ಅಭಿಪ್ರಾಯ / ಸಲಹೆಗಳು

ಕಳ್ಳತನ  ಪ್ರಕರಣ

ಸಖರಾಯಪಟ್ಟಣ ಪೊಲೀಸ್ ಠಾಣೆ.

 ದಿನಾಂಕ:11-01-2022 ರಂದು ಸಖರಾಯಪಟ್ಟಣ ಠಾಣಾ ಸರಹದ್ದಿನ ದೇವನೂರು ಗ್ರಾಮದ ಶ್ರೀಮತಿ ಪಾರ್ವತಮ್ಮ ಡಿ.ಎಸ್.  ಅಂಗನವಾಡಿಯ  ಕಾರ್ಯಕರ್ತೆ ರವರು ನೀಡಿದ ದೂರಿನಲ್ಲಿ ದಿನಾಂಕ 24-12-2012 ರಂದು ಅಂಗನವಾಡಿಯ ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ; 25-12-2021 ರಂದು  ನೋಡಿದಾಗ ಯಾರೋ ಕಳ್ಳರು ದಿನಾಂಕ:24/12/2021 ರ ರಾತ್ರಿ ವೇಳೆಯಲ್ಲಿ ಬೀಗ ಮುರಿದು ಅಂಗನವಾಡಿಯಲ್ಲಿ ಇಟ್ಟಿದ್ದ 3 ಗ್ಯಾಸ್ ಸಿಲೆಂಡರ್ ಮತ್ತು ದಿನಸಿ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಕಳುವಾಗಿರುವ ಸ್ವತ್ತಿನ ಮೌಲ್ಯ ಸುಮಾರು 14,120 ರೂ ಅಗಿದ್ದು ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ವಸ್ತುಗಳನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಎನ್.ಆರ್. ಪುರ ಪೊಲೀಸ್ ಠಾಣೆ.

 ದಿನಾಂಕ;11-01-2022 ರಂದು ಪಿರ್ಯಾದಿ ಪಿ.ಜೆ. ಎಲಿಯಾಸ್ ಬಿನ್ ಪಿ.ಟಿ. ಜಾನ್ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ಬಾಭ್ತು ಗುಬ್ಬಿಗಾ ಗ್ರಾಮದ ಸರ್ವೆ ನಂ 16 ರಲ್ಲಿ ಇರುವ 2 ಎಕರೆ ರಬ್ಬರ್ ತೋಟದಲ್ಲಿ ದಿನಾಂಕ:22-12-2021 ರಂದು ರಬ್ಬರ್ ತೋಟದ ಹಾಲನ್ನು ಕರೆದು 300 ರಬ್ಬರ್ ಶೀಟ್ ಗಳನ್ನು ಒಣಗಿಸಲು ಹಾಕಿದ್ದು ದಿನಾಂಕ;23-12-2021 ರಂದು ಬೆಳಿಗ್ಗೆ ನೋಡಲಾಗಿ ಯಾರೋ ಕಳ್ಳರು ರಾತ್ರಿ ಸಮಯದಲ್ಲಿ 300 ಶೀಟ್ ರಬ್ಬರ್ ನ್ನು ಕಳವು ಮಾಡಿಕೊಂಡು ಹೋಗಿದ್ದು,  ಅವುಗಳ ಬೆಲೆ ಸುಮಾರು 35,000 ರೂ ಅಗಿದ್ದು ಕಳವು ಮಾಡಿದ ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ರಬ್ಬರ್ ಶಿಟ್ ಗಳನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಎನ್. ಆರ್. ಪುರ  ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ;11-01-2022 ರಂದು ಪಿರ್ಯಾದಿ ಈರಪ್ಪ ಬಿನ್ ಬೊಬ್ಬಯ್ಯ ವಾಸ ತುದಿಯಾಲ ಮಾಕೋನಹಳ್ಳಿ ವಾಸಿ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ಮಗಳ ಗಂಡನ ಸಹೋದರಿ ಮಗಳು  ಸುಕೃತ  ಈಗ್ಗೆ 8 ದಿನಗಳ ಹಿಂದೆ ತಮ್ಮ ಮನೆಗೆ ಬಂದಿದ್ದು, ದಿನಾಂಕ:10-01-2022 ರಂದು ಮದ್ಯಾಹ್ನ 1-30 ಗಂಟೆ ಯಲ್ಲಿ ಮನೆಯಲ್ಲಿದ್ದವಳು ಇಲ್ಲೇ ಬರುತ್ತೇನೆಂದು ಹೇಳೀ ಮನೆಯಿಂದ ಹೊರಗಡೆ ಹೋದವಳು ಇಲ್ಲಿವರೆಗೂ ಮನೆಗೆ ವಾಪಾಸ್ಸು ಬಾರದೇ ಇದ್ದು, ಈ ವರೆಗೂ ಹುಡುಕಾಡಿದ್ದು ಪತ್ತೆಯಾಗದೇ ಇದ್ದು, ಕಾಣೆಯಾಗಿರುವ ಸುಕೃತ ಚಹರೆ ಸುಕೃತ, ಬಿನ್   ಲಿಂಗಣ್ಣಗೌಡ 18 ವರ್ಷ, 5.3 ಅಡಿ ಎತ್ತರ, ಕೆಂಪು ಬಣ್ಣದ ಟಾಪ್ ಕಪ್ಪು ಬಣ್ಣದ ಚೂಡಿದಾರ ಪ್ಯಾಂಟ್ ಧರಿಸಿರುತ್ತಾಳೆ. ಕಾಣೆಯಾಗಿರುವ ತನ್ನ ಸುಕೃತಳನ್ನು ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಮೂಡಿಗೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

 

ಇತ್ತೀಚಿನ ನವೀಕರಣ​ : 11-01-2022 09:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080