ಅಭಿಪ್ರಾಯ / ಸಲಹೆಗಳು

ಅಕ್ರಮ ದನದ ಮಾಂಸ ಮಾರಾಟ ಪ್ರಕರಣ.

ನಗರ ಪೊಲೀಸ್ ಠಾಣೆ.

ದಿನಾಂಕ:10-06-2022 ರಂದು ನಗರ ಪೊಲೀಸ್ ಠಾಣಾ ಸರಹದ್ದಿನ ತಮಿಳು ಕಾಲೋನಿಯ ಮುನಿಯಮ್ಮ ಬೀದಿಯ ದೊಡ್ಡ ಚರಂಡಿ ಪಕ್ಕದಲ್ಲಿರುವ ಮಸೀದಿಯ ಪಕ್ಕದಲ್ಲಿರುವ ಕೇಂಬ್ರಿಡ್ಜ್ ಶಾಲೆಯ ಹಿಂಭಾಗದಲ್ಲಿ  ದನದ ಮಾಂಸವನ್ನು ಕಡಿದು ಮಾರಾಟ ಮಾಡುತ್ತಿದ್ದು, ದಾಳಿ ಮಾಡಿದಾಗ ಆರೋಫಿತರು 3 ಜನ ಓಡಿ ಹೋಗಿದ್ದು, ಆರೋಪಿತರು 2 ದನಗಳನ್ನು ಕಡಿದು ಚರ್ಮ ಸುಲಿದು ನೇತು ಹಾಕಿದ್ದು, ಸುಮಾರು 250/- ಕೆ.ಜಿ. ಮಾಂಸ, 2 ತಲೆಗಳು, 2 ಕೊಂಬುಗಳು, 8 ಚರ್ಮ ಸುಲಿದಿರುವ ಗೊರಸುಗಳನ್ನು ವಶಕ್ಕೆ ಪಡೆದು  ಆರೋಪಿತರಾದ ಅನ್ವರ್ ಬಿನ್ ಸಲೀಂ, ವಾಸ ತಮಿಳು ಕಾಲೋನಿ, ಸಂತೆ ಮೈದಾನ ಚಿಕ್ಕಮಗಳೂರು, 2] ಖಲೀಂ 3] ಸನಾ ಚಿಕ್ಕಮಗಳೂರು ವಾಸಿಗಳ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ನಗರ ಠಾಣಾ ಪಿಎಸ್ಐ ನಾಗೇಂದ್ರ ನಾಯ್ಕ, ಹೆಚ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

 

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ;10/06/2022 ರಂದು 09-15 ಗಂಟೆ ಸಮಯದಲ್ಲಿ ಪಿರ್ಯಾದಿ ಬಿ.ಜಿ. ವೆಂಕಟಸುಬ್ಬಯ್ಯ ಬಿನ್ ಲೇ; ಬಿ.ಬಿ. ಗೋಪಾಲಯ್ಯ, ವಾಸ ಕೋಟೆ, ಕಡೂರು ಟೌನ್ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ;10/06/2022 ರಂದು ಪಿರ್ಯಾದಿ ಮಗ ವೇಣುಗೋಪಾಲ್ ಈತನು ಶಾಹೀದ್ ರವರ ಬಾಬ್ತು ಕೆಎ-51-ಪಿ-5079 ಕಾರಿನಲ್ಲಿ  ಚಿಕ್ಕಮಗಳೂರಿಗೆ  ಹೋಗುತ್ತಿರುವಾಗ, ಲಕ್ಯಾ ಕ್ರಾಸ್ ಬಳಿ ಕಾರಿಗೆ ನಾಯಿ ಅಡ್ಡಬಂದಿದ್ದರಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಸುಮಾರು 6 ಅಡಿ ಅಳಕ್ಕೆ ಬಿದ್ದು ವೇಣುಗೋಪಾಲ್ ನ ತಲೆಗೆ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದು, ಕಾರಿನ ಚಾಲಕ ವೇಣುಗೋಪಾಲ್ ನ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ.

ನಿರ್ಲಕ್ಷತನದಿಂದ ಸಾವು  ಪ್ರಕರಣ

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ;09/06/2022 ರಂದು 19-30 ಗಂಟೆ ಸಮಯದಲ್ಲಿ ಪಿರ್ಯಾದಿ ಮಲ್ಲೇಶ ಬಿನ್ ಕುಪ್ಪಶೆಟ್ಟಿ, ವಾಸ ದ್ಯಾವಗೊಡನಹಳ್ಳಿ ಚಿಕ್ಕಮಗಳೂರು ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ;09/06/2022 ರಂದು ಪಿರ್ಯಾದಿ ಮಗ ಕಿರಣ್ ಬಿ.ಕೆ. ಈತನು ಅಜ್ಜಂಫುರ ಟೌನ್ ವಾಸಿಯಾದ ರಾಘವೇಂದ್ರ ಬಿನ್ ಹನುಮಂತಪ್ಪ ಇವರ ವಶದಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ 09/06/2022 ರಂದು 12.30 ಗಂಟೆ ಸಮಯದಲ್ಲಿ  ಅಜ್ಜಂಪುರ ಟೌನ್ ಶ್ರೀರಾಮ ರಸ್ತೆ ಕೋಟೆ ಹರಿವಾಣ ಸಮಾಜದ ಬಿಲ್ಡಿಂಗ್ ನಲ್ಲಿ ಮೂರು ಅಂತಸ್ತಿನ ಟ್ರಸ್ ಹಾಗೂ ಸೀಟ್ ಕಬ್ಬಿಣದ ಹ್ಯಾಂಗಲ್ ಜೋಡಿಸುವಾಗ ಹೋಗುತ್ತಿರುವಾಗ, ಪಿರ್ಯಾದಿ ಮಗ ಕಿರಣ್ ಮತ್ತು ಇನ್ನೊಬ್ಬ ಕೆಲಸ ಮಾಡುತ್ತಿದ್ದು ಗುತ್ತಿಗೆದಾರ ರಾಘವೇಂದ್ರ ಯಾವುದೇ ಮುಂಜಾಗ್ರತೆ ತೆಗೆದುಕೊಳ್ಳದೆ ನಿರ್ಲಕ್ಷತೆಯಿಂದ ದೇಹಕ್ಕೆ ಬೆಲ್ಟ್ ಹಾಗೂ ಹಗ್ಗವಿಲ್ಲದೆ ಕೆಲಸ ಮಾಡಲು ದಮಕಿ ಹಾಕಿ ನನ್ನ ಮಗನ ಸಾವಿಗೆ ಕಾರಣರಾಗಿದ್ದು, ಅವರ ವಿರುದ್ದ ಕ್ರಮ ಕೈಗೊಳ್ಳಲು  ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 10-06-2022 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080