ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ ಪ್ರಕರಣ.

ಜಯಪುರ ಪೊಲೀಸ್ ಠಾಣೆ,

ದಿನಾಂಕ 10-10-2021 ರಂದು ಪಿರ್ಯಾದಿ ವೆಂಕಟೇಶ ರವರ ಸ್ನೇಹಿತ ರಂಗಯ್ಯ ಮತ್ತು ನುರ್ಜಾಮಲ್ ರವರು ಕೆಎ-18-ವಿ-2476 ನಂಬರಿನ ಬೈಕಿನಲ್ಲಿ  ಜಯಪುರಕ್ಕೆ ಹೋಗಲು ಕಟ್ಟೆಮನೆಯಿಂದ ಮುಂದೆ ಜೇಡಿಕೆರೆ ಬಳಿ ಟಾರು ರಸ್ತೆಯಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಕೆಎ-03-ಎಂ.ಪಿ.6349 ನೇ ಮಾರುತಿ ರಿಟ್ಜ್ ಕಾರ್  ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ರಂಗಯ್ಯ ಮತ್ತು ನುರ್ಜಾಮಲ್ ನವರಿಗೆ ಪೆಟ್ಟಾಗಿದ್ದು , ರಂಗಯ್ಯನವರು ಚಿಕಿತ್ಸೆ ಫಲಕಾರಿಯಯಾಗದೇ ಮೃತಪಟ್ಟಿರುತ್ತಾರೆ. ಕಾರಿನ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ.

ಕೊಪ್ಪ ಪೊಲೀಸ್ ಠಾಣೆ,

ದಿನಾಂಕ 09-10-2021 ರಂದು ಪಿರ್ಯಾದಿ ಮದ್ದಾಸ್ ಮಹಮದ್ ಇವರು ತಮ್ಮ ಬಾಬ್ತು ಕೆಎ-53- ಹೆಚ್.ಇ. 2156 ನಂಬರಿನ ಟಿವಿಎಸ್, ಎಂ, ಟಾರ್ಕಾ ಸ್ಕೂಟಿಯನ್ನು  ಮದ್ದಾಸ್ ಬ್ಯುಸಿನೆಸ್ ಸೆಂಟರ್ ನ ಹಿಂಭಾಗದಲ್ಲಿರುವ ಮನೆಯ ಹತ್ತಿರದಲ್ಲಿ  ನಿಲ್ಲಿಸಿದ್ದು ನಂತರ ರಾತ್ರಿ ಹೋಗಿ ನೋಡಲಾಗಿ ಯಾರೋ ಕಳ್ಳರು ಸ್ಕೂಟಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ವರೆಗೂ ಪತ್ತೆ ಅಗಿಲ್ಲವೆಂದು ಕಳ್ಳತನವಾಗಿರುವ ತನ್ನ ಬಾಬ್ತು ಸ್ಕೂಟಿಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ  ದೂರಿನ ಮೇರೆಗೆ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಬಸವನಹಳ್ಳಿ ಪೊಲೀಸ್ ಠಾಣೆ,

ದಿನಾಂಕ 10-10-2021 ರಂದು ಚಿಕ್ಕಮಗಳೂರು ನಗರದ ಉಪ್ಪಳಿ ಹಿರೇಕೊಳಲೆ ರಸ್ತೆ ವಾಸಿ ಪಿರ್ಯಾದಿ ಅಬ್ದುಲ್ ರೆಹಮಾನ್ ರವರು ನೀಡಿದ ದೂರಿನಲ್ಲಿ ದಿನಾಂಕ 04/10/2021 ರಂದು ತಮ್ಮ ಬಾಬ್ತು ಕೆಎ-18 ಬಿ 2533 ನಂಬರಿನ ಅಟೋರಿಕ್ಷಾವನ್ನು ತಮ್ಮ ಮನೆ  ಮುಂದೆ ರಾತ್ರಿ ನಿಲ್ಲಿಸಿದ್ದು, ದಿನಾಂಕ 05/10/2021 ರಂದು ಬೆಳಿಗ್ಗೆ ನೋಡಲಾಗಿ ಯಾರೋ ಕಳ್ಳರು ಅಟೋರಿಕ್ಷಾವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ವರೆಗೂ ಪತ್ತೆ ಅಗಿಲ್ಲವೆಂದು ಕಳ್ಳತನವಾಗಿರುವ ತನ್ನ ಬಾಬ್ತು ಅಟೋರಿಕ್ಷಾವನ್ನು ಪತ್ತೆ ಮಾಡಿಕೊಡುವಂತೆ ನೀಡಿದ  ದೂರಿನ ಮೇರೆಗೆ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ

ಬೀರೂರು ಪೊಲೀಸ್ ಠಾಣೆ,

ದಿನಾಂಕ 09-10-2021 ರಂದು ಬೀರೂರು ಠಾಣಾ ಸರಹದ್ದಿನ ದೇವರಹಳ್ಳಿ ಗ್ರಾಮದ ನೀಲಗಿರಿ ಪ್ಲಾಂಟೇಷನ್ ನಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 1. ಸೋಮಶೇಖರ ಬಿನ್ ನಂಜುಂಡಪ್ಪ 2. ಹರೀಶ್ ಬಿ.ಎಂ. ಬಿನ್ ಲೇಟ್ ಮಹಾದೇವಪ್ಪ 3, ನಾಗರಾಜ ಬಿನ್ ರುದ್ರಪ್ಪ 4. ಅರುಣ್ ಕುಮಾರ್ ಬಿನ್ ಎನ್. ರುದ್ರಪ್ಪ 5. ಶಿವಣ್ಣ ಬಿನ್ ತಿಮ್ಮಯ್ಯ 6. ಪರಮೇಶ್ವರಪ್ಪ ಬಿನ್ ಹನುಮಣ್ಣ 7. ಗೋಪಿ ಬಿನ್ ಸಿದ್ದಪ್ಪ  ರವರನ್ನು ವಶಕ್ಕೆ ಪಡೆದು, ಆರೋಪಿತರು ಇಸ್ಪೀಟ್ ಆಡಲು ಬಳಸಿದ 47,600/- ರೂ ನಗದು ಹಣ , 52 ಇಸ್ಪೀಟ್ ಎಲೆಗಳು , ಕೆಂಪು ಬಣ್ಣದ ಪಂಚೆ ಮತ್ತು ಎಮರ್ಜೆನ್ಸಿ ಲೇಟ್ ನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ  ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ವಿಶ್ವನಾಥ ಎನ್. ಸಿ., ಪ್ರೊ. ಪಿ.ಎಸ್.ಐ. ಶ್ರೀ ಗುರು ಸಜ್ಜನ್ , ಹೆಚ್.ಸಿ. 366 ರಫೀಕ್, ಪಿ.ಸಿ. 502 ಶಿವಕುಮಾರ್ , ಪಿ.ಸಿ. 59 ರೇಣುಕಾ ಪ್ರಸಾದ್, ಪಿ.ಸಿ. 652 ಮಹೇಂದ್ರ ಕುಮಾರ್ ಮತ್ತು ಪಿ.ಸಿ. 498 ಶ್ರೀಧರ ರವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 10-10-2021 07:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080