೊಂಡಿದ್ದು, ಮದ್ಯದ ಅಂದಾಜು ಬೆಲೆ 937/- ರೂ ಗಳಾಗಿರುತ್ತೆ. ಆರೋಪಿತನ ವಿರುದ್ದ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಗೋಣಿಬೀಡು ಪಿಎಸ್ಐ ಧನಂಜಯ ಎಂ.ಆರ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಗೋಣಿಬೀಡು ಪೊಲೀಸ್ ಠಾಣೆ.

ದಿನಾಂಕ:09-05-2022 ರಂದು ಗೋಣಿಬೀಡು ಪೊಲೀಸ್ ಠಾಣಾ ಸರಹದ್ದಿನ ಕಿರುಗುಂದ ಗ್ರಾಮದಲ್ಲಿ ದಿನೇಶ್ ಕೆ.ವಿ. ಬಿನ್ ಲೇಟ್ ಬಸವಯ್ಯ ಕಿರುಗುಂದ ವಾಸಿ ಈತನು ತಮ್ಮ ಬಾಬ್ತು ದಿನಸಿ ಆಂಗಡಿಯ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಅರೋಪಿಯನ್ನು ವಶಕ್ಕೆ ಪಡೆದು ಅರೋಪಿ ವಶದಲ್ಲಿ ಇದ್ದ 90 ಎಂ.ಎಲ್. ನ 28 ಟೆಟ್ರಾಪ್ಯಾಕ್  ಮದ್ಯವನ್ನು ಅಮಾನತ್ತುಪಡಿಸಿಕೊಂಡಿದ್ದು, ಮದ್ಯದ ಅಂದಾಜು ಬೆಲೆ 783/- ರೂ ಗಳಾಗಿರುತ್ತೆ. ಆರೋಪಿತನ ವಿರುದ್ದ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಗೋಣಿಬೀಡು ಪಿಎಸ್ಐ ಧನಂಜಯ ಎಂ.ಆರ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ  ಪ್ರಕರಣ.

ಅಜ್ಜಂಪುರಪೊಲೀಸ್ ಠಾಣೆ.

ದಿನಾಂಕ 09-05-2022 ರಂದು ಬಸವರಾಜಪ್ಪ ಬಿನ್ ಕರಿಯಪ್ಪ, ಬಗ್ಗವಳ್ಳಿ ಅಜ್ಜಂಪುರ ವಾಸಿ ರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಹೆಂಡತಿ ರೂಪ ತನ್ನ ಇಬ್ಬರು ಮಕ್ಕಳಾದ ದಿಗಂತ್ ಮತ್ತು ತನುಶ್ರೀ, ಇವರೊಂದಿಗೆ ದಿನಾಂಕ;30-04-2022 ರಂದು ಶಿವನಿ ಜಾತ್ರೆಗೆ ಹೋದವಳು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ರೂಪ ಕೋಂ ಬಸವರಾಜಪ್ಪ 28 ವರ್ಷ, ಕೋಲುಮುಖ, 5 ಅಡಿ ಎತ್ತರ,  ಸ ಕನ್ನಡ ಭಾಷೆ ಮಾತನಾಡುತ್ತಾನೆ. ನೀಲಿ ಬಣ್ಣದ ಮತ್ತು ಕಪ್ಪು ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. 2.] ದಿಗಂತ್, 11 ವರ್ಷ, 3.1 ಅಡಿ ಎತ್ತರ, ಕನ್ನಡ ಬಾಷೆ ಮಾತಾನಾಡುತ್ತಾನೆ. . ಮನೆಯಿಂದ ಹೋಗುವಾಗ ಕೆಂಪು ಮತ್ತು ಕಪ್ಪು ಬಣ್ಣದ ಚೆಕ್ಸ್ ಚಡ್ಡಿ ಹಾಕಿರುತ್ತಾನೆ. 3.] ತನುಶ್ರೀ 8  ವರ್ಷ, 3 ಅಡಿ ಎತ್ತರ ಇರುತ್ತಾಳೆ, ಪಿಂಕ್ ಬಣ್ಣದ ಡ್ರಸ್ ಚೂಡಿದಾರ ಧರಿಸಿರುತ್ತಾಳೆ. ಕಾಣೆಯಾಗಿರುವ ಹೆಂಡತಿ ರೂಪ ಮತ್ತು ನನ್ನ ಮಕ್ಕಳಾದ ದಿಗಂತ್ ತನುಶ್ರೀ, ಇವರುಗಳನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

 

ಇತ್ತೀಚಿನ ನವೀಕರಣ​ : 10-05-2022 07:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080