ಅಭಿಪ್ರಾಯ / ಸಲಹೆಗಳು

ಅಕ್ರಮ ಕಳ್ಳಭಟ್ಟಿ ಮದ್ಯ ಮಾರಾಟ ಪ್ರಕರಣ

ಅಲ್ದೂರು ಪೊಲೀಸ್ ಠಾಣೆ.

ದಿನಾಂಕ:11-02-2022 ರಂದು ಅಲ್ದೂರು ಠಾಣಾ ಸರಹದ್ದಿನ ಗುಣಿಗದ್ದೆ ಗ್ರಾಮ ವಾಸಿ ಸುಂದರ  ಬಿನ್ ಗುರುವ   ಎಂಬುವನು ಅಕ್ರಮವಾಗಿ ಕಳ್ಳಭಟ್ಟಿ ಮದ್ಯವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದು ಅರೋಪಿಯನ್ನು ವಶಕ್ಕೆ ಪಡೆದು ಆರೋಪಿ ವಶದಲ್ಲಿ 4 ಲೀಟರ್ ನಷ್ಟು ಕಳ್ಳಭಟ್ಟಿ ಮದ್ಯ ಅಂದಾಜು ಬೆಲೆ 500/- ರೂ ಅಗಿದ್ದು ಮಧ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು  ಅಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶಿವರುದ್ರಮ್ಮ ಎಸ್.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಳ್ಳತನ  ಪ್ರಕರಣ

ಬಸವನಹಳ್ಳಿ ಪೊಲೀಸ್ ಠಾಣೆ.

ದಿನಾಂಕ:11-02-2022 ರಂದು ಬಸವನಹಳ್ಳಿ ಠಾಣಾ ಸರಹದ್ದಿನ ಗೌರಿ ಕಾಲುವೆ ವಾಸಿ ಹೆಚ್.ಜೆ. ಮಧು ಇವರು ನೀಡಿದ ದೂರಿನಲ್ಲಿ ದಿನಾಂಕ:10/02/2022 ರಂದು ಪಿರ್ಯಾದಿಯವರು ತಮ್ಮ ಬಾಬ್ತು ಕೆಎ-18-ಎ-3021 ಅಟೋ ರಿಕ್ಷಾವನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದು, ದಿನಾಂಕ;11/02/2022 ರಂದು ಬೆಳಿಗ್ಗೆ ನೋಡಲಾಗಿ ಮನೆಯ ಮುಂದೆ ನಿಲ್ಲಿಸಿದ್ದ ಆಟೋ ರೀಕ್ಷಾವನ್ನು ಅಂದಾಜು ಬೆಲೆ 60,000/- ರೂ ಅಗಿದ್ದು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಅಟೋರೀಕ್ಷಾವನ್ನು ಕಳವು ಮಾಡಿದ ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಅಟೋರೀಕ್ಷಾವನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಬಸವನಹಳ್ಳಿ ಪೊಲೀಸ್ ಠಾಣೆ.

ದಿನಾಂಕ:11-02-2022 ರಂದು ಬಸವನಹಳ್ಳಿ ಠಾಣಾ ಸರಹದ್ದಿನ ರಾಮನಹಳ್ಳಿ ವಾಸಿ ಚಂದನ ಇವರು ನೀಡಿದ ದೂರಿನಲ್ಲಿ ದಿನಾಂಕ:10/02/2022 ರಂದು ಪಿರ್ಯಾದಿಯವರು ತಮ್ಮ ಮನೆಯ ಬೀಗ ಹಾಕಿಕೊಂಡು ಕುಂದಾಪುರಕ್ಕೆ ಹೋಗಿದ್ದು  ದಿನಾಂಕ;11/02/2022 ರಂದು ಬೆಳಿಗ್ಗೆ 10.30 ಗಂಟೆಗೆ ಕುಂದಾಪುರದಿಂದ ನೋಡಲಾಗಿ  ಮರದ ಬಾಗಿಲನ್ನು ಯವುದೋ ಆಯುಧದಿಂದ ಮುರಿದು ಮನೆಗೆ ನುಗ್ಗಿ ಬೆಡ್ ರೂಂ ವಾಲ್ ರೂಫ್ ತೆಗೆದು 50,000/-ರೂ ನಗದು, 20 , 1/2  ಗ್ರಾಂ ಚಿನ್ನದ ಅಭರಣಗಳು, 465 ಗ್ರಾಂ ತೂಕದ ಬೆಳ್ಳಿ ಅಭರಣಗಳನ್ನು ಒಟ್ಟು 1,40,000/-ರೂ ಗಳ ಬೆಲೆಬಾಳುವ ನಗದು ಆಭರಣಗಳನ್ನು   ಕಳ್ಳತನ ಮಾಡಿಕೊಂಡು ಹೋಗಿದ್ದು  ಕಳವು ಮಾಡಿದ ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಸ್ವತ್ತುಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ನಗರ ಪೊಲೀಸ್ ಠಾಣೆ.

ದಿನಾಂಕ:10-02-2022 ರಂದು ನಗರ ಠಾಣಾ ಸರಹದ್ದಿನ ದಂಟರಮಕ್ಕಿ ವಾಸಿ ಕುಮಾರಸ್ವಾಮಿ ಡಿ.ಎ. ಬಿನ್ ಲೇಟ್ ಅಜ್ಜೇಗೌಡ ಇವರು ನೀಡಿದ ದೂರಿನಲ್ಲಿ ದಿನಾಂಕ:10/02/2022 ರಂದು ಪಿರ್ಯಾದಿಯವರು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ವಾಪಾಸ್ಸು ಬಂದು ನೋಡಿದಾಗ ಮನೆಯನ್ನು ಯಾರೋ ಕಳ್ಳರು ಕೀ ಯಿಂದ ಬೀಗ ತೆಗೆದು ಮನೆಯ  ಪ್ರವೇಶಿಸಿ ಮನೆಯ ವಾರ್ಡ್ ರೂಪ್ ಡ್ರಾ ನ ಕೀಯನ್ನು ತೆಗೆದುಕೊಂಡು ಡ್ರಾ ದಲ್ಲಿ ಇಟ್ಟಿದ್ದ 92 ಗ್ರಾಂ ತೂಕದ ಚಿನ್ನದ ವಡವೆಗಳು, 60 ಗ್ರಾಂ ತೂಕದ  ಬೆಳ್ಳಿಯ ವಸ್ತುಗಳು ಹಾಗೂ 36,700/- ರೂ ನಗದು ಹಣವನ್ನು ಒಟ್ಟು ಸ್ವತ್ತಿನ ಮೌಲ್ಯ 6,09,200/-ಅಗಿದ್ದ್ದು  ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಕಳವು ಮಾಡಿದ ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಸ್ವತ್ತುಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 11-02-2022 07:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080