ಅಭಿಪ್ರಾಯ / ಸಲಹೆಗಳು

ಅಕ್ರಮ ದನದ ಮಾಂಸ ಮಾರಾಟ ಪ್ರಕರಣ

ನಗರ ಪೊಲೀಸ್ ಠಾಣೆ

ದಿನಾಂಕ 10-11-2021 ರಂದು ಮದ್ಯಾಹ್ನ ಚಿಕ್ಕಮಗಳೂರು ನಗರ ಸಂತೆಮೈದಾನದ ಎ,ಕೆ, ಕಾಲೋನಿಯಲ್ಲಿ ಹಸನ್ ಎಂಬುವರ ಮನೆಯಲ್ಲಿ ಜಾವೀದ್ ಬಿನ್ ಫಜಲೂರ್ ರೆಹಮಾನ್ ಎ,ಕೆ. ಕಾಲೋನಿ ಚಿಕ್ಕಮಗಳೂರು ನಗರ ವಾಸಿ ಈತನು ಅಕ್ರಮವಾಗಿ ದನದ ಮಾಂಸವನ್ನು ಮಾರಾಟ ಮಾಡುತ್ತಿದ್ದವನನ್ನು ವಶಕ್ಕೆ ಪಡೆದು ಆತನು ಅಕ್ರಮವಾಗಿ ಹೊಂದಿದ್ದ  30 ಕೆ.ಜಿ. ದನದ ಮಾಂಸ, ಒಂದು ಕಬ್ಬಿಣದ ಕತ್ತಿ, ಒಂದು ಕೆ,ಜಿ.ಯ ಮತ್ತು 500 ಗ್ರಾಂ ತೂಕದ ಬಟ್ಟುಗಳು, ಹಾಗೂ ಒಂದು ತಕ್ಕಡಿಯನ್ನು ಅಮಾನತ್ತುಪಡಿಸಿಕೊಂಡು ಬಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ದೇವರಾಜ್ ಎಸ್. ಬಿರಾದಾರ್  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ 10-11-2021 ರಂದು ಪಿರ್ಯಾದಿ ಪಿ. ಸುನೀಲ್ ಕುಮಾರ್ , ಚಂದ್ರಶೇಖರಪುರ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ 09-11-2021 ರಂದು ರಾತ್ರಿ 7-55 ಗಂಟೆ ಸಮಯದಲ್ಲಿ ಪಿರ್ಯಾದಿಯವರ ತಂದೆ ಎಂ.ಎನ್. ಪ್ರಭಾಕರ್ ರವರು  ಕೆಎ-02-ಇ ಎಂ 6907 ರ ಬೈಕಿನಲ್ಲಿ ಹುಲಿಕೆರೆಯಿಂದ ಕೇತುಮಾರನಹಳ್ಳಿಗೆ ಹೋಗುವ ಟಾರು ರಸ್ತೆಯಲ್ಲಿ ಹೋಗುತ್ತಿರುವಾಗ ಎದುರುಗಡೆ ಯಿಂದ ಬಂದ ಯಾವುದೋ ಬೈಕಿನ ಸವಾರನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎಂ.ಎನ್. ಪ್ರಭಾಕರ್ ರವರು  ಚಾಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಸಿ ನಿಲ್ಲಿಸದೇ ಹೋಗಿದ್ದು ಎಂ.ಎನ್. ಪ್ರಭಾಕರ್ ರವರಿಗೆ ತಲೆಗೆ ತೀವ್ರ ಪೆಟ್ಟು ಬಿದ್ದು ಮೃತಪಟ್ಟಿರುವುದಾಗಿ, ಅಪಘಾತಪಡಿಸಿದ ಅಪರಿಚಿತ ಬೈಕ್ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಬಾಳೂರು ಪೊಲೀಸ್ ಠಾಣೆ.

ದಿನಾಂಕ:10-11-2021 ರಂದು ಬಾಳೂರು ಠಾಣಾ ಸರಹದ್ದಿನ ಬಿಳಗಲಿ ಗ್ರಾಮದ ವಾಸಿ ರಾಜೇಂದ್ರ  ಬಿನ್ ಮಂಜಪ್ಪ  ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ಮಗಳು ರಕ್ಷಿತಾ ಇವಳು ದಿನಾಂಕ 06-11-2021 ರಂದು ಬಿಳಗಲಿ ಗ್ರಾಮದ ಮನೆಯಿಂದ  ಹೋದವಳು ಈವರೆಗೂ ಮನೆಗೆ ವಾಪಾಸ್ಸು ಬಂದಿರುವುದಿಲ್ಲ. ಎಲ್ಲಾ ಹುಡುಕಾಡಿದರೂ ಈ ವರೆಗೂ ಮಗಳು ಪತ್ತೆ ಅಗದೆ ಇದ್ದು ನನ್ನ ಮಗಳ ಚಹರೆ ಕು;ರಕ್ಷಿತಾ, ದುಂಡುಮುಖ, ಎಣ್ಣೆಗೆಂಪುಮೈ ಬಣ್ಣ, 4.5 ಅಡಿ ಎತ್ತರ, ತೆಳ್ಳನೆಯ ಶರೀರ, ತುಳು ಮತ್ತು ಕನ್ನಡ ಭಾಷೆ ಮಾತನಾಡುತ್ತಾಳೆ. ಇವಳನ್ನು ಪತ್ತೆ ಮಾಡಿ ಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಜಯಪುರ ಪೊಲೀಸ್ ಠಾಣೆ.

ದಿನಾಂಕ:10-11-2021 ರಂದು ಜಯಪುರ ಠಾಣಾ ಸರಹದ್ದಿನ ಬಸರಿಕಟ್ಟೆ ಹೊನ್ನೆಕುಡಿಗೆ ಗ್ರಾಮದ ಪಿರ್ಯಾದಿ ಲಕ್ಷ್ಮೀ ಕೊಂ ಸಂತೋಷ ಕುಮಾರನು ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ಗಂಡ ಸಂತೋಷ ಕುಮಾರ ರವರು ದಿನಾಂಕ 12-07-2021 ರಂದು ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವರು ಸಂಜೆಯಾದರು ಮನೆಗೆ ವಾಪಾಸ್ಸು ಬಾರದೇ ಇದ್ದು ಎಲ್ಲಾ ಹುಡುಕಾಡಿದರೂ ಈ ವರೆಗೂ ತನ್ನ ಗಂಡ ಪತ್ತೆ ಅಗದೆ ಇದ್ದು ಗಂಡನನ್ನು ಪತ್ತೆ ಮಾಡಿ ಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಎನ್.ಆರ್. ಪುರ ಪೊಲೀಸ್ ಠಾಣೆ.

ದಿನಾಂಕ:10-11-2021 ರಂದು ಎನ್.ಅರ್. ಪುರ ಠಾಣಾ ಸರಹದ್ದಿನ ಭಾಗ್ಯರಾಮ ಲೇ ಔಟ್ ಇಂದಿರಾನಗರ ನ,ರಾ,ಪುರ  ಟೌನ್  ವಾಸಿ ಆನಂದಪ್ಪ ಬಿನ್ ಮಲ್ಲೇಶಪ್ಪ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ಹೆಂಡತಿ ಸುವರ್ಣ, 30 ವರ್ಷ,  ರವರು  ಬೆಳಿಗ್ಗೆ 10.00 ಗಂಟೆ  ಸಮಯದಲ್ಲಿ ಅಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಮದ್ಯಾಹ್ನ ವದರೂ ಮನೆಗೆ  ಬಾರದೇ ಇದ್ದು  ಎಲ್ಲಾ ಹುಡುಕಾಡಿದರೂ ಈ ವರೆಗೂ ತನ್ನ ಹೆಂಡತಿ ಸುವರ್ಣ ಳು ಪತ್ತೆ ಅಗದೆ ಇದ್ದು ತನ್ನ ಹೆಂಡತಿಯನ್ನು ಪತ್ತೆ ಮಾಡಿ ಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕೊಪ್ಪ ಪೊಲೀಸ್ ಠಾಣೆ

ದಿನಾಂಕ:09-11-2021 ರಂದು ಪಿರ್ಯಾದಿ ಶ್ರೀಕಾಂತ್ ಬಿನ್ ಮರಿಯಪ್ಪ ಮೇಲಿನ ಕ್ವಾರಿ, ಕೊಪ್ಪ ಇವರು ನೀಡಿದ ದೂರಿನಲ್ಲಿ ದಿನಾಂಕ:02-10-2021 ರಂದು ನನ್ನ ಮಗ ರಾಘವೇಂದ್ರ 27 ವರ್ಷ, ಈತನು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ಹೋದವನು ಈವರೆಗೂ ಮನೆಗೆ ವಾಪಾಸ್ಸು ಬಂದಿರುವುದಿಲ್ಲ. ಎಲ್ಲಾ ಹುಡುಕಾಡಿದರೂ ಈ ವರೆಗೂ ಮಗನು ಪತ್ತೆ ಅಗದೆ ಇದ್ದು ನನ್ನ ಮಗ ರಾಘವೇಂದ್ರನನ್ನು  ಪತ್ತೆ ಮಾಡಿ ಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 10-11-2021 07:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080