ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ.

ಬೀರೂರು ಪೊಲೀಸ್ ಠಾಣೆ.

ದಿನಾಂಕ 10-08-2021 ರಂದು ಶ್ರೀಮತಿ.ಶಾಹಿನಾ ನೆಹರು ನಗರ , ಬೀರೂರು ವಾಸಿರವರು ನೀಡಿದ ದೂರೇನೆಂದರೆ ನನ್ನ ಮಗನಾದ ಇಮ್ರಾನ್ ಪಾಷಾ, 24 ವರ್ಷರವರು ಗಾರೆಕೆಲಸ ಮಾಡಿಕೊಂಡಿದ್ದು, ದಿನಾಂಕ 31-07-2021 ರಂದು ಬೆಳಿಗ್ಗೆ ಗಾರೆಕೆಲಸಕ್ಕೆಂದು ಹೇಳಿ ಹೋದವರು ವಾಪಾಸ್ ಮನೆಗೆ ಬಂದಿರುವುದಿಲ್ಲ .ಸಂಬಂಧಿಕರ ಮನೆಗಳಲ್ಲಿ ಹಾಗೂ ಸ್ನೇಹಿತರುಗಳಲ್ಲಿ ವಿಚಾರ ಮಾಡಿದ್ದು ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಆಧ್ದರಿಂದ ಕಾಣೆಯಾಗಿರುವ ಇಮ್ರಾನ್ ಪಾಷಾನ್ನನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ದೂರಿನ ಮೇರೆಗೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು.

ನಗರ ಪೊಲೀಸ್ ಠಾಣೆ.

ದಿನಾಂಕ 10-08-2021 ರಂದು ಮದ್ಯಾಹ್ನ 04-00 ಗಂಟೆ ಸಮಯದಲ್ಲಿ ಸಂತೋಷ ಸಹಾಯಕ ನಗರ ಯೋಜನಾಸದಸ್ಯರು, ಶಿವಕುಮಾರ ನಗರ ಯೋಜನಾಸದಸ್ಯರು ಹಾಗೂ ಅಂಬಾ ಟೈಪಿಸ್ಟ್ ರವರು ಚಿಕ್ಕಮಗಳೂರು ನಗರದ  ಕಲ್ಯಾಣ ನಗರದಲ್ಲಿರುವ ಪ್ರಾಧಿಕರದ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಚಂದೇಗೌಡ ಬಿನ್ ಮಲ್ಲೇಗೌಡ, ಬೈಪಾಸ್ ವಾಸಿರವರು ಕಛೇರಿಗೆ ಬಂದು ಸಿಬ್ಬಂದಿಗಳಿಗೆ ಅಚಾಚ್ಯವಾಗಿ  ಬೈದು ,ಸರ್ಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದು , ಚಂದ್ರೇಗೌಡರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ನಗರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  

 ಮಾರಣಾಂತಿಕ ರಸ್ತೆ ಅಪಘಾತ ಪ್ರರಕಣ.

ಬೀರೂರು ಪೊಲೀಸ್ ಠಾಣೆ.

ದಿನಾಂಕ 10-08-2021 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ದೀಪಕ್ ರವರು ತಮ್ಮ ತಂದೆ ಬಸವರಾಜುರವರನ್ನು ಕೆಎ-16 ಆರ್-2349 ಬೈಕಿನಲ್ಲಿ ಕೂರಿಸಿಕೊಂಡು ಶಿವಪುರದಿಂದ ದೊಡ್ಡಬೋಕಿಕೆರೆಗೆ ಹೋಗುವ ಹೊಂಗೆಹಳ್ಳದ ಸಮೀಪ ಬರುತ್ತಿರುವಾಗ ಜೋಡಿಬೋಕಿಕೆರೆ ಕಡೆಯಿಂದ ಬಂದ ಟ್ರಾಕ್ಟರ್ ಚಾಲಕ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದೀಪಕ್ ರವರು ಚಾಲನೆ ಮಾಡುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಸಿದಪರಿಣಾಮ ದೀಪಕ್ ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಬಸವರಾಜುರವರಿಗೆ  ಎಡಗಾಲಿಗೆ ಪೆಟ್ಟಾಗಿದ್ದು ಟ್ರಾಕ್ಟರ್ ಚಾಲಕನ ವಿರುದ್ದ ಕ್ರಮಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 11-08-2021 07:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080