ಅಭಿಪ್ರಾಯ / ಸಲಹೆಗಳು

ಅಕ್ರಮ ಗೋ ಮಾಂಸ ಸಾಗಾಣಿಕೆ ಪ್ರಕರಣ

ಬಾಳೆಹೊನ್ನೂರು  ಪೊಲೀಸ್ ಠಾಣೆ

 ದಿನಾಂಕ:11/07/2021 ರಂದು  ಬಾಳೆಹೊನ್ನೂರು  ಠಾಣಾ ಪೊಲೀಸ್ ಕಾನ್ಸ್ಟೇಬಲ್  ಗೌಡ  ಬಿ.ಎಲ್. ರವರು ನೀಡಿದ ದೂರಿನಲ್ಲಿ ದಿನಾಂಕ:11/07/2021 ರಂದು ಬೆಳಿಗ್ಗೆ 5-00 ಗಂಟೆಯ ಸಮಯದಲ್ಲಿ  ಬಾಳೆಹೊನ್ನೂರು ಪ್ರಕಾಶ್ ಸರ್ಕಲ್ ಚೆಕ್ ಪೊಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಮಾಗುಂಡಿ ಕಡೆಯಿಂದ ಕೆಎ-05-ಎಂ.ಎಂ.- 4371  ಕಾರು ಬಂದಿದ್ದು ಕಾರನ್ನು ಅನುಮಾನ ಬಂದು ಚೆಕ್ ಮಾಡಲಾಗಿ ಕಾರಿನಲ್ಲಿ 3 ಪ್ಲಾಸ್ಟಿಕ್ ಮೂಟೆಗಳಲ್ಲಿ ದನದ ಕಡಿದ ಮಾಂಸವನ್ನು ಸುಮಾರು 50 ಕೆ.ಜಿ. ಯಷ್ಟು ಇರುವುದು ಕಂಡು ಬಂದಿದ್ದು,  ಕಾರಿನ ಚಾಲಕನ ಹೆಸರು ಕೇಳಲಾಗಿ ತಬ್ರೀಜ್ ಖಾನ್ ಬಿನ್ ಲೇಟ್ ಗಫಾರ್ ಖಾನ್ ವಾಸ ಬಾಳೆಹೊನ್ನೂರು ಎಂದು ತಿಳಿಸಿದ್ದು, ಸದರಿ ಮಾಂಸವನ್ನು ಮಾಗುಂಡಿ ವಾಸಿ ಇಸ್ಮಾಯಿಲ್ ಎಂಬುವರಿಂದ ಮಾರಾಟ ಮಾಡಲು ತಂದಿರುವುದಾಗಿ ತಿಳಿಸಿದ್ದು,. ಅರೋಪಿಯನ್ನು ಮತ್ತು  ದನದ ಮಾಂಸ ಹಾಗೂ ವಾಹನವನ್ನು ವಶಕ್ಕೆ ಪಡೆದು ಬಾಳೆಹೊನ್ನೂರು ಠಾಣೆಯಲ್ಲಿ ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಎನ್. ಆರ್. ಪುರ ಪೊಲೀಸ್ ಠಾಣೆ.

ದಿನಾಂಕ11/07/2021 ರಂದು ಎನ್. ಆರ್. ಪುರ ಠಾಣಾ ಸರಹದ್ದಿನ ಹಿಳ್ಳುವಳ್ಳಿ ಗ್ರಾಮದ ಇಂದಿರಾ ನಗರದ ವಾಸಿ ಕಣ್ಣನ್ ಇವರ ನೀಡಿದ ದೂರಿನಲ್ಲಿ ಪಿರ್ಯಾದಿಯವರ ಮಗಳು ದಿವ್ಯಾ ಎನ್. ಆರ್. ಪುರ ಕಾಲೇಜಿನಲ್ಲಿ ಅಂತಿಮ ವರ್ಷ ದ ಬಿ.ಎ. ವ್ಯಾಸಾಂಗ ಮಾಡುತ್ತಿದ್ದು, ದಿನಾಂಕ 10/07/2021 ರಂದು ಬೆಳಿಗ್ಗೆ9-45 ಗಂಟೆಗೆ  ಕಾಲೇಜಿಗೆ ಹೋಗುತ್ತೆನೆ ಎಂದು ಹೇಳಿ ಮನೆಯಿಂದ ಹೋದವಳು ಮತ್ತೆ ಕಂಪ್ಯೂಟರ್ ಕ್ಲಾಸ್ ಹೋಗಿ ಬರುತ್ತೆನೆಂದು ಹೋದವಳು  ವಾಪಾಸ್ಸು ಮನೆ ಬಾರದೇ ಇದ್ದು ದಿವ್ಯಾಳ ಪೋನ್ ಸಹ ಸ್ವೀಚ್ ಅಫ್ ಅಗಿದ್ದು ನನ್ನ  ಮಗಳನ್ನು ಎಲ್ಲಾ ಕಡೆ ಹುಡುಕಾಡಿದ್ದು ಸಹ ಈ ವರೆಗೂ  ನನ್ನ ಮಗಳು ದಿವ್ಯಾ ಪತ್ತೆ ಅಗಿರುವುದಿಲ್ಲ. ಅದುದರಿಂದ  ಕಾಣೆಯಾಗಿರುವ ನನ್ನ ಮಗಳನ್ನು ಪತ್ತೆ ಮಾಡಿ ಕೊಡುವಂತೆ ಪಿರ್ಯಾದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ

ಸಂಚಾರ ಪೊಲೀಸ್ ಠಾಣೆ.

 ದಿನಾಂಕ 10.07.2021 ರಂದು 17.00 ಗಂಟೆ ಪಿರ್ಯಾದಿ ಚಂದ್ರಪ್ಪ ರವರ ತಮ್ಮ ಚಂದ್ರು ರವರು ತಮ್ಮ ಬಾಬ್ತು  ಕೆಎ-18-ಎ-5254 ಅಟೋ ವನ್ನು ಹಾಲೇನಹಳ್ಳಿಗೆ ಬಾಡಿಗೆ ಎಂದು ಚಾಲನೆ ಮಾಡಿಕೊಂಡು ಹೋಗಿ ವಾಪಾಸ್ಸು ಬರುತ್ತಿರುವಾಗ ರಾಮನಹಳ್ಳಿಯ ಮಲ್ಲಂದೂರು ಪ್ರಾವಿಷನ್ ಸ್ಟೋರ್ ಮುಂಭಾಗದ ರಸ್ತೆಯಲ್ಲಿ ನಾಯಿ ಅಡ್ಡ ಬಂದಿದ್ದರಿಂದ ಚಾಲಕ ಚಂದ್ರು ಆಟೋವನ್ನು ದುಡುಕತನ ಮತ್ತು ನಿರ್ಲಕ್ಷತನದಿಂದ  ಚಾಲನೆ ಮಾಡಿಕೊಂಡು ಬಂದು ಏಕಾಏಕಿ ಬ್ರೇಕ್ ಹಾಕಿ ಅಟೋ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಆಟೋದಲ್ಲಿದ್ದ ಚಂದ್ರು 55 ವರ್ಷ ರವರಿಗೆ ತೀವ್ರತರವಾದ ಪೆಟ್ಟಾಗಿ ಅಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 11-07-2021 07:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080